ಲಾಕ್‌ಡೌನ್: ತಾಯಿ ಸತ್ತಿದ್ದಾರೆಂದು ಸುಳ್ಳು ಹೇಳಿ ಸಿಕ್ಕಿ ಬಿದ್ದ ವ್ಯಕ್ತಿ..!
ತಾಯಿ ಸತ್ತರಿವುದಾಗಿ ಸುಳ್ಳು ಹೇಳಿ ತಮಿಳುನಾಡಿನಿಂದ ಕೊಡಗಿಗೆ ಬಂದ ವ್ಯಕ್ತಿ| ಮೂಲತಃ ತಮಿಳುನಾಡಿನ ಕೋಡಂಬಾಕ್ಕಂ ಗ್ರಾಮದವನಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಊರಿಗೆ ತೆರಳಿದ್ದರು|
ಸಿದ್ದಾಪುರ(ಏ.17): ಈ ಹಿಂದೆ ತಮಿಳುನಾಡಿಗೆ ತೆರಳಿದ್ದ ಸ್ಥಳೀಯ ನಿವಾಸಿ ದಿಢೀರ್ ಊರಿನಲ್ಲಿ ಪ್ರತ್ಯಕ್ಷವಾಗಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದ ಘಟನೆ ವಾಲ್ನೂರು ಗ್ರಾ.ಪಂ. ವ್ಯಾಪ್ತಿಯ ಜ್ಯೋತಿ ನಗರದಲ್ಲಿ ನಡೆದಿದೆ.
ಜ್ಯೋತಿ ನಗರದ ನಿವಾಸಿ ಸುಳ್ಳು ಮಾಹಿತಿಯನ್ನು ನೀಡಿ, ತಮಿಳುನಾಡಿನಿಂದ ವಾಲ್ನೂರು ಗ್ರಾಮ ಪಂಚಾಯಿತಿಯ ಜ್ಯೋತಿನಗರಕ್ಕೆ ಬಂದ ವ್ಯಕ್ತಿ. ಈತ ಮೂಲತಃ ತಮಿಳುನಾಡಿನ ಕೋಡಂಬಾಕ್ಕಂ ಗ್ರಾಮದವನಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಊರಿಗೆ ತೆರಳಿದ್ದರು ಎನ್ನಲಾಗಿದೆ. ತಮಿಳುನಾಡಿನಲ್ಲಿ ಕೊರೋನಾ ವೈರಸ್ ಹರಡಿ ತೀವ್ರ ಕಟ್ಟೆಚ್ಚರ ವಹಿಸಿರುವ ಹಿನ್ನೆಲೆಯಲ್ಲಿ, ತನ್ನ ಊರಿಗೆ ಮರಳಲು ತನ್ನ ತಾಯಿ ಮೃತಪಟ್ಟಿರುವುದಾಗಿ ತಮಿಳುನಾಡು ಪೋಲಿಸರಿಗೆ ಸುಳ್ಳು ಮಾಹಿತಿ ನೀಡಿ, ಪೊಲೀಸರಿಂದ ಪಾಸ್ ಪಡೆದುಕೊಂಡಿದ್ದ. ಅಲ್ಲಿಂದ ಕುಶಾಲನಗರದ ಕೊಪ್ಪ ತಪಾಸಣೆ ಕೇಂದ್ರದ ಮೂಲಕ ಗ್ರಾಮಕ್ಕೆ ಬಂದಿರುವುದಾಗಿ ಈತ ಹೇಳಿಕೆ ನೀಡಿದ್ದಾನೆ. ಈತ ಗುರುವಾರದಂದು ದಿಢೀರನೆ ಮನೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿರುವುದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಈತ ಸುಳ್ಳು ಮಾಹಿತಿ ನೀಡಿ ಗ್ರಾಮದಲ್ಲಿ ನೆಲೆಸಿರುವುದನ್ನು ವಿರೋಧಿಸಿದ ಗ್ರಾಮಸ್ಥರು ವ್ಯಕ್ತಿಯನ್ನು ಕೂಡಲೇ ಮಡಿಕೇರಿಯಲ್ಲಿ ತಪಾಸಣೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಉಡುಪಿ ಲಾಕ್‌ಡೌನ್ ಕ್ರಮಗಳಿಗೆ ಕೇಂದ್ರದಿಂದಲೂ ಶಹಭಾಷ್..!
ಸ್ಥಳಕ್ಕೆ ಚೆಟ್ಟಳ್ಳಿ ಉಪ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಕೊರೋನಾ ನಿಗ್ರಹ ದಳದ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲಿಸಿ, ಕ್ವಾರಂಟೈನ್‌ನಲ್ಲಿರಬೇಕಾದ ವ್ಯಕ್ತಿಯನ್ನು ಹೆಚ್ಚಿನ ತಪಾಸಣೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.