Asianet Suvarna News Asianet Suvarna News

'ಪರಿಸರ ನಾಶದಿಂದ ತಾಪಮಾನ ಹೆಚ್ಚಳ’

ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಅದನ್ನು ರಕ್ಷಿಸುವ ಹೊಣೆ ಎಲ್ಲರದ್ದಾಗಿದೆ. ಗಿಡ, ಮರಗಳ ಕೊರತೆಯಿಂದಾಗಿ ಆಮ್ಲಜನಕದ ಅಭಾವ ಉಂಟಾಗುತ್ತಿರುವುದು ದುರದೃಷ್ಟಕರ

Temperature increase due to environmental destruction snr
Author
First Published Jun 6, 2023, 6:03 AM IST

  ಗುಬ್ಬಿ :  ಪರಿಸರ ನಾಶದಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಅದನ್ನು ರಕ್ಷಿಸುವ ಹೊಣೆ ಎಲ್ಲರದ್ದಾಗಿದೆ. ಗಿಡ, ಮರಗಳ ಕೊರತೆಯಿಂದಾಗಿ ಆಮ್ಲಜನಕದ ಅಭಾವ ಉಂಟಾಗುತ್ತಿರುವುದು ದುರದೃಷ್ಟಕರ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪ ತಿಳಿಸಿದರು.

ಸೋಮವಾರ ನ್ಯಾಯಾಲಯದ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ಕಾನೂನು ಜಾರಿಗೊಳಿಸಿದ್ದರೂ ಸಾರ್ವಜನಿಕರು ಜಾಗೃತಗೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ. ಎಲ್ಲರೂ ಸಸಿಗಳನ್ನು ನೆಟ್ಟು ಬೆಳೆಸಲು ಮುಂದಾದಲ್ಲಿ ಮಾತ್ರ ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶೆ ವಿನುತ ಮಾತನಾಡಿ, ನ್ಯಾಯಾಲಯದ ಅವರಣದಲ್ಲಿ ಸಾಧ್ಯ ಇರುವ ಕಡೆ ಹೆಚ್ಚು ಸಸಿಗಳನ್ನು ನೆಟ್ಟು ಹಸಿರು ಪರಿಸರವನ್ನು ನಿರ್ಮಾಣ ಮಾಡಲಾಗುವುದು. ಪ್ರಕೃತಿಯ ಉಳಿವಿನಿಂದ ಮಾತ್ರವೇ ಮನುಷ್ಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ವಲಯ ಅರಣ್ಯ ಅಧಿಕಾರಿ ದುಗ್ಗಪ್ಪ ಮಾತನಾಡಿ, ಸಾರ್ವಜನಿಕರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳದೆ ಅರಣ್ಯ ಸಂರಕ್ಷಣೆ ಮಾಡಲು ಇಲಾಖೆಯ ಜೊತೆ ಸಹಕರಿಸಿದರೆ ಅನುಕೂಲವಾಗುವುದು ಎಂದು ತಿಳಿಸಿದರು.

ಪರಿಸರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಪರಿಸರ ಜಾಗೃತಿ ಫಲಕಗಳನ್ನು ಹಿಡಿದು ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶೆ ಮೇಧ, ವಕೀಲರ ಸಂಘದ ಅಧ್ಯಕ್ಷ ಚಿದಾನಂದ, ಕಾರ್ಯದರ್ಶಿ ಸುರೇಶ್‌, ಪದಾಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರು ಹಾಜರಿದ್ದರು.

ಕಾಗದ ಉಳಿಸುವುದು ಪ್ರೀತಿ

- ಡಾ.ವಿನಯ ಶ್ರೀನಿವಾಸ್

ನನ್ನ ಗೆಳತಿಯೊಬ್ಬಳು ತನ್ನ ಮಗನನ್ನು ಓದಿಸುತ್ತಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಹೋಂ ವರ್ಕ್ ಬಗ್ಗೆ ಸದಾ ಆಕ್ಷೇಪ ಮಾಡುತ್ತಿದ್ದಳು. ಅಲ್ಲಿನ ಶಿಕ್ಷಕರು ಕೊಡುತ್ತಿದ್ದ ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ಅಂದವಾಗಿ ಸಿದ್ಧಪಡಿಸಬೇಕಿತ್ತು. ವಿಷಯವಾರು ವಿವರಗಳನ್ನು ಕಾಗದದ ಒಂದೇ ಮಗ್ಗುಲಲ್ಲಿ ಬರೆದು ಇನ್ನೊಂದು ಮಗ್ಗುಲನ್ನು ಖಾಲಿಯೇ ಬಿಡಬೇಕಿತ್ತು. ವಿವರಗಳನ್ನು ಬರೆದ ಪುಟಗಳನ್ನು ಒಟ್ಟಾಗಿಸಿ ಅದರ ಮೇಲೆ ಮುಖಪುಟದ ರೀತಿಯಲ್ಲಿ ಮತ್ತೊಂದು ಖಾಲಿ ಕಾಗದವನ್ನೂ ಇರಿಸಬೇಕಾಗಿತ್ತು. ಈ ಎಲ್ಲ ಪುಟಗಳನ್ನು ಮತ್ತೊಂದು ಬಣ್ಣದ ಕಾಗದದಿಂದ ಕವರ್‌ ಮಾಡಿ ಅದರ ಮೇಲೆ ವಿದ್ಯಾರ್ಥಿಯ, ಶಿಕ್ಷಕರ, ವಿಷಯದ ಹೆಸರು ಬರೆಯಬೇಕಾಗಿತ್ತು. ಈ ರೀತಿಯ ಪ್ರಾಜೆಕ್ಟ್‌ ಸಿದ್ಧಪಡಿಸಿಕೊಂಡು ಹೋಗುತ್ತಿದ್ದ ಮಗನನ್ನು ಏನೂ ಕೇಳುವಂತಿರಲಿಲ್ಲ. ‘ಶಾಲೆಯ ಶಿಕ್ಷಕರು ಹೇಳಿದಂತೆ ಮಾಡುತ್ತಿರುವೆ’ ಎಂಬ ಸಿದ್ಧ ಉತ್ತರವನ್ನು ಆತ ಕೊಡುತ್ತಿದ್ದ.

