Asianet Suvarna News Asianet Suvarna News

ರಾಜ್ಯಾಂಗ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಬದಲಾದ ಕೇಂದ್ರ : ಮಹದೇವಪ್ಪ

ರಾಜ್ಯಾಂಗ ಮಾರ್ಗದ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಕೇಂದ್ರ ಸರ್ಕಾರವು ಬದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

The center that left the state administration and turned into a religious council: Mahadevappa snr
Author
First Published Jan 14, 2024, 12:17 PM IST | Last Updated Jan 14, 2024, 12:17 PM IST

  ಮೈಸೂರು :  ರಾಜ್ಯಾಂಗ ಮಾರ್ಗದ ಆಡಳಿತ ತೊರೆದು ಧಾರ್ಮಿಕ ಮಂಡಳಿಯಾಗಿ ಕೇಂದ್ರ ಸರ್ಕಾರವು ಬದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಟೀಕಿಸಿದ್ದಾರೆ.

ಸಂವಿಧಾನದ ಆಶಯಕ್ಕೆ ಪೂರಕವಾಗಿ ರಾಜ್ಯಾಂಗ ಬದ್ಧವಾಗಿ ಆಡಳಿತ ನಡೆಸಬೇಕಾದ ಕೇಂದ್ರ ಸರ್ಕಾರವು, ಧಾರ್ಮಿಕ ಸಂಸ್ಥೆಯೊಂದರ ಆಡಳಿತ ಮಂಡಳಿಯಾಗಿ ಬದಲಾಗಿರುವುದು ಸಂವಿಧಾನ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಮೌಲ್ಯವನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವದ ಆಶಯದ ವಿರುದ್ಧದ ನಡೆಯಾಗಿದೆ ಎಂದು ಅವರು ಖಂಡಿಸಿದ್ದಾರೆ.

ಅತಿರೇಕದ ಧಾರ್ಮಿಕತೆಯನ್ನು ಆಚರಿಸುತ್ತಿರುವ ಸರ್ಕಾರವು ರಾಜ್ಯಾಂಗಬದ್ಧ ವ್ಯವಸ್ಥೆಯನ್ನು ಅರಿಯುವಲ್ಲಿ ಸಂಪೂರ್ಣ ಸೋತಿದೆ. ಧಾರ್ಮಿಕತೆ ಎಂಬುದು ವ್ಯಕ್ತಿಯೋರ್ವನ ಐಚ್ಛಿಕ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಕೆಲವರು ಮಂದಿರಗಳಿಗೆ ಹೋಗುತ್ತಾರೆ, ಇನ್ನೂ ಕೆಲವರು ಮಸೀದಿಗೆ, ಮತ್ತೆ ಕೆಲವರು ಚರ್ಚ್, ಬೌದ್ಧ ಸ್ಥೂಪಗಳಿಗೆ ತೆರಳುತ್ತಾರೆ. ಇತ್ತೀಚಿಗೆ ಬಾಬಾ ಸಾಹೇಬರ ದೀಕ್ಷಾಭೂಮಿಗೂ ಹೆಚ್ಚಿನ ಜನರು ತೆರಳುತ್ತಿರುವುದನ್ನು ನಾವು ಕಾಣಬಹುದು ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ಒಬ್ಬರ ಐಚ್ಛಿಕ ವಿಷಯವಾದ ಧಾರ್ಮಿಕತೆಯನ್ನು ರಾಜಕೀಯ ಪರಿಧಿಯ ಒಳಗೆ ತಂದು, ಧರ್ಮವನ್ನೂ ರಾಜಕೀಯದ ಲಾಭಕ್ಕಾಗಿ ಬಳಸಿಕೊಳ್ಳುವ ಇವರ ಸಂವಿಧಾನ ವಿರೋಧಿ ಕೆಲಸವನ್ನು ಪ್ರಜಾಪ್ರಭುತ್ವವನ್ನು ಪ್ರೀತಿಸುವ ಎಲ್ಲರೂ ವಿರೋಧಿಸಬೇಕು. ಚುನಾವಣೆಗಳು ಅಭಿವೃದ್ಧಿ ಮತ್ತು ಜನಪರತೆಯ ಆಧಾರದಲ್ಲಿ ನಡೆಯಬೇಕೇ ವಿನಃ ಧಾರ್ಮಿಕತೆಯ ಮೇಲಲ್ಲ ಎಂದು ಅವರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios