Asianet Suvarna News Asianet Suvarna News

ಬಿಜೆಪಿ ಕಾರ್ಯಕರ್ತರು ಬೇಸತ್ತು ಪಕ್ಷ ಬಿಡುತ್ತಿದ್ದಾರೆ : ಸುಧಾಕರ್

ಬಿಜೆಪಿ ಪಕ್ಷ ತೊರೆದು ಜೆಡಿಎಸ್‌ ಪಕ್ಷಕ್ಕೆ ಎಸ್‌.ಆರ್‌.ಗೌಡ ಅವರು ಸೇರ್ಪಡೆಯಾಗಿರುವ ಬಗ್ಗೆ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್‌ ಅವರು ಮಾತನಾಡಿ ಎಸ್‌.ಆರ್‌.ಗೌಡ ಅವರ ಬಗ್ಗೆ ಆರೋಪಿಸಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಇದೆ ಎಂದು ಮುಖಂಡ ಲಿಂಗದಹಳ್ಳಿ ಸುಧಾಕರ್‌ ಗೌಡ ಹೇಳಿದರು.

Sudhakar Gowda Slams Vijay Raj snr
Author
First Published Nov 19, 2022, 5:12 AM IST

   ಶಿರಾ (ನ.19):  ಬಿಜೆಪಿ ಪಕ್ಷ ತೊರೆದು ಜೆಡಿಎಸ್‌ ಪಕ್ಷಕ್ಕೆ ಎಸ್‌.ಆರ್‌.ಗೌಡ ಅವರು ಸೇರ್ಪಡೆಯಾಗಿರುವ ಬಗ್ಗೆ ನಗರ ಬಿಜೆಪಿ ಅಧ್ಯಕ್ಷ ವಿಜಯರಾಜ್‌ ಅವರು ಮಾತನಾಡಿ ಎಸ್‌.ಆರ್‌.ಗೌಡ ಅವರ ಬಗ್ಗೆ ಆರೋಪಿಸಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಇದೆ ಎಂದು ಮುಖಂಡ ಲಿಂಗದಹಳ್ಳಿ ಸುಧಾಕರ್‌ ಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ವಿಜಯರಾಜ್‌ ಅವರು ಎಸ್‌.ಆರ್‌.ಗೌಡ ಅವರ ಜೊತೆಯಲ್ಲಿ ಬಿಜೆಪಿ (BJP)  ಪಕ್ಷ ತೊರೆದಿರುವ ಮುಖಂಡರು ಈ ಹಿಂದೆಯೂ ಪಕ್ಷ ನಿಷ್ಠೆ ತೋರಿಸಿಲ್ಲ ಎಂದು ಆರೋಪಿಸಿದ್ದಾರೆ. ಇದೇ ವಿಜಯ ರಾಜ್‌ ಅವರು ಜೆಡಿಎಸ್‌ (JDS)  ಪಕ್ಷದಲ್ಲಿದ್ದಾಗ ನಗರಸಭಾ ಚುನಾವಣೆಗಳಲ್ಲಿ ಅವರ ವಾರ್ಡ್‌ಗಳಲ್ಲೇ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸದೆ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಿದವರು. ಪಕ್ಷನಿಷ್ಠೆ ಬಗ್ಗೆ ಇವರಿಂದ ನಾವು ಕಲಿಯಬೇಕಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌.ಆರ್‌.ಗೌಡರು ಬಿಜೆಪಿ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದಾಗ ಇದೇ ವಿಜಯರಾಜ್‌ ಅವರು ಬಿಜೆಪಿ ಪಕ್ಷಕ್ಕೆ ಚುನಾವಣೆ ಮಾಡದೆ ಜೆಡಿಎಸ್‌ ಪಕ್ಷಕ್ಕೆ ಮಾಡಿದ್ದರು. ಅದಕ್ಕೆ ನಾನೇ ಸಾಕ್ಷಿ. ಅಂದು ನಿಮ್ಮ ಪಕ್ಷ ನಿಷ್ಠೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ ಅವರು ರಾಘವೇಂದ್ರ ಸ್ವಾಮಿ ಮೇಲೆ ಆಣೆ ಮಾಡಿ ಹೇಳಲಿ 2018ನೇ ಚುನಾವಣೆಯನ್ನು ಬಿ.ಸತ್ಯನಾರಾಯಣ ಅವರ ಪರ ಮಾಡಿಲ್ಲ. ಬಿಜೆಪಿ ಪಕ್ಷಕ್ಕೆ ಮಾಡಿದ್ದೇನೆ ಎಂದು ಹೇಳಲಿ. ನಾನೂ ಸಹ ಆಣೆ ಮಾಡುತ್ತೇನೆ ಎಂದು ಸವಾಲು ಹಾಕಿದರು.

ಶಿರಾ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಈರಣ್ಣ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಡಗಟ್ಟೆಚಂದ್ರಶೇಖರ್‌, ಮಾಜಿ ಉಪಾಧ್ಯಕ್ಷ ರಂಗನಾಥ್‌ ಗೌಡ, ಎಪಿಎಂಸಿ ಮಾಜಿ ಸದಸ್ಯೆ ಲಲಿತಮ್ಮ, ಜಯಮ್ಮ ಸೇರಿದಂತೆ ಹಲವರು ಹಾಜರಿದ್ದರು.

