ದೊಮ್ಮತಮರಿ ಗ್ರಾಪಂ ಮನೆಗಳಿಗೆ ನಲ್ಲಿ ನೀರು ಸಂಪರ್ಕ
ಪ್ರತಿ ನಾಗರಿಕನಿಗೆ ಮೂಲ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶ ಪ್ರಧಾನಿ ಮೋದಿಯದಾಗಿದ್ದು, ಈ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ 113 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಪ್ರತಿ ಮನೆಮನೆಗೆ ನಲ್ಲಿ ನೀರು ಸಂಪರ್ಕ ಅಳವಡಿಸಲು ಮುಂದಾಗಿರುವುದಾಗಿ ಕæೕಂದ್ರ ಸಾಮಾಜಿಕ ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಪಾವಗಡ (ಅ.29): ಪ್ರತಿ ನಾಗರಿಕನಿಗೆ ಮೂಲ ಸೌಲಭ್ಯ ಕಲ್ಪಿಸಬೇಕೆಂಬ ಉದ್ದೇಶ ಪ್ರಧಾನಿ ಮೋದಿಯದಾಗಿದ್ದು, ಈ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ 113 ಕೋಟಿ ರು. ವೆಚ್ಚದಲ್ಲಿ ತಾಲೂಕಿನ ಪ್ರತಿ ಮನೆಮನೆಗೆ ನಲ್ಲಿ ನೀರು ಸಂಪರ್ಕ ಅಳವಡಿಸಲು ಮುಂದಾಗಿರುವುದಾಗಿ ಕæೕಂದ್ರ ಸಾಮಾಜಿಕ ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಜಿಪಂ ಗ್ರಾಮೀಣ ನೈರ್ಮಲ್ಯ ಹಾಗೂ ತಾಪಂ ವತಿಯಿಂದ ತಾಲೂಕಿನ (Taluk) ದೊಮ್ಮತಮರಿ ಗ್ರಾಮದ ಸರ್ಕಾರಿ (Govt) ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಲಜೀವನ್ ಮಿಷನ್ ಯೋಜನೆ ಅಡಿ 4 ಕೋಟಿ 28 ಲಕ್ಷ ವæಚ್ಚದ ಗ್ರಾಪಂ ವ್ಯಾಪ್ತಿಯ ಮನೆ ಮನೆ ಕೊಳಾಯಿ ಸಂಪರ್ಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ಲೋರೈಡ್ ನೀರು ಸೇವನೆ ಪರಿಣಾಮ, ಮೂಳೆ ಸವೆತ, ಚರ್ಮರೋಗ ಹಾಗೂ ಇತರೆ ನಾನಾ ಕಾಯಿಲೆಗಳಿಗೆ ತುತ್ತಾಗಿ ನರಳುವ ಪರಿಸ್ಥಿತಿ ಇದೆ. ಸತತ ಮಳೆಯಿಂದ ಅಂರ್ತಜಲ ಹೆಚ್ಚಾಗಿ ತಾಲೂಕಿನಲ್ಲಿ ಪ್ಲೋರೈಡ್ ಅಂಶ ಕಡಿಮೆ ಆಗುತ್ತಿದೆ. ಇನ್ನೂ ಮೂರು ನಾಲ್ಕು ತಿಂಗಳಲ್ಲಿ ಪ್ರತಿ ಮನೆಗೆ ಕೊಳಾಯಿ ನೀರು ಸಂಪರ್ಕ ಕಲ್ಪಿಸಲಾಗುವುದು. ಕೊಳಾಯಿ ನೀರು ಸ್ಥಳದಲ್ಲಿಯೇ ಇಂಗಲು ಇಂಗುಪ್ಲಾಂಟ್ ನಿರ್ಮಾಣವಾಗಬೇಕು. ಈ ಬಗ್ಗೆ ನರೇಗಾದಲ್ಲಿ ಅವಕಾಶಕ್ಕೆ ಮಾಡಿಕೊಳ್ಳಬೇಕು. ಈ ಕೆಲಸ ಮಾಡದಿದ್ದರೆ ಜಲಜೀವನ್ ಮಿಷನ್ ಯೋಜನೆಯ ಬಿಲ್ಲು ತಡೆಗೆ ಆದೇಶಿಸುವುದಾಗಿ ತಾಪಂ ಇಒ ಶಿವರಾಜಯ್ಯಗೆ ತಾಕೀತು ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಆದಿನಾರಾಯಣಪ್ಪ, ಮುಖಂಡ ರಾಮಕೃಷ್ಣಪ್ಪ ಮತ್ತು ತಾಪಂ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ ಶಾಲಾ ಕೊಠಡಿ ಮತ್ತು ಸೇತುವೆ ದುರಸ್ತಿ ಸೇರಿದಂತೆ ದೊಮ್ಮತಮರಿ ಗಡಿ ಭಾಗದ ಸಮಸ್ಯೆ ಪ್ರಸ್ತಾವಿಸಿ ನಿವಾರಣೆಗೆ ಮನವಿ ಮಾಡಿದರು.
