Anti Conversion Bill : ಸಕಾಲಿಕ ಮತ್ತು ಅವಶ್ಯಕ - ಸುಗುಣೇಂದ್ರ ತೀರ್ಥ ಸ್ವಾಮೀಜಿ

  • ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಮತಾಂತರ ನಿಷೇಧ ಕಾಯ್ದೆ
  •  ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರವಾಗಿದೆ ಎಂದು  ಪುತ್ತಿಗೆ ಮಠದ  ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ
Sugunendra Swamiji Supports Anti Conversion Bill snr

 ಉಡುಪಿ (ಡಿ.23):  ರಾಜ್ಯದಲ್ಲಿ (Karnataka Govt) ಅಸ್ತಿತ್ವಕ್ಕೆ ಬರುತ್ತಿರುವ ಮತಾಂತರ ನಿಷೇಧ ಕಾಯ್ದೆಯ (Anti Conversion Bill) ಜಾರಿ ವಿಚಾರವು  ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರವಾಗಿದೆ ಎಂದು  ಪುತ್ತಿಗೆ ಮಠದ    ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಉಡುಪಿಯಲ್ಲಿಂದು (Udupi) ಮಾತನಾಡಿದ ಸ್ವಾಮೀಜಿ ಮತೀಯ ವಿಚಾರಗಳೆಂದರೆ ಅತ್ಯಂತ ಸೂಕ್ಷ್ಮ ವಿಚಾರಗಳು.  ಮತೀಯ ವಿಚಾರಗಳ ಬಗ್ಗೆ ಸ್ಪಷ್ಟ ನಿಲುವು ಅಗತ್ಯ.  ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಸ್ವಾಗತಾರ್ಹ ಎಂದರು. 

ಮತಾಂತರ ನಿಷೇಧ ಕಾಯ್ದೆ  ರಾಜ್ಯ ಸರ್ಕಾರ (Karnataka Govt)  ಕೈಗೊಂಡಿರುವ ಮಹತ್ವದ ನಿರ್ಧಾರ. ಸಕಾಲಿಕ ಮತ್ತು ಅವಶ್ಯವಾದ ಕಾನೂನು ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ.  ಈ ಕಾನೂನಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ.  ಈ ವಿಧೇಯಕದಿಂದ ಅರ್ಥಪೂರ್ಣ ಮತಾಂತರ ಗಳಿಗೆ ತೊಂದರೆ ಇಲ್ಲ.  ಪ್ರತಿಯೊಬ್ಬನ ಮೂಲಭೂತ ಹಕ್ಕು ಆಗಿರುವ ಮತೀಯ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ.  ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳು ಎಂದು ಸ್ವಾಮೀಜಿ ಹೇಳಿದರು. 

ಕೂಡಲ ಶ್ರೀ ಬೆಂಬಲ :   ದೇಶದ ಪ್ರತಿಯೊಬ್ಬ ಪ್ರಜೆಗೂ ಯಾವುದೇ ಧರ್ಮ ಸ್ವೀಕಾರ ಮಾಡುವ ಹಕ್ಕು ಇದೆ. ಆದರೆ ಒತ್ತಾಯ ಪೂರ್ವಕ ಮತಾಂತರ(Conversion) ಸರಿಯಲ್ಲ ಅಂತ ಹೇಳುವ ಮೂಲಕ ಮತಾಂತರ ನಿಷೇಧ ಮಸೂದೆ ಕಾಯ್ದೆಗೆ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಅವರು ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. 

ರಾಜ್ಯದಲ್ಲಿ(Karnataka) ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದ ಬಗ್ಗೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಪ್ರಜ್ಞಾಪೂರ್ವಕವಾಗಿ ಯಾವುದೇ ಧರ್ಮವನ್ನು(Religion) ಪೂಜಿಸುವ ಹಕ್ಕು ಸಂವಿಧಾನ ಕೊಟ್ಟಿದೆ. ಒತ್ತಾಯ ಪೂರ್ವಕ, ಆಮಿಷವೊಡ್ಡಿ, ಬಲವಂತ ಮೂಲಕ ಮತಾಂತರ ಮಾಡುವುದು ತಪ್ಪು. ದೌರ್ಬಲ್ಯವನ್ನೇ ಬಳಸಿಕೊಂಡು ಸೇರ್ಪಡೆ ಮಾಡೊದು ಸರಿಯಲ್ಲ ಅಂತ ಹೇಳಿದ್ದಾರೆ. 

