ವಿದೇಶಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಪರಂ ಪ್ರಶಂಸೆ

ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಅರೋಟಿಕ್ ಡಿಸೆಕ್ಷನ್‌ ಶಸ್ತ್ರಚಿಕಿತ್ಸೆ ನಡೆಸಿದ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ವೈದ್ಯರ ತಂಡ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.

Successful surgery for foreign woman: high praise snr

  ತುಮಕೂರು :  ವಿದೇಶಿ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಅರೋಟಿಕ್ ಡಿಸೆಕ್ಷನ್‌ ಶಸ್ತ್ರಚಿಕಿತ್ಸೆ ನಡೆಸಿದ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ವೈದ್ಯರ ತಂಡ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ, ಈಗಾಗಲೇ 1 ಸಾವಿರಕ್ಕೂ ಹೆಚ್ಚು ಹೃದಯ ಸಂಬಂಧಿತ ಶಸ್ತ್ರಚಿಕಿತ್ಸೆಗಳನ್ನುನಡೆಸಿ ದಾಪುಗಾಲು ಇಟ್ಟಿರುವ ಸಿದ್ಧಾರ್ಥ ಅಡ್ವಾನ್ಲ್ಜ್ ಹಾರ್ಟ್ ಸೆಂಟರ್‌ ಮತ್ತು ಕಾರ್ಡಿಯಾಕ್ ಫ್ರಾಂಟಿಡಾ ಈ ಯಶಸ್ವಿಶಸ್ತ್ರಚಿಕಿತ್ಸೆಯಿಂದ ಮತ್ತೊಂದು ಗರಿ ಮೂಡಿಗೆರಿಸಿಕೊಂಡಿದೆ. ಇಂತಹ ಸಂಕೀರ್ಣ ಹೃದಯ ಸಂಬಂಧಿತ ಶಸ್ತ್ರ ಚಿಕಿತ್ಸೆ ನಡೆಸಿದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿ ಸಾಟಿ ಆಗಬಲ್ಲ ನುರಿತ ತಜ್ಞ ಡಾ.ತಮಿಮ್‌ ಅಹ್ಮದ್ ಮತ್ತು ವೈದ್ಯ ಸಮೂಹ ಮತ್ತು ತಾಂತ್ರಿಕ ತಜ್ಞರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ ಡಾ.ಜಿ.ಪರಮೇಶ್ವರ ತಂಡ ಪ್ರಶಂಸಿದರು.

ಭಾರತದಿಂದ ಬೇರೆ ದೇಶಗಳಿಗೆ ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳು ತೆರಳುವುದು ಸಹಜ. ಆದರೆ, ವೆಸ್ಟ್ಆಫ್ರಿಕಾದ ಅರೋಟಿಕ್‌ ಡಿಸೆಕ್ಷನ್‌ ಶಸ್ತ್ರಚಿಕಿತ್ಸೆಗೆ ಆಗಮಿಸಿದ 65 ವರ್ಷದ ಸಿಯೆರಾ ಲಿಯೋನ್ನ ಸತತ 20 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಇದೀಗ ಗುಣಮುಖರಾಗಿದ್ದು, ಎಲ್ಲರಂತೆ ಸಹಜ ಸ್ಥಿತಿಗೆ ತಲುಪಿದ್ದಾರೆ ಎಂದರು.

ಕಾರ್ಡಿಯಾಕ್ ಫ್ರಾಂಟಿಡಾ ಮುಖ್ಯಸ್ಥ ಡಾ.ತಮಿಮ್‌ ಅಹ್ಮದ್‌ಮಾತನಾಡಿ, ಹೃದಯ ಶಸ್ತ್ರಚಿಕಿತ್ಸೆ ತುಮಕೂರಿನಂತಹ ಶ್ರೇಣಿಯ ನಗರದಲ್ಲಿ ಮಾಡಿರುವುದು ದೊಡ್ಡ ಸಾಧನೆ ಎಂದರು.

ರಿಪ್ಲಬಿಕ್‌ ಆಫ್ ಮಾಲ್ಡೀವ್ಸ್ನಹೈ ಕಮೀಷನರ್‌ಎಚ್ ಇ ಇಬ್ರಾಹಿಂ ಶಾಹೀಬ್‌ ಮಾತನಾಡಿ, ಮಾಲ್ಡೀವ್ಸ್ ನಿಂದ ಬೆಂಗಳೂರಿಗೆ ಚಿಕಿತ್ಸೆಗಾಗಿ ಬರುತ್ತಾರೆ. ತುಮಕೂರಿನಲ್ಲಿ ಇಂತಹದೊಂದು ಆಸ್ಪತ್ರೆ ಇರುವ ಮಾಹಿತಿ ನಮಗಿರಲಿಲ್ಲ. ಗ್ರಾಮೀಣ ಭಾಗದ ಜನರಿಗಾಗಿ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡುತ್ತಿರುವುದು ಸಂತಸ ಎಂದರು.

ದಕ್ಷಿಣ ಏಷ್ಯಾದ ಮೆಡೆಸಿನ್ಸ್‌ ನಿರ್ದೇಶಕ ಸಚಿನ್ ಸಿಂಗ್ ಮಾತನಾಡಿ, ನಮ್ಮ ದೇಶದ ವೈದ್ಯರು ವಿದೇಶಗಳಿಗೆ ತೆರಳಿ ಅಲ್ಲಿ ರೋಗಿಗಳಿಗೆ ನಿಸ್ವಾರ್ಥ ಸೇವೆ ಒದಗಿಸುತ್ತಾರೆ. ವಿದೇಶರೋಗಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿರುವುದು ಹೆಮ್ಮೆಯ ವಿಷಯ ಎಂದರು.

ಚಲನಚಿತ್ರ ನಟ ಚೇತನ್‌ಕುಮಾರ್ ಅಹಿಂಸಾ ಮಾತನಾಡಿ, ಬಡ ಮತ್ತುಗ್ರಾಮೀಣ ಭಾಗದ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಈ ರೀತಿ ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ.ಇದೊಂದು ಸಮಾಜ ಮುಖ ಕಾರ್ಯಎಂದರು.

ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಸದಸ್ಯರಾದಕನ್ನಿಕಾ ಪರಮೇಶ್ವರಿ, ವೈದ್ಯರತಂಡ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಹಾಜರಿದ್ದರು.

Latest Videos
Follow Us:
Download App:
  • android
  • ios