Asianet Suvarna News Asianet Suvarna News

ಕೇಂದ್ರ ಸರ್ಕಾರದ ನಡೆ ಜನವಿರೋಧಿಯಾಗಿದೆ : ಸಿಪಿಎಂ

ಕೇಂದ್ರ ಸರ್ಕಾರದ ನಡೆಗಳು ಜನವಿರೋಧಿಯಾಗಿದೆ ಎಂದು ಸಿಪಿಎಂ ರಾಜ್ಯ ಕಾರ್‍ಯದರ್ಶಿ, ಮಂಡಳಿ ಸದಸ್ಯ ಸೈಯದ್ ಮುಜೀಬ್‌ ಅಭಿಪ್ರಾಯಪಟ್ಟರು.

The central government's move is anti-people snr
Author
First Published Oct 16, 2023, 7:51 AM IST

 ತುಮಕೂರು : ಕೇಂದ್ರ ಸರ್ಕಾರದ ನಡೆಗಳು ಜನವಿರೋಧಿಯಾಗಿದೆ ಎಂದು ಸಿಪಿಎಂ ರಾಜ್ಯ ಕಾರ್‍ಯದರ್ಶಿ, ಮಂಡಳಿ ಸದಸ್ಯ ಸೈಯದ್ ಮುಜೀಬ್‌ ಅಭಿಪ್ರಾಯಪಟ್ಟರು.

ಅವರು ಸಿಪಿಎಂ ಪಕ್ಷದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ಸರ್ಕಾರಗಳು ಕೃಷಿ ಕಾಯಿದೆಗಳನ್ನು ಜಾರಿಗೆ ತರುವ ಮುನ್ನ ರೈತರಹಿತಾಸಕ್ತಿಯನ್ನು ಅದೈತೆಯಾಗಿ ಪರಿಗಣಿಸಬೇಕು ಎಂದರು.

ಬಡಜನತೆಗ ಜಿ.ಎಸ್. ಟಿ ಹೊರೆಯಾಗಿ, ದೇಶ- ವಿದೇಶಿ ಕಾರ್ಪೋರೇಟ್‌ ಗಳಿಗೆ, ಬಂಡವಾಳಗಾರರಿಗೆ 2.14 ಲಕ್ಷ ಕೋಟಿ ರು. ಬ್ಯಾಂಕ್ ಸಾಲ ಮನ್ನ ಮಾಡಲಾಗಿದೆ. ಮತ್ತೊಂದು ಕಡೆಯಲ್ಲಿ ಆರಣ್ಯ ಕಾಯಿದೆ- ಗಣಿ ಕಾಯಿದೆಗಳಿಗೆ , ಕಡಲ ಕಿರಾರೆಗಳನ್ನು ಅಭಿವೃದ್ದಿಗಳಲ್ಲಿ ಹೆಸರಲ್ಲಿ ದೇಶದ ಅಸ್ತಿ ಖಾಸಗಿ ಬಂಡವಾಳಗಾರರ ಲೂಟಿಗೆ ಅವಕಾಶ ಮಾಡಿ ಕೊಟ್ಟು ಕೇಂದ್ರ ಸರ್ಕಾರದ ನಡೆಗಳು ಜನ ವಿರೋಧಿಯಾಗಿದೆ ಎಂದರು

ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಬಿ.ಉಮೇಶ ಮಾತನಾಡಿ, ಡಾ.ಸ್ವಾಮಿನಾಥನ್ ವರದಿ ಜಾರಿ ಆಗಬೇಕು. ಕೃಷಿ ನೀತಿ ಬದಲಾಗಬೇಕು, ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರಿಗೆ ಬಡ್ಡಿ ರಹಿತ ಸಾಲ ಸಿಗುವಂತಾಗಬೇಕು ಎಂದರು.

ನಗರ ಸಮಿತಿ ಸದಸ್ಯ ಲೋಕೇಶ್‌ ಮಾತನಾಡಿ, ಕೇಂದ್ರ-ರಾಜ್ಯಗಳಲ್ಲಿ ಖಾಲಿ ಇರುವ ಉದೋಗ್ಯಗಳ ಶೀಘ್ರ ಭರ್ತಿಮಾಡಬೇಕು. ಸರ್ಕಾರ ನುಡಿದಂತೆ ನಿರುದ್ಯೋಗ ಭತ್ಯೆ ಜಾರಿಗೆ ತರಬೇಕು ಎಂದರು.

ಜಿಲ್ಲಾ ಕಾರ್‍ಯದರ್ಶಿ ಎನ್.ಕೆ.ಸುಬ್ರಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ಕಳೆಪೆಯಾಗಿರುವದಕ್ಕೆ ತಾಜಾ ಉದಾರಹಣೆ ರಸ್ತೆಗಳು. ರಸ್ತೆ ಕುಸಿಯುತ್ತಿರುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ನಗರ ಸಮಿತಿ ಸದಸ್ಯ ಶಹಾತಜಾ, ಸಿ.ಅಜ್ಜಪ್ಪ ಮುನಾಫ್‌ ಉಪಸ್ಥಿರಿದ್ದರು. ರಂಗಾಧಮಯ್ಯ ಸ್ವಾಗತಿಸಿ, ಖಲೀಲ್ ವಂದಿಸಿದರು.

