Asianet Suvarna News Asianet Suvarna News

ಮೈಸೂರಲ್ಲಿ ಮೆಟ್ರೋ ಲೈಟ್‌ ಯೋಜನೆ ಬಗ್ಗೆ ಅಧ್ಯಯನ!

  • ಮೆಟ್ರೋ ಲೈಟ್‌ ಅಥವಾ ಮೆಟ್ರೋ ನಿಯೋ ಯೋಜನೆಯನ್ನು ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ
  • ಕಾರ‍್ಯರೂಪಕ್ಕೆ ಬಂದರೆ ರಾಜ್ಯದ ಇತರೆ ನಗರಗಳಿಗೂ ಮೆಟ್ರೋ ಎಂಟ್ರಿಕೊಡುವ ಸಾಧ್ಯತೆ
study for metro light project mysore snr
Author
Bengaluru, First Published Aug 15, 2021, 8:47 AM IST
  • Facebook
  • Twitter
  • Whatsapp

 ಮೈಸೂರು (ಆ.15):  ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಮೆಟ್ರೋ ಲೈಟ್‌ ಅಥವಾ ಮೆಟ್ರೋ ನಿಯೋ ಯೋಜನೆಯನ್ನು ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಇದೇನಾದರೂ ಕಾರ‍್ಯರೂಪಕ್ಕೆ ಬಂದರೆ ರಾಜ್ಯದ ಇತರೆ ನಗರಗಳಿಗೂ ಮೆಟ್ರೋ ಎಂಟ್ರಿಕೊಡುವ ಸಾಧ್ಯತೆ ಇದೆ.

ಮುಂದಿನ 30 ವರ್ಷಗಳಲ್ಲಿ ನಗರದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಮೆಟ್ರೋ ಲೈಟ್‌/ನಿಯೋ ಯೋಜನೆ ತರುವ ಸಂಬಂಧ ಕಾರ್ಯಾಸಾಧ್ಯತಾ ವರದಿ ತಯಾರಿಸುವ ಪ್ರಸ್ತಾವನೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ. ನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಈ ಯೋಜನೆ ಸಿದ್ಧಪಡಿಸುವ ಸಂಬಂಧ ಅನುಮೋದನೆ ನೀಡಲಾಗಿದೆ ಎಂದು ಶನಿವಾರ ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋಗೆ ಬಿಎಂಟಿಸಿ ಸಾಥ್ : ನಿಲ್ದಾಣದಲ್ಲಿ ಬಸ್ ನಿಲುಗಡೆ

ಕೇಂದ್ರ ಸರ್ಕಾರವು 2021-22ನೇ ಸಾಲಿನ ಆಯವ್ಯಯದಲ್ಲಿ ಎರಡನೇ ಹಂತದ ನಗರಗಳಲ್ಲಿ ಈ ರೀತಿಯ ಯೋಜನೆಗಾಗಿ 18 ಸಾವಿರ ಕೋಟಿಗೂ ಹೆಚ್ಚು ಅನುದಾನ ಕಾಯ್ದಿರಿಸಿದೆ. ನಾಸಿಕ್‌ನಲ್ಲಿ ಇದೇ ಮಾದರಿಯಲ್ಲಿ ಮೆಟ್ರೋ ರೈಲು ಓಡಿಸಲು ಉದ್ದೇಶಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಮೈಸೂರು ನಗರಕ್ಕೆ ಈ ಯೋಜನೆ ತರುವ ಸಂಬಂಧ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೇಲ್ಸೇತುವೆ ಮೂಲಕ ಸಂಚರಿಸುವ ಯೋಜನೆಯ ಪ್ರತಿ ಕಿ.ಮೀ.ಗೆ . 75 ಕೋಟಿ, ಸುರಂಗ ಮಾರ್ಗದಲ್ಲಿ ಸಂಚರಿಸುವುದಾದರೆ . 150 ಕೋಟಿ ವೆಚ್ಚ ತಗಲುತ್ತದೆ ಎಂದು ಹೇಳಿದರು.

Follow Us:
Download App:
  • android
  • ios