ಹುಬ್ಬಳ್ಳಿ[ಆ.29]  ಅಮ್ಮ ಬೇಕು ಎಂದು ಹಠ ಹಿಡಿದಿದ್ದ ನಾಲ್ಕು ವರ್ಷದ ಬಾಲಕನ ಬೆನ್ನು ಊದಿಕೊಂಡಿದೆ. ನರ್ಸರಿ ಶಿಕ್ಷಕಿ ಬರೆ ಹಾಕಿದ್ದಾಳೆ. ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಪ್ರಕರಣ ನಡೆದಿದೆ. 

ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಬಾಲಕನ ತಾಯಿ ಕಾವೇರಿ ಆರೋಪ ಮಾಡಿದ್ದಾರೆ. ಆದರೆ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಹಾಗೂ ಆಯಾ ಅಲ್ಲಗಳೆದಿದ್ದಾರೆ.

ಬಾಲಕನ ತಾಯಿ ಕಾವೇರಿ ಶಿಕ್ಷಕ ಸತೀಶ್ ಹಾಗೂ ಆಯಾ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.