ಕೇಂದ್ರಕ್ಕೆ ಸುಪ್ರಿಂನಿಂದ ನೋಟಿಸ್

ನವದಹೆಲಿ(ಅ.14): ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಚುನಾವಣೆಗೆ ಆಗುತ್ತಿರುವ ಅಡೆ ತಡೆಗಳ ಬಗ್ಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ಡಬ್ಲ್ಯುಎಫ್‌ಐ ಚುನಾವಣೆಗೆ ನೀಡಿರುವ ತಡೆ ತೆರವುಗೊಳಿಸುವಂತೆ ಐಒಎ ನೇಮಿತ ತಾತ್ಕಾಲಿಕ ಸಮಿತಿಯು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಅಭಯ್‌ ಓಕಾ ಹಾಗೂ ಪಂಕಜ್‌ ಮಿತ್ತಲ್‌ ಅವರಿದ್ದ ಪೀಠ, ವಿಳಂಬದ ಬಗ್ಗೆ ನ.3ರ ಮೊದಲು ಉತ್ತರಿಸುವಂತೆ ಕೇಂದ್ರ ಸರ್ಕಾರ, ಹರ್ಯಾಣ ಕುಸ್ತಿ ಹಾಗೂ ಒಲಿಂಪಿಕ್‌ ಸಂಸ್ಥೆಗೆ ನೋಟಿಸ್‌ ನೀಡಿತು. ಈಗಾಗಲೇ ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ನಿಗದಿಯಾಗಿದ್ದ ಡಬ್ಲ್ಯುಎಫ್‌ಐ ಚುನಾವಣೆ 3 ಬಾರಿ ಮುಂದೂಡಿಕೆಯಾಗಿದೆ.

ರಾಷ್ಟ್ರೀಯ ಅಥ್ಲೆಟಿಕ್ಸ್‌ ಕೂಟ: ರಾಜ್ಯದ ಆರ್ಯಾಗೆ ಕಂಚು

ಬೆಂಗಳೂರು: ಇಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಲಾಂಗ್‌ ಜಂಪ್‌ ಪಟು ಆರ್ಯಾ ಕಂಚಿನ ಪದಕ ಗೆದ್ದಿದ್ದಾರೆ. ಶುಕ್ರವಾರ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಆರ್ಯಾ 7.65 ಮೀ. ದೂರಕ್ಕೆ ಜಿಗಿದು 3ನೇ ಸ್ಥಾನಿಯಾದರು. ಇದೇ ವೇಳೆ ಪುರುಷರ ಜಾವೆಲಿನ್‌ನಲ್ಲಿ ರಾಜ್ಯದ ಡಿ.ಪಿ. ಮನು ಫೈನಲ್‌ಗೇರಿದ್ದಾರೆ. ಸರ್ವಿಸಸ್‌ ಪರ ಆಡುತ್ತಿರುವ ಅವರು ಅರ್ಹತಾ ಸುತ್ತಿನಲ್ಲಿ 80.67 ಮೀ. ದೂರ ಎಸೆದು ಮೊದಲ ಸ್ಥಾನ ಪಡೆದರು. ಇನ್ನು ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಸಿಂಚಲ್‌ 58.94 ಸೆಕೆಂಡ್‌ಗಳಲ್ಲಿ ಕ್ರಮಿಸಿ ಫೈನಲ್‌ ಪ್ರವೇಶಿಸಿದರು. ಅವರು ರೈಲ್ವೇಸ್‌ ತಂಡ ಪ್ರತಿನಿಧಿಸುತ್ತಿದ್ದಾರೆ.

ಮೋದಿ ಸ್ಟೇಡಿಯಂನಲ್ಲಿ ಇಂಡೋ-ಪಾಕ್ ಕದನ; ಮೈದಾನಕ್ಕೆ ಕಳೆ ಹೆಚ್ಚಿಸಿದ ತೆಂಡುಲ್ಕರ್-ಅನುಷ್ಕಾ ಎಂಟ್ರಿ..!

ನಾಳೆಯಿಂದ ಧಾರವಾಡದಲ್ಲಿ ಅಂ.ರಾ. ಟೆನಿಸ್ ಟೂರ್ನಿ

ಧಾರವಾಡ: ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಶನ್‌(ಐಟಿಎಫ್‌)ನ ವಿಶ್ವ ಟೆನಿಸ್‌ ಟೂರ್‌ ಪುರುಷರ ಸಿಂಗಲ್ಸ್‌ ಮತ್ತು ಡಬಲ್ಸ್‌ ಪಂದ್ಯಾವಳಿ ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ಅ. 15 ರಿಂದ 22ರವರೆಗೆ ನಡೆಯಲಿದೆ. 17 ವರ್ಷಗಳ ನಂತರ ನಗರದಲ್ಲಿ ಅಂ.ರಾ. ಟೂರ್ನಿ ನಡೆಯಲಿದ್ದು, 20 ರಾಷ್ಟ್ರಗಳ 44 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇತ್ತೀಚೆಗೆ ಏಷ್ಯನ್‌ ಗೇಮ್ಸ್‌ನ ಡಬಲ್ಸ್‌ನಲ್ಲಿ ಪದಕ ಗೆದ್ದ ರಾಮ್‌ಕುಮಾರ್‌, ದಿಗ್ವಿಜಯ್‌ ಸಿಂಗ್‌ ಸೇರಿ ಭಾರತದ 12 ಆಟಗಾರರು ಕಣಕ್ಕಿಳಿಯಲಿದ್ದಾರೆ.

Follow Us:
Download App:
  • android
  • ios