ರಾಜೇಶ್‌ ಗೌಡರ ಪರ ಕೆಲಸ ಮಾಡಿಲ್ಲ

ನೀವು ಬಿಜೆಪಿ ಪಕ್ಷ ಸೇರ್ಪಡೆಯಾದಾಗಿನಿಂದಲೂ ಮೂಲ ಬಿಜೆಪಿಯವರನ್ನು ಮನೆ ಸೇರುವಂತೆ ಮಾಡಿದ್ದೀರಿ. ನಿಮಗೆ ಸ್ವಲ್ಪವಾದರೂ ಬಿಜೆಪಿ ಪಕ್ಷ ಬೆಳೆಸಿದವರ ಬಗ್ಗೆ ಕಾಳಜಿ ಇದ್ದರೆ ಅವರನ್ನು ನಿಮ್ಮ ಜೊತೆಗೆ ಕರೆದುಕೊಂಡು ಅವರನ್ನು ಬೆಳೆಸುವ ಕೆಲಸ ಮಾಡುತ್ತಿದ್ರಿ. ಆ ನಿರ್ಧಾರ ನೀವು ಮಾಡುತ್ತಿಲ್ಲ. ಇಂದು ಮೂಲ ಬಿಜೆಪಿ ಕಾರ್ಯಕರ್ತರು ಬೇಸತ್ತು ಪಕ್ಷ ಬಿಡುತ್ತಿದ್ದಾರೆ. 2020ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಡಾ.ಸಿ.ಎಂ.ರಾಜೇಶ್‌ ಗೌಡರು ಸ್ಪರ್ಧಿಸಿದ್ದಾಗ ಅಂದು ರಾಜೇಶ್‌ ಗೌಡರ ಪರ ಸಹ ನೀವು ಕೆಲಸ ಮಾಡಲಿಲ್ಲ. ಇವರು ಪಕ್ಷದವರೇ ಅಲ್ಲ. ಮುಖಂಡರೇ ಅಲ್ಲ ಎಂದು ಮನೆಯಿಂದ ಹೊರಗಡೆಯೇ ಬರಲಿಲ್ಲ. ಈ ಎಲ್ಲಾ ವಿಚಾರವನ್ನು ಶಿರಾ ಜನತೆ ಗಮನಿಸಬೇಕಾಗುತ್ತದೆ. ಇವರ ಪಕ್ಷ ನಿಷ್ಠೆಯನ್ನು ನಾವು ಗಮನಿಸಬೇಕಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಭರ್ಜರಿ ರಾಜಕಾರಣ

ಶಿವಮೊಗ್ಗ  ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಭರ್ಜರಿ ರಾಜಕಾರಣ ಆರಂಭವಾಗಿದೆ. ಕಾಂಗ್ರೆಸ್‌ನಿಂದ ರಾಜ್ಯ ನಾಯಕರ ನೇತೃತ್ವದಲ್ಲಿ ಪಾದಯಾತ್ರೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರೆ, ಇದಕ್ಕೆ ವಿರುದ್ಧವಾಗಿ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಸಭೆ ಆಯೋಜನೆ ಮಾಡಿ ೧೫ ದಿನಗಳಲ್ಲಿ ಸಂತ್ರಸ್ತರ ಸಮಸ್ಯೆ ಇತ್ಯರ್ಥ ಮಾಡುವ ಭರವಸೆ ನೀಡಲಾಗಿದೆ.

ಇತ್ತೀಚಿಗೆ ನ.15ರಂದು ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಕಾಂಗ್ರೆಸ್ ನಾಯಕರಾದ ಕಾಗೋಡು ತಿಮ್ಮಪ್ಪ (Kagodu thimmappa) ಮತ್ತು ಮಧು ಬಂಗಾರಪ್ಪ (Madhu bangarappa) ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ನ.28ರಂದು ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಿಂದ ಶಿವಮೊಗ್ಗದವರೆಗೆ ಪಾದಯಾತ್ರೆ (Hiking) ನಡೆಸುವ ಘೋಷಣೆ ಮಾಡಲಾಗಿತ್ತು. ಈ ಪಾದಯಾತ್ರೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೊದಲಾದವರ ನೇತೃತ್ವದಲ್ಲಿ ಆಯೋಜಿಸಲಾಗುತ್ತಿದೆ.

ಕಾಂಗ್ರೆಸ್ ನಾಯಕರ ವೋಟ್‌ ಬ್ಯಾಂಕ್ ಪಾಲಿಟಿಕ್ಸ್ (Vote bank Politics) ಹಿನ್ನೆಲೆಯಲ್ಲಿ ಬಿಜೆಪಿ (BJP) ಕೂಡ ಇದಕ್ಕೆ ಸೆಡ್ಡು ಪ್ರಯತ್ನ ಆರಂಭಿಸಿದೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಶುಕ್ರವಾರ ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ಆಯೋಜಿಸಿ ತಿರುಗೇಟು ನೀಡಿದೆ. ಈ ಸಭೆಯಲ್ಲಿ ಮುಳುಗಡೆ ಸಂತ್ರಸ್ತರ ಪರವಾಗಿ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಬಗೆಹರಿಸುವ ಭರವಸೆ ನೀಡಿದೆ. ಜೊತೆಗೆ ಕಾಂಗ್ರೆಸ್ಸಿರ ಪಾದಯಾತ್ರೆ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸದಂತೆ ಸಂತ್ರಸ್ತರಿಗೆ ಮನವಿ ಮಾಡಲಾಗಿದೆ.

Follow Us:
Download App:
  • android
  • ios