ನಮ್ಮ ಸಮುದಾಯದಲ್ಲಿಯೂ ಮತಾಂತರ ಆಗಿರೋದು ಬೆಳಕಿಗೆ ಬಂದಿದೆ. ಬಲವಂತದ ಮತಾಂತರದ ಬಗ್ಗೆ ಯಾವುದೇ ದಾರ್ಶಿನಕರು ಹೇಳಿಲ್ಲ. ಹೃದಯಾಂತರದ ಮೂಲಕ ಧರ್ಮವನ್ನು ಒಪ್ಪಿಕೊಳ್ಳಬೇಕು. ದೇಶದಲ್ಲಿ ಒತ್ತಾಯ ಪೂರ್ವಕ ‌ಮತಾಂತರ ಸರಿಯಲ್ಲ ಎಂದ ಸ್ವಾಮೀಜಿ ತಿಳಿಸಿದ್ದಾರೆ.  

ವಿರೋಧಿಗಳು ಅಭಿವೃದ್ಧಿಗೆ ಕಂಟಕರು :   ಮತಾಂತರ ನಿಷೇಧ ಕಾಯ್ದೆ(Anti Conversion Bill) ವಿರೋಧ ಮಾಡುವವರು ಗಾಂಧೀಜಿ(Mahatma Gandhi), ಅಂಬೇಡ್ಕರ್‌(Dr BR Ambedkar) ಹಾಗೂ ಸಂವಿಧಾನ(Constitution) ವಿರೋಧಿಗಳು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌(Pramod Mutalik) ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸದನದಲ್ಲಿ ಬಿಜೆಪಿ(BJP) ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಂದಾಗಿರುವುದು ಸ್ವಾಗತಾರ್ಹ. ಈ ಕಾಯಿದೆ ಜಾರಿಗೆ ತರುವಂತೆ ಎಲ್ಲ ಹಿಂದು ಸಂಘಟನೆಗಳು(Hindu Organizations) ಆಗ್ರಹಿಸಿದ್ದವು. ಜೊತೆಗೆ ನಿತ್ಯವೂ ಹೋರಾಟ ಮಾಡುತ್ತಿವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಈ ಕಾಯಿದೆ ವಿರೋಧ ಮಾಡುವವರೂ ಇದ್ದಾರೆ. ಕಾಂಗ್ರೆಸ್‌(Congress), ಜೆಡಿಎಸ್‌(JDS), ಕಮ್ಯೂನಿಸ್ಟ್‌(Communist) ಸೇರಿ ಇನ್ನು ಕೆಲ ಜನ ವಿರೋಧಿಸುತ್ತಾರೆ. ಇವರು ದೇಶದ ಅಭಿವೃದ್ಧಿಗೆ ಕಂಟಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತಾಂತರ ನಿಷೇಧ ಕಾಯ್ದೆ ಮಂಡನೆ: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

ಹಿಂದುಸ್ತಾನದಲ್ಲಿ(Hindustan) ಹಿಂದುಗಳ(Hindu) ಸುರಕ್ಷತೆಗೆ ಈ ಕಾಯಿದೆ ಬಂದಿದೆ. ಕ್ರಿಶ್ಚಿಯನ್‌ರು(Christians) ಈ ದೇಶ ನಾಶ ಮಾಡಲು ವ್ಯವಸ್ಥಿತ ಮತಾಂತರ(Conversion) ಮಾಡುತ್ತಿದ್ದಾರೆ. ವಿವೇಕಾನಂದರು ಮತಾಂತರವನ್ನು ದೇಶಾಂತರ, ಗಾಂಧೀಜಿ ವ್ಯಾಪಾರೀಕರಣ ಎಂದಿದ್ದರು. ಈ ಮಸೂದೆ ಒಪ್ಪಿಗೆ ಪಡೆದ ನಂತರ ಕ್ರಿಶ್ಚಿಯನ್‌ರು ತಮ್ಮ ಅಂಗಡಿ ಮುಚ್ಚಬೇಕು. ಕ್ರಿಶ್ಚಿಯನ್‌ ಸೇವೆ ಹಿಂದೆ ಮತಾಂತರ ಹುನ್ನಾರವೇ ಇದೆ ಎಂದು ಆರೋಪಿಸಿದರು.

Latest Videos
Follow Us:
Download App:
  • android
  • ios