ಪುಂಡರ ವಿರುದ್ಧ ವಿರುದ್ಧ ಕೋಕಾ ಕಾಯ್ದೆಯಡಿ ಕಾನೂನು ಕ್ರಮವಹಿಸಿ, ಸರ್ಕಾರಕ್ಕೆ ಜಗದೀಶ್ ಕಾರಂತ ಆಗ್ರಹ
ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಭಂಡತನ ಮೆರೆಯವ ಪುಂಡರ ವಿರುದ್ಧ ಕೋಕಾ ಕಾಯ್ದೆಯಡಿ ಕಾನೂನು ಕ್ರಮವಹಿಸಲು ಸರ್ಕಾರ ಮುಂದಗಾಬೇಕೆಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಕಾರ ಜಗದೀಶ್ ಕಾರಂತ ಹೇಳಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಫೆ.1): ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಭಂಡತನ ಮೆರೆಯವ ಪುಂಡರ ವಿರುದ್ಧ ಕೋಕಾ ಕಾಯ್ದೆಯಡಿ ಕಾನೂನು ಕ್ರಮವಹಿಸಲು ಸರ್ಕಾರ ಮುಂದಗಾಬೇಕೆಂದು ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಕಾರ ಜಗದೀಶ್ ಕಾರಂತ ಹೇಳಿದರು. ಅವರು ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬಾಗಲಕೋಟೆಯ ನವನಗರದ 48ನೇ ಸೆಕ್ಟರ್ ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಮುಸಲ್ಮಾನ ಮತಾಂಧ ಪುಂಡರು ನಡೆಸಿದ ಕೃತ್ಯ ಅತ್ಯಂತ ಕ್ರೌರ್ಯದ್ದು, ಹಿಂದೂ ಸಮಾಜ ಕೆಣಕಬೇಕು, ಕೆರಳಿಸಬೇಕು, ಹಿಂದೂಗಳನ್ನ ಒಕ್ಕೆಲೆಬ್ಬಿಸುವ ಉದ್ದೇಶದಿಂದಲೇ ಮಾಡಿದ ದಾಳಿಯಿದಾಗಿದ್ದು, ಇದನ್ನು ಹಿಂದೂ ಸಮಾಜ ಸಹಿಸಲಿಕ್ಕೆ ಸಾಧ್ಯವಿಲ್ಲ ಎಂದರು.
ಈ ಘಟನೆಯಲ್ಲಿ 35 ಜನರು ಬಂದು ಅಮಾಯಕ ಮಹಿಳೆ ಮೇಲೆ ಹಲ್ಲೆ ದೌರ್ಜನ್ಯ ನಡೆಸಲಾಗಿದೆ, ಇದೂವರೆಗೆ ಮೂವರನ್ನ ಬಂಧಿಸಿ, ಒಬ್ಬನನ್ನ ಬಿಡುಗಡೆ ಮಾಡಿದ್ದಾರೆ, ಇದು ಪೋಲಿಸರ ದೌರ್ಬಲ್ಯ ಅಂತ ಪರಿಗಣಿಸೋದಿಲ್ಲ, ಪ್ರಕರಣ ಗಂಭೀರತೆಯನ್ನ ಇಲಾಖೆ ಅರಿತಿಲ್ಲ. ಗಾಯಾಳು ಭೇಟಿ ಮಾಡಿ ಕೇಳಿದ್ರೆ ರಕ್ತ ಕುದಿಯುವಷ್ಟು ಹೇಯತನ ಪುಂಡರು ಮಾಡಿದ್ದಾರೆ. ಈ ಹಿಂದೆ ಆರ್.ಎಸ್.ಎಸ್ ಮುಖ್ಯ ಶಿಕ್ಷಕನ ಮೇಲೆ ಹಲ್ಲೆಯಾದ್ರೂ ಕಮ್ರವಾಗಿಲ್ಲ. ಈ ಸೊಕ್ಕಿನ ವರ್ತನೆಯನ್ನು ಮುಸಲ್ಮಾನರು ನಿಲ್ಲಿಸಬೇಕು. ಇಲ್ಲವಾದ್ರೆ ಇಲಾಖೆ ಹದ್ದು ಬಸ್ತಿನಲ್ಲಿ ಇಡಬೇಕು.