ಇದೇ ವೇಳೆ ಗ್ರಾಪಂ ಅಧ್ಯಕ್ಷೆ ಭೂಲಕ್ಷ್ಮಮ್ಮ, ತಾಲೂಕು ಬಿಜೆಪಿ ಅಧ್ಯಕ್ಷ ರವಿಶಂಕರನಾಯಕ್ ಡಾ.ಜಿ.ವೆಂಕಟರಾಮಯ್ಯ, ರವಿಶಂಕರ ನಾಯಕ್, ಕೊತ್ತೂರು ಹನುಮಂತರಾಯಪ್ಪ, ತಾಪಂ ಇಒ ಶಿವರಾಜಯ್ಯ, ಲೋಕೋಪಯೋಗಿ ಎಇಇ ಅನಿಲ್‌ಕುಮಾರ್, ಜಿಪಂ ಎಇಇ ಸುರೇಶ್, ಕುಡಿವ ನೀರು ವಿಭಾಗದ ಸಹಾಯಕ ಎಂಜಿನಿಯರ್ ಬಸವಲಿಂಗಪ್ಪ, ನಿರ್ಮಿತಿ ಕೇಂದ್ರದ ಬಾಲಸುಬ್ರಮಣಂ್ಯ ಇತರರಿದ್ದರು.
ಯೋಜನೆ ಹಣ ಬಿಡುಗಡೆಗೊಳಿಸಿ: ಶಾಸಕ
ಶಾಸಕ ವೆಂಕಟ ರಮಣಪ್ಪ ಮಾತನಾಡಿ, ವೆಂಕಟಾಪುರ ಹಾಗೂ ನೆರಳೇಕುಂಟೆ ರಸ್ತೆ ಮಾರ್ಗದಲ್ಲಿ ಎರಡು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೊಮ್ಮತಮರಿ, ವೆಂಕಟಾಪುರ, ವಿರಪಸಮುದ್ರ ಡಾಂಬರೀಕರಣ ರಸ್ತೆ ಪ್ರಗತಿಗೆ 2 ಕೋಟಿ, ವಿರಪಸಮುದ್ರ, ಅಕ್ಕಮ್ಮನಹಳ್ಳಿ, ಹಿಂದೂಪುರ, ಬಸವನಹಳ್ಳಿ ರಸ್ತೆ ಪ್ರಗತಿಗೆ ತಲಾ 50 ಲಕ್ಷ ವಿನಿಯೋಗಿಸಲಾಗಿದೆ. ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿದ್ದು ಸಿಎಂ ಜತೆ ಚರ್ಚಿಸಿದ್ದೇನೆ. ಕೂಡಲೇ ಯೋಜನೆ ಹಣ ಬಿಡುಗಡೆಗೊಳಿಸಿ ಗುತ್ತಿಗೆದಾರರಿಗೆ ಹಣ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
ದೊಮ್ಮತಮರಿ ಗ್ರಾಪಂ ಮನೆಗಳಿಗೆ ನಲ್ಲಿ ನೀರು ಸಂಪರ್ಕ
ಮೂಲ ಸೌಲಭ್ಯ ವ್ಯಕ್ತಿಗೆ ಅವಶ್ಯ
ಭದ್ರಾ ಮೇಲ್ದಂಡೆ ಹಾಗೂ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬವಾಗುತ್ತಿದ್ದು ಸಿಎಂ ಜತೆ ಚರ್ಚಿಸಿದ್ದೇನೆ
ಮನೆ ಮನೆ ಕೊಳಾಯಿ ಸಂಪರ್ಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಜಲಜೀವನ್ ಮಿಷನ್ ಯೋಜನೆ ಅಡಿ 4 ಕೋಟಿ 28 ಲಕ್ಷ ವæಚ್ಚದ ಗ್ರಾಪಂ ವ್ಯಾಪ್ತಿಯ ಮನೆ ಮನೆ ಕೊಳಾಯಿ ಸಂಪರ್ಕ
ವೆಂಕಟಾಪುರ ಹಾಗೂ ನೆರಳೇಕುಂಟೆ ರಸ್ತೆ ಮಾರ್ಗದಲ್ಲಿ ಎರಡು ಸೇತುವೆ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಗುತ್ತಿಗೆದಾರರಿಗೆ ಹಣ ಕಲ್ಪಿಸುವಂತೆ ಸಚಿವರಲ್ಲಿ ಮನವಿ