ನಾಲ್ಕಾರು ಬಾರಿ ಇದನ್ನು ಗಮನಿಸಿದ ನನ್ನ ಗೆಳತಿ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಈ ರೀತಿ ಖಾಲಿ ಕಾಗದದ ಅನಗತ್ಯ ಬಳಕೆಯ ಬಗ್ಗೆ ಪ್ರಸ್ತಾಪಿಸಿದಾಗ ಅಲ್ಲಿಯೂ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಒಳಗಿದ್ದ ಸಸ್ಯ ಸಂರಕ್ಷಣಾ ಕಾಳಜಿಯು ಆಕೆಯನ್ನು ಸುಮ್ಮನೆ ಇರಲು ಬಿಡಲಿಲ್ಲ. ಈ ವಿಷಯವನ್ನು ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಂದು, ಚರ್ಚಿಸಿ, ಪ್ರಾಜೆಕ್ಟ್‌ ವರ್ಕ್‌ನಲ್ಲಿ ಬದಲಾವಣೆ ತಂದಿದ್ದಳು. ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗಾಗಿ ಅನಗತ್ಯ ಕಾಗದ ಬಳಕೆ ಮಾಡುವುದು ನಿಂತಿತ್ತು.

World Environment Day ಹಿನ್ನೆಲೆ ಗಿಳಿವಿಂಡು ನೋಡೊಣ ಬನ್ನಿ ಕಾರ್ಯಕ್ರಮ

ಮನೆ ಹತ್ತಿರದ ದಿನಸಿ ಅಂಗಡಿಯ ಮಾಲಿಕ ಕೂಡ ಹಾಗೆಯೇ. ನಮ್ಮ ಬಡಾವಣೆಯ ಎಲ್ಲ ಮನೆಯವರೂ ಹಳೆಯ ದಿನಪತ್ರಿಕೆಗಳನ್ನು, ಮಕ್ಕಳು ಉಪಯೋಗಿಸಿ ಬಿಟ್ಟ ನೋಟ್ ಪುಸ್ತಕಗಳನ್ನು ಆ ಅಂಗಡಿಗೇ ಕೊಡುವುದು ರೂಢಿ. ಅದನ್ನು ಇತರೆ ರದ್ದಿ ವ್ಯಾಪಾರಿಗಳಿಗೆ ಕೊಡುವ ಮೊದಲು, ಪ್ರತಿ ಹಳೆ ಪುಸ್ತಕವನ್ನು ತೆಗೆದು ಅದರಲ್ಲಿ ಇರುವ ಖಾಲಿ ಹಾಳೆಗಳನ್ನು ಬೇರ್ಪಡಿಸಿ, ಪ್ರತ್ಯೇಕವಾಗಿಸಿ ನಂತರವೇ ಆ ಪುಸ್ತಕಗಳನ್ನು ರದ್ದಿಗೆ ಹಾಕುವುದು ಆ ಮಾಲಿಕನ ಅಭ್ಯಾಸ. ಒಮ್ಮೆ ಅದನ್ನು ನೋಡಿದ ನಾನು ಹೀಗೇಕೆ ಎಂದು ಕೇಳಿದ್ದೆ. ಅದಕ್ಕೆ ಆತ ‘ಈಗಿನ ಮಕ್ಕಳಿಗೆ ಈ ಹಾಳೆಗಳ ಬೆಲೆಯೇ ಗೊತ್ತಿಲ್ಲ ಮೇಡಂ. ನಾವೆಲ್ಲ ವಿದ್ಯಾರ್ಥಿಗಳಾಗಿದ್ದಾಗ, ಶೈಕ್ಷಣಿಕ ವರ್ಷ ಮುಗಿಯುತ್ತಲೂ ಹಳೆಯ ಪುಸ್ತಕಗಳನ್ನು ಒಟ್ಟಾಗಿಸಿ ಅದರಲ್ಲಿನ ಖಾಲಿ ಹಾಳೆಗಳನ್ನು ಬೇರ್ಪಡಿಸಿ ಅದನ್ನು ಪುಸ್ತಕ ರೂಪಕ್ಕೆ ತಂದು ಗಣಿತ ಅಭ್ಯಾಸಕ್ಕೋ ಅಥವಾ ನಕ್ಷೆಗಳನ್ನು ಬರೆದು ಕಲಿಯಲೋ ಉಪಯೋಗಿಸುತ್ತಿದ್ದೆವು. ಈಗಿನ ಮಕ್ಕಳು ಅರ್ಧಕ್ಕೆ ಅರ್ಧ ಖಾಲಿ ಇರುವ ಪುಸ್ತಕಗಳನ್ನೇ ರದ್ದಿಗೆ ಹಾಕಿರುತ್ತಾರೆ’ ಎಂದಿದ್ದರು.

Follow Us:
Download App:
  • android
  • ios