ಜಗತ್ತಿಗೆ ಬಂದ ಮೊದಲ ಮನುಷ್ಯನೇ ಪ್ರಥಮ ಪ್ರವಾದಿ: ಅಕ್ಬರ್ ಅಲಿ

  • ಜಗತ್ತಿಗೆ ಬಂದ ಮೊದಲ ಮನುಷ್ಯನೇ ಪ್ರಥಮ ಪ್ರವಾದಿ
  • ‘ಪ್ರವಾದಿ ಮೊಹಮ್ಮದ್‌ ಅವರನ್ನು ಅರಿಯೋಣ’ ಸೀರತ್‌ ಅಭಿಯಾನದಲ್ಲಿ ಜನಾಬ್‌ ಅಕ್ಬರ್‌ ಅಲಿ ಅಭಿಮತ
The first man who came into the world was the first prophet rav

ಶಿರಾಳಕೊಪ್ಪ(ಅ.19) : ಜಗತ್ತು ಮನುಷ್ಯನಿಗಾಗಿ ನಿರ್ಮಾಣ ಆಗಿದೆ. ಮನುಷ್ಯ ಈ ಜಗತ್ತಿಗೆ ಬರುವ ಮೊದಲೇ ನಿರ್ಮಾಣವಾಗಿದ್ದು, ಅನಂತರ ದೇವರು ಮನುಷ್ಯನನ್ನು ನಿರ್ಮಾಣ ಮಾಡಿದ್ದು, ನಂತರ ಮನುಷ್ಯರಿಂದಲೇ ದೇವರು ಪ್ರವಾದಿಗಳನ್ನು ಆಯ್ಕೆ ಮಾಡಿದರು ಎಂದು ಕರ್ನಾಟಕ ಜಮಾಅತæ ಇಸ್ಲಾಮಿ ಹಿಂದ್‌ ಕಾರ್ಯದರ್ಶಿ ಜನಾಬ್‌ ಅಕ್ಬರ್‌ ಅಲಿ ಉಡುಪಿ ಹೇಳಿದರು.

Lumpy skin disease : ಶಿವಮೊಗ್ಗ ಗಡಿ ಭಾಗದಲ್ಲಿ ಕಟ್ಟೆಚ್ಚರ

ಶಿರಾಳಕೊಪ್ಪದ ಹಜರತ್‌ ಉಮರ್‌ ಫಾರೂಕ್‌ ಸಭಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ‘ಪ್ರವಾದಿ ಮೊಹಮ್ಮದ್‌ ಅವರನ್ನು ಅರಿಯೋಣ’ ಎಂಬ ಸೀರತ್‌ ಅಭಿಯಾನದ ಪ್ರಮುಖ ಭಾಷಣಕಾರರಾಗಿ ಮಾತನಾಡಿದ ಅವರು ಪ್ರವಾದಿ ಮೊಹಮದ್‌ ಅವರು ಇಸ್ಲಾಂಮಿನ ಸ್ಥಾಪಕರಲ್ಲ. ಅವರು ಇಸ್ಲಾಂಮಿನ ಕೊನೆಯ ಕೊಂಡಿ ಆಗಿದ್ದರು ಎಂದರು.

ಜಗತ್ತಿಗೆ ಬಂದ ಮೊದಲ ಮನುಷ್ಯನೇ ಪ್ರಥಮ ಪ್ರವಾದಿಗಳು. ಜಗತ್ತಿನಲ್ಲಿ ಆಯಾಯ ಕಾಲದಲ್ಲಿ ಜಗಳವಾಡುವ ಕಚ್ಚಾಡುವ ಜನರನ್ನು ತಿದ್ದಲಿಕ್ಕೆ ಪ್ರವಾದಿಗಳು ಬರುತ್ತಾರೆ. ಜಗತ್ತಿನಲ್ಲಿ ಸಾಕಷ್ಟುಜನಬರುತ್ತಾರೆ ಹೋಗುತ್ತಾರೆ, ಹೋದವರು ಪುನಃ ಮತ್ತೆ ಬರುವುದಿಲ್ಲ. ಇರುವ ಸಮಯದಲ್ಲಿ ನಾವು ಒಳ್ಳೆಯವರಾಗಿ ಉತ್ತಮ ಕೆಲಸ ಮಾಡಿಕೊಂಡು ಎಲ್ಲರೂ ತನ್ನವರೇ ಎಂದು ಪ್ರೀತಿಸಬೇಕು. ಆಗ ಜೀವನ ಸಾರ್ಥಕವಾಗುತ್ತದೆ ಎಂದ ಅವರು, ಈ ಜಗತ್ತು ಸತ್ಯವನ್ನು ಜನರಿಗೆ ತೋರಿಸುತ್ತದೆ. ಜಗತ್ತಿನಲ್ಲಿ 800 ಕೋಟಿ ಜನರಿದ್ದಾರೆ. ಭೂಮಿಯಲ್ಲಿ ಜನರಿಗೆ ಏನುಬೇಕೋ ಅದೆಲ್ಲವೂ ಇದೆ ಎಂದು ಹೇಳಿದರು.

ಮುಖ್ಯ ಅತಿಥಿ, ಪಟ್ಟಣದ ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪಾ ಹಾಲೇಶ್‌ ಮಾತನಾಡಿ, ಬಸವಣ್ಣನವರ ವಚನ ಸಾಹಿತ್ಯ ಹಾಗೂ ಪ್ರವಾದಿ ಮಹಮದ್‌ ಅವರ ನುಡಿಮುತ್ತುಗಳು ಒಂದೇ ಅಥÜರ್‍ ಬರುವಂತಿವೆ. ಭಗವದ್‌ ಗೀತೆ, ಬೈಬಲ್‌, ಕುರ್‌ಆನ್‌ ಎಲ್ಲ ಧರ್ಮಗಳ ಸಾರವೂ ಒಂದೇ. ನಾವು ಅವುಗಳನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಒಂದೇ ಎಂದು ಒಟ್ಟಾಗಿ ಬಾಳಬೇಕು ಎಂದರು.

ಮಂಗನ ಕಾಯಿಲೆ ಲಸಿಕೆ ಉತ್ಪಾದನೆ ಸ್ಥಗಿತ, ಆತಂಕ

ಕದಂಬ ಪ್ರಥಮ ದಜೆÜರ್‍ ಕಾಲೇಜಿನ ಉಪನ್ಯಾಸಕ ವಿಜಯಕುಮಾರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧರ್ಮ ಧರ್ಮಗಳ ಮಧ್ಯೆ ಬಹಳಷ್ಟುಕಂದಕಗಳು ಉಂಟಾಗಿವೆ. ಅವುಗಳನ್ನು ನಿವಾರಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಹಿಂದೆÜಂದಿಗಿಂತಲೂ ಈಗ ಹೆಚ್ಚಿನ ಅವಶ್ಯಕತೆ ಇದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ ಮಾಜಿ ವಲಯ ಸಂಚಾಲಕ ಬಿ.ಚಮನ್‌ ಮಿಯಾ ಸಾಬ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ನಿವೃತ್ತ ಶಿಕ್ಷಕ ಜನ್ನು ಇದ್ದರು. ಸಲೀಂ ಉಲ್ಲಾ ಸ್ವಾಗತಿಸಿ, ಜಿಯಾ ಉಲ್ಲಾ ನಿರೂಪಿಸಿದರು.

Latest Videos
Follow Us:
Download App:
  • android
  • ios