ಕೂಡ್ಲಿಗಿ: ತಂದೆ ಸಾವಿನ ದುಃಖದಲ್ಲೂ SSLC ಪರೀಕ್ಷೆ ಬರೆದ ವಿದ್ಯಾರ್ಥಿನಿ

* ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಣಣದಲ್ಲಿ ನಡೆದ ಘಟನೆ
* ಬ್ಲ್ಯಾಕ್‌ ಫಂಗಸ್‌ನಿಂದ ತಂದೆ ನಿಧನ
* ಪರೀಕ್ಷೆ ಬರೆದ ಬಳಿಕ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಚಂದನಾ 
 

Student Wrote SSLC Exam While Grief of the Death of the Father at Kudligi grg

ಕೂಡ್ಲಿಗಿ(ಜು.23): ಬ್ಲ್ಯಾಕ್‌ ಫಂಗಸ್‌ನಿಂದ ತಂದೆ ನಿಧನರಾದ ದುಃಖದ ನಡುವೆಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆ ಬರೆದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

ತಾಲೂಕಿನ ಹೊಸಹಟ್ಟಿಯ ಸಣ್ಣಓಬಯ್ಯ(51) ಬ್ಲಾಕ್‌ ಫಂಗಸ್‌ನಿಂದ ಬುಧವಾರ ರಾತ್ರಿ ನಿಧನರಾದರು. ತಂದೆಯ ಸಾವಿನ ದುಃಖದಲ್ಲೂ ಅವರ ಪುತ್ರಿ ಚಂದನಾ ಕೂಡ್ಲಿಗಿಯ ಹಿರೇಮಠ ವಿದ್ಯಾಪೀಠ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಳು.

ಯಾದಗಿರಿ: ತಂದೆ ಸಾವಿನ ಶೋಕದಲ್ಲೂ SSLC ಪರೀಕ್ಷೆ ಬರೆದ ಪುತ್ರಿ..!

ಜೂ. 1ರಂದು ಬ್ಲ್ಯಾಕ್‌ಫಂಗಸ್‌ ತಗುಲಿದ ಹಿನ್ನೆಲೆ ವೈದ್ಯರ ಸಲಹೆಯಂತೆ ಸಣ್ಣಓಬಯ್ಯ ಅವರನ್ನು ಬಳ್ಳಾರಿ ವಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವಾರದ ಹಿಂದೆಯಷ್ಟೇ ಅವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆಯನ್ನು ಕುಟುಂಬದವರು ಇಟ್ಟುಕೊಂಡಿದ್ದರು. ಆದರೆ ಬುಧವಾರ ರಾತ್ರಿ 11.30 ಗಂಟೆ ಸುಮಾರಿಗೆ ವಿಮ್ಸ್‌ನಲ್ಲಿ ಸಣ್ಣಓಬಯ್ಯ ನಿಧನರಾದರು. ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಆ ಪೈಕಿ ಕೊನೆಯ ಪುತ್ರಿಯಾದ ಚಂದನಾ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು.ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಚಂದನಾ ನಂತರ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದಳು.
 

Latest Videos
Follow Us:
Download App:
  • android
  • ios