ಮಂಗಳೂರು(ಮೇ.07): ಹೊರರಾಜ್ಯಗಳಿಂದ ದ.ಕ. ಜಿಲ್ಲೆಗೆ ಆಗಮಿಸುವವರಿಗೆ ಹಾಗೂ ಹೊರರಾಜ್ಯಗಳಿಗೆ ತೆರಳುವವರಿಗೆ ಎರಡು ಕಡೆಗಳಲ್ಲಿ ಮಾತ್ರ ಚೆಕ್‌ ಪಾಯಿಂಟ್‌ ತೆರೆಯಲಾಗಿದೆ.

ಮಂಗಳೂರು ತಾಲೂಕಿನ ತಲಪಾಡಿ ಚೆಕ್‌ಪೋಸ್ಟ್‌ ಹಾಗೂ ಸುಳ್ಯ ತಾಲೂಕಿನ ಜಾಲ್ಸೂರು ಚೆಕ್‌ಪೋಸ್ಟ್‌ಗಳಲ್ಲಿ ಆರೋಗ್ಯ ತಪಾಸಣೆ ಬಳಿಕ ಜಿಲ್ಲೆಗೆ ಪ್ರವೇಶಿಸಲು ಹಾಗೂ ಜಿಲ್ಲೆಯಿಂದ ತೆರಳಲು ಅನುಮತಿ ನೀಡಲಾಗುತ್ತದೆ. ಈಗಾಗಲೇ ಚಾರ್ಮಾಡಿ ಹಾಗೂ ಗುಂಡ್ಯ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಅಂತರ್‌ ಜಿಲ್ಲಾ ಸಂಚಾರ ತಪಾಸಣೆ ಇದೆ.

ಕಡಿಮೆಯಾಗಿಲ್ಲ ಮದ್ಯಪ್ರೇಮಿಗಳ ಖರೀದಿ ಉತ್ಸಾಹ

ಬೆಂಗಳೂರು ಸೇರಿದಂತೆ ಕರ್ನಾಟಕ ಹಲವು ಭಾಗಗಳಿಂದ ಜನರು ದಕ್ಷಿಣ ಕನ್ನಡ ಪ್ರವೇಶಿಸುತ್ತಿದ್ದು, ಒಮ್ಮೆ ಪ್ರವೇಶಿಸಿದರೆ ಯಾವುದೇ ಕಾರಣಕ್ಕೂ ಮರಳಿ ಹೋಗುವ ಅವಕಾಶ ನೀಡಲಾಗಿಲ್ಲ.