ಇದು ಮುಂದುವರೆದರೆ ಹಿಂದೂ ಸಮಾಜ ಒಂದು ಗಟ್ಟಿ ನಿರ್ಧಾರಕ್ಕೆ ಬರಬೇಕಾಗುತ್ತೆ. ಗಣೇಶೋತ್ಸವ ನಂತರದ ನಾಲ್ಕಾರು ಘಟನೆಗಳ ಬಗ್ಗೆ ಕೂಲಂಕುಷವಾದ ತನಿಖೆಯಾಗಬೇಕು. ಯಾವ ಪುಂಡರು ಸಂಘಟಿತವಾದ ಭಯೋತ್ಪಾದನೆ ಹುಟ್ಟಿಸಿ ಹಿಂದೂಗಳ ಬದುಕಿಗೆ ಬೆಂಕಿ ಹಚ್ಚುತ್ತಿದ್ದಾರೆ. ಅಂತ ಪುಂಡರ ವಿರುದ್ಧ ವಿರುದ್ಧ ಕೋಕಾ ಕಾಯ್ದೆಯಡಿ ಕಾನೂನು ಕ್ರಮವಾಗಬೇಕು. ಆಗಿರೋ ತಪ್ಪು ಸರಿಪಡಿಸಲು ಸಮಯ ನೀಡುತ್ತೇವೆ. ಆ 35 ಜನರು ಯಾರು ಅನ್ನೋದನ್ನ ಪತ್ತೆ ಹಚ್ಚಿ ಬಂಧಿಸಬೇಕು.
ರಾಯಚೂರು: ರಿಮ್ಸ್‌ನ ತಾಯಿ, ಮಗು ವಿಭಾಗಕ್ಕೆ ‘ಲಕ್ಷ್ಯಾ’ ಪ್ರಮಾಣೀಕರಣ
ಇದಕ್ಕೆ ತಪ್ಪಿದ್ದಲ್ಲಿ ಹಿಂದೂ ಸಮಾಜ ಸೂಕ್ತ ಯೋಚನೆ ಮಾಡಬೇಕಾಗುತ್ತೆ. ಇನ್ನು ಮುಸ್ಲಿಂ ಭಾಹುಳ್ಯದ ಪ್ರದೇಶದಲ್ಲಿ ಹಿಂದೂಗಳು ನರಕ ಯಾತನೆ ಪಟ್ಟರೆ, ಹಿಂದೂ ಬಾಹುಳ್ಯದ ಪ್ರದೇಶದಲ್ಲಿ ಮುಸ್ಲಿಂರು ನೆಮ್ಮದಿಯಿಂದ ಇರಬಹುದಾ ಎಂದು ಯೋಚಿಸಿ ಎಂದ ಅವರು, ಇದಕ್ಕೆ ಹಿಂದೂ ಸಮಾಜ ಕೆರಳಬಹುದು. ಇದರಿಂದ ಬಾಗಲಕೋಟೆ ಹೊತ್ತಿ ಉರಿಯಬಹುದು. ಹಿಂದೂಗಳು ಕಾನೂನು ಕೈಗೆತ್ತಿಕೊಳ್ಳದಂತೆ ವರ್ತಿಸಬೇಕು ದುಷ್ಟ ಶಕ್ತಿಗಳನ್ನ ಹತ್ತಿಕ್ಕಲು ಸರ್ಕಾರ ಮತ್ತು ಇಲಾಖೆ ಮುಂದಾಗಬೇಕೆಂದರು.
SDPI ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್: ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಫಿ ಬೆಳ್ಳಾರೆ ಟಿಕೆಟ್
ಇನ್ನು ರಾಜ್ಯದಲ್ಲಿ ನಿರಂತರ ಹಿಂದೂಗಳ ಮೇಲೆ ಹಲ್ಲೆ ಹಿನ್ನೆಲೆ ಸರ್ಕಾರದ ನಡೆ ವಿಚಾರ ಕೇಳಿದಾಗ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಪೋಲಿಸ ಇಲಾಖೆ ಗುರಿಯಾಗಿಸಿಯೇ ನಾನು ಮಾತನಾಡಿದ್ದು, ಅವರ ಕ್ರಮವಹಿಸಬೇಕು ಎಂದು ಬಾಗಲಕೋಟೆಯಲ್ಲಿ ಜಗದೀಶ ಕಾರಂತ ಹೇಳಿದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಕಿರಣ ಪವಾಡಶೆಟ್ಟರ್, ಕುಮಾರಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.