ಉಡುಪಿ(ಮಾ.05): ಉಡುಪಿಯಲ್ಲಿ ಶಂಕಿತ ಕೊರೋನಾ ಬಾಧಿತ ಪ್ರಕರಣ ಪತ್ತೆಯಾಗಿದೆ. ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರವಾಸದಿಂದ ಬಂದ ವ್ಯಕ್ತಿಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಡುಪಿಯಲ್ಲಿ ಶಂಕಿತ ಕೊರೋನಾ ಪ್ರಕರಣ ವಿಚಾರವಾಗಿ ಇಸ್ರೇಲ್ ಪ್ರವಾಸದಿಂದ ಬಂದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ತಾಲೂಕು ಮುನಿಯಾಲು ನಿವಾಸಿ ಮೂಲತ ಕೇರಳದವನಾಗಿದ್ದು ಮುನಿಯಾಲಿನಲ್ಲಿ ಕೃಷಿ‌ ನಡೆಸುತ್ತಾರೆ.

ಕೊರೋನಾ ವೈರಸ್‌ಗೆ ಬೆಚ್ಚಿಬಿದ್ದ ಬೆಳಗಾವಿ: ಆತಂಕದಲ್ಲಿ ಜನತೆ!

ಇತ್ತೀಚೆಗೆ ಕುಟುಂಬ ಸಹಿತ ಇಸ್ರೇಲ್ ಪ್ರವಾಸ ಮುಗಿಸಿ ಬಂದಿದ್ದರು. ಕಳೆದ ಎರಡು ದಿನಗಳಿಂದ ಶೀತ, ಕೆಮ್ಮು ಕಂಡು ಬಂದಿತ್ತು. ಕೊರೋನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಐಸೋಲೇಟೆಡ್ ಕೊಠಡಿಯಲ್ಲಿ ವ್ಯಕ್ತಿಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ರಕ್ತದ ಸ್ಯಾಂಪಲ್ ತೆಗೆದು‌ ಕಳಿಸಲು ವ್ಯವಸ್ಥೆ ಮಾಡಲಾಗಿದೆ.