ಗಡಿಗ್ರಾಮಗಳಲ್ಲಿ ಸಿಗದ ಸಾರಿಗೆ ಸೌಲಭ್ಯ: ವಿದ್ಯಾರ್ಥಿಗಳ ಆಕ್ರೋಶ

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ಪಾಸ್‌ಗಳನ್ನು ನೀಡಿದ್ದರೂ, ಬಸ್‌ಗಳನ್ನು ನೀಡದೆ ಸಾರಿಗೆ ಸಂಸ್ಥೆ ಸತಾಯಿಸುತ್ತಿದೆ. ರಾಜ್ಯ ಗಡಿ ಪ್ರದೇಶದ ಗ್ರಾಮಗಳಲ್ಲಿ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಚಿತ್ರದುರ್ಗದ ಚಳ್ಳಕೆರೆಯ ವಿದ್ಯಾರ್ಥಿಗಳು ಬಸ್‌ ಒದಗಿಸುವಂತೆ ಆಗ್ರಹಿಸಿದ್ದಾರೆ.

Students in Chitradurga protest against bus problem in border villages

ಚಿತ್ರದುರ್ಗ(ಜು.28): ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್‌ಪಾಸ್‌ಗಳನ್ನು ನೀಡಿದ್ದರೂ, ಬಸ್‌ಗಳನ್ನು ನೀಡದೆ ಸಾರಿಗೆ ಸಂಸ್ಥೆ ಸತಾಯಿಸುತ್ತಿದೆ. ರಾಜ್ಯ ಗಡಿ ಪ್ರದೇಶದ ಗ್ರಾಮಗಳಲ್ಲಿ ಬಸ್‌ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಚಿತ್ರದುರ್ಗದ ಚಳ್ಳಕೆರೆಯ ವಿದ್ಯಾರ್ಥಿಗಳು ಬಸ್‌ ಒದಗಿಸುವಂತೆ ಆಗ್ರಹಿಸಿದ್ದಾರೆ.

ಬಸ್‌ಗಾಗಿ ಮುಗಿಯದ ಪರದಾಟ:

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶದ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ತಾಲೂಕು ಕೇಂದ್ರದಿಂದ 30 ಕಿ.ಮೀ. ದೂರವಿರುವ ಗಡಿ ಗ್ರಾಮಗಳ ಜನ ಹಾಗೂ ವಿದ್ಯಾರ್ಥಿಗಳು ನಿತ್ಯ ಬಸ್‌ ಸೌಕರ್ಯಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

ತಾಲೂಕಿನ ತಳಕು ಹೋಬಳಿಯ ಓಬಳಾಪುರ ಗ್ರಾಮದಿಂದ ಬಸಾಪುರ ಗ್ರಾಮದ ಮೂಲಕ ದೊಡ್ಡಉಳ್ಳಾರ್ತಿ ಮೂಲಕ ಚಳ್ಳಕೆರೆ ಸೇರುವ ಕೆಎಸ್‌ಆರ್‌ಟಿಸಿ ಒಂದು ಬಸ್‌ ಮಾತ್ರ ಪ್ರತಿದಿನ 7.30ಕ್ಕೆ ಓಬಳಾಪುರ ಗ್ರಾಮಕ್ಕೆ ಬರುತ್ತಿದ್ದು, ಈ ಬಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಅನಿವಾರ್ಯವಾಗಿ ಪ್ರಯಾಣಿಸಬೇಕಿದ್ದು, ಇದರಿಂದ ಬಸ್‌ನ ಬಾಗಿಲ ಬಳಿ ನಿಂತು ಪ್ರಾಯಾಣಿಸುವಂತಾಗಿದೆ.

ಮೈಸೂರು: ಬಸ್‌ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳ ಪರದಾಟ

ಇದೇ ಮಾರ್ಗದಲ್ಲಿ ಮತ್ತೊಂದು ಬಸ್‌ ಬೆಳಗ್ಗೆ 6ಗಂಟೆಗೆ ಓಡಿಸಬೇಕೆಂದು ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್‌ ವ್ಯವಸ್ಥೆ ಇಲ್ಲದೆ, ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವ ಸ್ಥಿತಿ ಉಂಟಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೂಡಲೇ ಬಸ್‌ ಸೌಕರ್ಯ ಒದಗಿಸಬೇಕೆಂದು ಮೈಲನಹಳ್ಳಿ ನಾಗರಾಜು, ಗೋವಿಂದಪ್ಪ, ವಿದ್ಯಾರ್ಥಿಗಳಾದ ದರ್ಶನ್‌ಗೌಡ, ಪುನೀತ್‌, ಸಿದ್ದೇಶ್‌ಕುಮಾರ್‌, ನರಸಿಂಹ ಮತ್ತಿತರರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios