ಪಾರದರ್ಶಕ ಆಡಳಿತಕ್ಕೆ ಆಮ್‌ ಆದ್ಮಿ ಬೆಂಬಲಿಸಿ: ಮುಖ್ಯಮಂತ್ರಿ ಚಂದ್ರು

ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕಾಗಿ ಈ ಭಾರಿ ಚುನಾವಣೆಯಲ್ಲಿ ರಾಜ್ಯದ ಮತದಾರರು ಆಮ್‌ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕೆಂದು ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

Support Aam Aadmi for transparent governance:  Mukyamantri Chandru snr

  ಮಂಡ್ಯ : ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕಾಗಿ ಈ ಭಾರಿ ಚುನಾವಣೆಯಲ್ಲಿ ರಾಜ್ಯದ ಮತದಾರರು ಆಮ್‌ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕೆಂದು ಎಎಪಿ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದ ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ರಾಜ್ಯ ಹಾಗೂ ರಾಷ್ಟ$› ರಾಜಕಾರಣದಲ್ಲಿ ಭ್ರಷ್ಟಾಚಾರ ಮಾಡಿ ಆಡಳಿತ ನಡೆಸಿವೆ. ಈ ಎಲ್ಲಾ ಪಕ್ಷಗಳಿಗೆ ಪರ್ಯಾಯವಾಗಿ ಆಪ್‌ ಪಕ್ಷವು ದೆಹಲಿ ಮತ್ತು ಪಂಜಾಬ್‌ನಲ್ಲಿ ಆಡಳಿತ ನಡೆಸುತ್ತಾ ಜನಪರ ಆಡಳಿತವನ್ನು ನೀಡುತ್ತಾ ಬಂದಿದೆ ಎಂದು ವಿವರಿಸಿದರು.

224 ಕ್ಷೇತ್ರಗಳಿಂದ ಸ್ಪರ್ಧೆ:

ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವು ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ಸರ್ಕಾರದಿಂದ ಬಯಸುವುದಾದರೂ ಏನು ಮೂಲಭೂತ ಸೌಕರ್ಯಗಳು, ಒಳ್ಳೆಯ ಗುಣಮಟ್ಟದ ಶಿಕ್ಷಣ, ಉತ್ತಮ ಮಟ್ಟದ ಆರೋಗ್ಯ ಮತ್ತು ರಸ್ತೆಗಳು ಹಾಗೂ ದಿನನಿತ್ಯ ಬಳಸುವ ನೀರು, ವಿದ್ಯುತ್‌ ಇವುಗಳನ್ನು ಜನ ಸಮಾನ್ಯರಿಗೆ ನೀಡುವುದರಲ್ಲಿ ಬಿಜೆಪಿ ಸರ್ಕಾರವು ವಿಫಲಗೊಂಡಿದೆ ಎಂದು ದೂರಿದರು.

ಪಕ್ಷಾಂತರಿಗಳ ಪಕ್ಷವಲ್ಲ:

ಬೇರೆ ಪಕ್ಷದಿಂದ ಬರುವ ಮುಖಂಡರನ್ನು ಆಮ್‌ ಆದ್ಮಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೀರಿ ನಿಮ್ಮದು ಪಕ್ಷಾಂತರಿಗಳ ಪಕ್ಷವಲ್ಲವೇ ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಗೆದ್ದು ಬೇರೆ ಪಕ್ಷವನ್ನು ಸೇರಿದರೆ ಅದು ಪಕ್ಷಾಂತರವಾಗುತ್ತದೆ. ಇಲ್ಲಿ ಚುನಾವಣೆಗೆ ಮುನ್ನ ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿ ಬರುವವರಿಗೆ ಸ್ವಾಗತವಿದೆ. ಆದರೆ ಭ್ರಷ್ಟಾಚಾರಿಗಳು ಹಾಗೂ ಕ್ರಿಮಿನಲ್‌ ಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿದರು.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ದ ಯಾವುದೇ ಭ್ರಷ್ಟಾಚಾರದ ದಾಖಲೆಗಳನ್ನು ಲಭ್ಯವಿಲ್ಲದಿದ್ದರೂ ಕೂಡ ಅವರನ್ನು ಬಿಜೆಪಿ ಸರ್ಕಾರವು ಬಂಧಿಸಿ ವಿನಾ ಕಾರಣ ತೊಂದರೆ ನೀಡುತ್ತಿದೆ. ಸಿಸೋಡಿಯಾ ಬಳಿ ಸಿಕ್ಕಿದ್ದು ಕೇವಲ 10 ಸಾವಿ ರು. ಆದರೆ ಬಿಜೆಪಿ ಶಾಸಕ ಮಾಡಾಲ್‌ ವಿರೂಪಕ್ಷಪ್ಪ ಬಳಿ 8 ಕೋಟಿ ಹಣ ಸಿಕ್ಕಿದೆ. ಬಿಜೆಪಿ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ ಎಂದು ಪ್ರಶ್ನಿಸಿದರು.

ಮನೀಶ್‌ ಸಿಸೋಡಿಯಾ ಮೇಲೆ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪ ಕೇವಲ 10 ಸಾವಿರ ಅಷ್ಟೆಯೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಗೊತ್ತಿರುವುದು ಅಷ್ಟೆಎಂದು ಚುಟುಕಾಗಿದೆ ಉತ್ತರಿಸಿದರು.

ಸುದ್ದಿ ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪಗೌಡ ನೆಲ್ಲೂರ್‌, ರಾಜ್ಯ ಕಾರ್ಯದರ್ಶಿ ನಂಜಪ್ಪ ಕಾಳೇಗೌಡ, ಜಂಟಿ ಕಾರ್ಯದರ್ಶಿ ಬಿ.ಸಿ.ಮಹದೇವಸ್ವಾಮಿ, ಜಿಲ್ಲಾಧ್ಯಕ್ಷ ಶಿವಕುಮಾರ್‌, ಮಂಡ್ಯ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಬೂದನೂರು ಬೊಮ್ಮಯ್ಯ, ಮದ್ದೂರು ಕ್ಷೇತ್ರದ ಸೇವಾಕಾಂಕ್ಷಿ ಆನಂದ್‌ ಭಾಗವಹಿಸಿದ್ದರು.

ಜೆಸಿಬಿ ಪಕ್ಷಗಳಿಂದ ವಂಚನೆ:

ಏನು ನೀಡಬೇಕೆಂಬುದು ಅರಿವಿಲ್ಲದೆ ಅಧಿಕಾರದ ಆಸೆಗೆ ಹಣ ಮಾಡುವ ದೃಷ್ಟಿಯಲ್ಲಿ ಇಂದಿನ ದುಷ್ಟರಾಜಕಾರಣಿಗಳು ಮತ್ತು ಭ್ರಷ್ಟಅಧಿಕಾರಿಗಳು ಆಡಳಿತ ಮಾಡುತ್ತಿರುವುದು ಶೋಚನೀಯ. ಈ ಹಿಂದೆ ನಮ್ಮ ಕರ್ನಾಟಕ ರಾಜ್ಯವನ್ನು ಆಳಿದ ಜನತಾದಳ, ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಮಂಡ್ಯ ಜನತೆಗೆ ಮಾಡಿರುವ ಮೋಸ, ವಂಚನೆಗಳೆಂದರೆ 2001ರಿಂದ 2006ರಲ್ಲಿ ಚಿಕ್ಕಮಂಡ್ಯ ಕೆರೆಯನ್ನು ಮುಚ್ಚಿಸಿ ನಿವೇಶನಗಳನ್ನಾಗಿ ಮಾಡಿ ಪ್ರಭಾವಿ ರಾಜಕಾರಣಿಗಳು ಮತ್ತು ಬೆಂಬಲಿಗರು ಹಂಚಿಕೊಂಡಿದ್ದಾರೆ ಎಂದು ದೂರಿದರು 

Latest Videos
Follow Us:
Download App:
  • android
  • ios