Mandya: ಭತ್ತದ ಫಸಲು ಶೇ.90 ರಷ್ಟು ಜೊಳ್ಳು, ಖಾಸಗಿ ಕಂಪನಿಯಿಂದ ಕಳಪೆ ಬಿತ್ತನೆ ಬೀಜ ಮಾರಾಟ?

- ಖಾಸಗಿ ಕಂಪನಿಯಿಂದ ಕಳಪೆ ಬಿತ್ತನೆ ಬೀಜ ಮಾರಾಟ?

- ಸಾಲ ಮಾಡಿ ಬೇಸಾಯ ಮಾಡಿದ್ದ ರೈತರಿಗೆ ಎದುರಾಯ್ತು ಸಂಕಷ್ಟ

- ಬೆಂಕಿ ರೋಗಕ್ಕೆ ತುತ್ತಾಗಿ ಭತ್ತದ ಫಸಲು ಶೇ.90ರಷ್ಟು ನಾಶ

Substandard Quality of Seeds Puts Mandya Farmers in Hardship hls

ಮಂಡ್ಯ (ಡಿ. 27):  ಈ ಬಾರಿ ಮುಂಗಾರು (Monsoon) ಮಳೆ ಆರಂಭದಲ್ಲಿ ನಿರೀಕ್ಷಿತ ಮಟ್ಟಕ್ಕೆ ಬೀಳದಿದ್ದಾಗ ಸಕ್ಕರೆ ನಾಡು ಮಂಡ್ಯದ (Mandya)ರೈತರು ಆತಂಕಕ್ಕೆ ಒಳಗಾಗಿದ್ದರು. ಬಳಿಕ ವರುಣನ ಅಬ್ಬರಕ್ಕೆ ಕೆ.ಆರ್.ಎಸ್ (KRS)ಡ್ಯಾಂ ಸಂಪೂರ್ಣ ಭರ್ತಿಯಾಗಿದ್ರಿಂದ ನಿಟ್ಟುಸಿರು ಬಿಟ್ಟು ಕೃಷಿಯಲ್ಲಿ ತೊಡಗಿದ್ದರು. 

ಅದರಂತೆ ಮಂಡ್ಯ (Mandya) ತಾಲೂಕಿನ ಹಳೇ ಬೂದನೂರು ಹಾಗೂ ಕಚ್ಚಿಗೆರೆ ಗ್ರಾಮದ 15ಕ್ಕೂ ಹೆಚ್ಚು ರೈತರು ಮೈಲಾರಲಿಂಗೇಶ್ವರ ಆಗ್ರೋ ಏಜೆನ್ಸೀಸ್ ನಲ್ಲಿ ಖಾಸಗಿ ಕಂಪನಿಯ ಭತ್ತದ ಬಿತ್ತನೆ ಬೀಜ ಖರೀದಿಸಿ ನಾಟಿ ಮಾಡಿದ್ದರು.  ಉಳುಮೆ, ಕಾರ್ಮಿಕರ ಕೂಲಿ, ಗೊಬ್ಬರ ಹಾಗೂ ಔಷಧೋಪಚಾರಕ್ಕೆ ಅಂತ ಪ್ರತಿ ಎಕರೆಗೆ ಸುಮಾರು 30 ಸಾವಿರ ಹಣ ಖರ್ಚು ಮಾಡಿದ್ರು. ಇನ್ನೇನು ಭತ್ತ ಕಾಳು ಕಟ್ಟುವ ಸಮಯಕ್ಕೆ ಇಡೀ ಫಸಲಿಗೆ ರೋಗ ಆವರಿಸಿಕೊಂಡು ಶೇ.90ರಷ್ಟು ಭಾಗ ಜೊಳ್ಳಾಗಿದೆ. ಎಕರೆಗೆ 40 ಕ್ವಿಂಟಾಲ್ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

"

ರೈತರು ಬಿತ್ತನೆ ಬೀಜ ಖರೀದಿಸುವಾಗ ತಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ತಳಿಯ ಬಿತ್ತನೆ ಬೀಜ ಕೇಳಿದ್ರಂತೆ. ಆದ್ರೆ ಏಜೆನ್ಸೀಸ್ ನ ಮಾಲೀಕರು ಸಿರಿ ಎಂಬ ಹೊಸ ತಳಿ ಬಂದಿದೆ. ಮೂರವರೆ ಅಡಿ ಬೆಳೆಯುವ ಜತೆಗೆ ಉತ್ತಮ ಇಳುವರೆ ಕೊಡುತ್ತೆ. ಅದಕ್ಕೆ ನಾವು ಗ್ಯಾರಂಟಿ ಅಂತೆಲ್ಲಾ ಭರವಸೆ ನೀಡಿ ಬಿತ್ತನೆ ಬೀಜ ನೀಡಿದ್ರಂತೆ. ಆದ್ರೆ ಫಸಲು ನಷ್ಟವಾದ ಬಳಿಕ ಕೇಳಿದ್ರೆ ಸರಿಯಾದ ನಿರ್ವಹಣೆ ಇಲ್ಲದೇ ರೋಗಕ್ಕೆ ತುತ್ತಾಗಿದೆ ಎಂದು ಕಥೆ ಹೇಳ್ತಿದ್ದಾರೆ ಅಂತ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

Chikkamagaluru: ಚಿಕ್ಕಮಗಳೂರು ಜಿಲ್ಲೆಯ ನಿರಾಶ್ರಿತರ ಬದುಕು ನಿರ್ಗತಿಕರಿಗಿಂತ ಕಡೆ..!

 ಸದ್ಯ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿ.ಸಿ.ಫಾರಂ ಕೃಷಿ ಸಂಶೋಧನಾ ಕೇಂದ್ರದ ವಿಜಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ನಷ್ಟಕ್ಕೆ ನಿಖರ ಕಾರಣ ಏನೆಂಬುದರ ಬಗ್ಗೆ ವರದಿ ನೀಡಲಿದ್ದಾರೆ. ಒಟ್ಟಾರೆ ಹಳೇ ಬೂದನೂರು ಗ್ರಾಮದ 15ಕ್ಕೂ ಹೆಚ್ಚು ಮಂದಿ ರೈತರು ಬೆಳೆದಿದ್ದ ಭತ್ತ ನಷ್ಟವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರೊಂದಿಗೆ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಚಿಂತನೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios