ದಾವಣಗೆರೆ (ಅ.13):  ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಮಕ್ಕಳೊಂದಿಗೆ ಚಾನಲ್ ಹಾರಿ ತಾಯಿ  ಆತ್ಮಹತ್ಯೆಗೆ ಶರಣಾಗಿದ್ದಾರೆ

ದಾವಣಗೆರೆ ನಗರದ ಹೊರವಲಯದ ಎಚ್ ಕಲ್ಪನಹಳ್ಳಿ ಬಳಿ ತುಂಗಭದ್ರ  ಚಾನಲ್ ನಲ್ಲಿ  ಘಟನೆ ನಡೆದಿದೆ.  ಶ್ರೀ ದೇವಿ(38) ಅನುಷಾ (10) ನೂತನ್ (08) ಆತ್ಮಹತ್ಯೆ ಗೆ ಶರಣಾದ ತಾಯಿ ಮಕ್ಕಳು.

ಮನೆ ಕಟ್ಟುವ ವಿಚಾರಕ್ಕೆ ಪತಿಯೊಂದಿಗೆ ಜಗಳವಾಗಿದ್ದಿ ಇದರಿಮದ ಮನನೊಂದು ಚಾಲನಲ್‌ಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಕೊರೋನಾ ಭಯ; ಹೋಂ ಕ್ವಾರಂಟೈನ್‌ನಲ್ಲಿದ್ದ ಹೆಂಡತಿ ಕೊಂದ ಗಂಡ! .

ಸ್ಕೂಟಿಯಲ್ಲಿ ಮಕ್ಕಳನ್ನ ಕೂರಿಸಿಕೊಂಡು ತಾಯಿ ಚಾನಲ್ ಗೆ ತೆರಳಿದ್ದು, ಮಕ್ಕಳನ್ನು ಸೊಂಟಕ್ಕೆ ಕಟ್ಟಿಕೊಂಡು ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ 

ದಾವಣಗೆರೆ ನಗರದ ಜಯನಗರ ನಿವಾಸಿ ಶ್ರೀ ದೇವಿ. ವೃತ್ತಿಯಲ್ಲಿ ಹೈಸ್ಕೂಲ್ ಶಿಕ್ಷಕಿಯಾಗಿದ್ದರು.  ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸ್ಥಳಕ್ಕೆ ಭೇಟಿ ನೀಡಿದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ನೀರಿನಿಂದ ಶವಗಳನ್ನು ಹೊರಗೆ ತೆಗೆದು ಜಿಲ್ಲಾ ಆಸ್ಪತ್ರೆ ಯ ಶಾವಾಗಾರಕ್ಕೆ ರವಾನೆ ಮಾಡಲಾಗಿದೆ.