Asianet Suvarna News Asianet Suvarna News

ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ : ವಿವಸ್ತ್ರಗೊಳಿಸಿ ಫೋಟೊ ತೆಗೆದು ಬ್ಲ್ಯಾಕ್‌ಮೇಲ್

  • ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಶಿಕ್ಷಕನಿಂದ ಬ್ಲ್ಯಾಕ್ ಮೇಲ್
  • ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ  ಘಟನೆ 
  • 2018ರಿಂದಲೂ ಇದೇ ರೀತಿ ಅತ್ಯಾಚಾರ ಮತ್ತು ಬೆದರಿಕೆ ಹಾಕುತ್ತಿದ್ದ ದಂಪತಿ
Student  sexually Assaulted By teacher in Dakshina Kannada snr
Author
Bengaluru, First Published Aug 8, 2021, 3:56 PM IST
  • Facebook
  • Twitter
  • Whatsapp

ಸುಬ್ರಹ್ಮಣ್ಯ (ಆ.08):  ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಶಿಕ್ಷಕನೋರ್ವ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ  ಘಟನೆ ನಡೆದಿದ್ದು, ಪ್ರಾಜೆಕ್ಟ್ ವರ್ಕ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಮನೆಗೆ ಕರೆಸಿಕೊಂಡು ಕೃತ್ಯ ಎಸಗಿದ್ದಾನೆನ್ನಲಾಗಿದೆ.  

ಶಿಕ್ಷಕ ಗುರುರಾಜ್ ಎಂಬಾತ ಕೃತ್ಯ ಎಸಗಿದ್ದು ಇದಕ್ಕೆ ಆತನ ಪತ್ನಿ ರಾಜೇಶ್ವರಿಯೂ ಸಾಥ್ ನೀಡಿದ್ದಾಳೆ. ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಗುರುರಾಜ್ ಅತ್ಯಾಚಾರ ಮಾಡಿದ್ದು,
ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ಮೊಬೈಲ್ ಮೂಲಕ ಫೋಟೋವನ್ನು ತೆಗೆಯುತ್ತಿದ್ದರೆನ್ನಲಾಗಿದೆ. 

ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಮೈವಿವಿ ಪ್ರಾಧ್ಯಪಕ, ಪತ್ನಿಗೆ ನೋಟಿಸ್

ಫೋಟೋ ತೋರಿಸಿ ಮನೆಯಿಂದ ಹಣ ತರುವಂತೆ ಬೆದರಿಸುತ್ತಿದ್ದ ಆರೋಪಿಗಳು ಇದನ್ನೇ ದಂಧೆ ಮಾಡಿಕೊಂಡಿದ್ದರು.  2018ರಿಂದಲೂ ಇದೇ ರೀತಿ ಅತ್ಯಾಚಾರ ಮತ್ತು ಬೆದರಿಕೆ ಹಾಕುತ್ತಿದ್ದು, ಇದೀಗ ವಿದ್ಯಾರ್ಥಿನಿಯಿಂದ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಬ್ರಹ್ಮಣ್ಯದ ಪ್ರೌಢಶಾಲಾ ಶಿಕ್ಷಕ ರಾಯಚೂರು ಮೂಲದ ಗುರುರಾಜ್ ಮತ್ತು ಆತನ ಪತ್ನಿಯನ್ನು ವಶಕ್ಕೆ ಪಡೆದ‌ ಸುಬ್ರಹ್ಮಣ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow Us:
Download App:
  • android
  • ios