ಬೆಂಗಳೂರು[ಜ.03]  ಮಲಗಿದ್ದ ತರುಣವರ್ಗವನ್ನು ಎಚ್ಚರಿಸುವ. ಎದ್ದು ಕೂತವರನ್ನು ನಿಲ್ಲಿಸುವ.. ಎದ್ದು ನಿಂತವರನ್ನು ಓಡಿಸುವ ಸ್ಫೂರ್ತಿ ತುಂಬುವ ಯುವ ಚೈತನ್ಯ ಶ್ರೀ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯ ಪ್ರಯುಕ್ತ ಮತ್ತೊಮ್ಮೆ ದೇಶಕ್ಕಾಗಿ ಓಡೋಣ ಎಂಬ ಘೋಷವಾಕ್ಯದೊಂದಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ಓಟ ಆ ಪ್ರಾತಃಸ್ಮರಣೀಯ ನರೇಂದ್ರ ನಿಂದ ಹಿಡಿದು ಆಧುನಿಕ ನರೇಂದ್ರ ನೆಚ್ಚಿನ ಪ್ರಧಾನಿಗಾಗಿ.. ದೇಶಕ್ಕಾಗಿ.. ಸಾಮಾಜಿಕ ಜಾಗೃತಿಗಾಗಿ ನಮೋ ಭಾರತ ಸಂಘಟನೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಐಟಿ ದಾಳಿಯಾಗಿದ್ದು ಇವರ ಮೇಲೆ, ಆದರೆ ಟಾರ್ಗೆಟ್‌ ಆಗಿದ್ದು ಇನ್ಯಾರೋ!

ಜನವರಿ 12, ಶನಿವಾರ ಮುಂಜಾನೆ 5.30ಕ್ಕೆ ನ್ಯಾಷನಲ್ ಕಾಲೇಜು ಮೈದಾನ ದಿಂದ ಮ್ಯಾರಥಾನ್ ಓಟ ಪ್ರಾರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ನಡೆಯುವ ಮ್ಯಾರಥಾನ್ ಗೆ ಹೋಲಿಸಿದರೆ ನಮೋಥಾನ್ ಗೆ ಅತೀ ಕಡಿಮೆ ದರವನ್ನು ನಿಗದಿಪಡಿಸಲಾಗಿದ್ದು  365 ರೂ. ನೀಡಿ ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ ಮಾಡಿಕೊಂಡು ಮ್ಯಾರಥಾನ್ ನಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸದಸ್ಯರಿಗೂ ಆಕರ್ಷಕ ಟಿ. ಶರ್ಟ್, ಹೆಡ್ ಬ್ಯಾಂಡ್, ಉಪಹಾರ, ಫಿನಿಷರ್ ಮೆಡಲ್, ಪ್ರಶಸ್ತಿ ಪ್ರತ್ರ ನೀಡಲಾಗುವುದು. ಇದಲ್ಲದೆ ಓಟದ ಮೊದಲು ಪವರ್ ಯೋಗ ಕೂಡ ಇರಲಿದೆ. ಹೆಚ್ಚಿನ ಮಾಹಿತಿಗೆ  94813 17437 ಸಂಪರ್ಕ ಮಾಡಬಹುದು. http://www.namobharath.in/namothon-blr/ ಈ ಲಿಂಕ್ ಸಹ ಓಪನ್ ಮಾಡಿ ರಜಿಸ್ಟರ್ ಮಾಡಿಕೊಳ್ಳಬಹುದು.