Asianet Suvarna News Asianet Suvarna News

ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾದ ವಿದ್ಯಾರ್ಥಿನಿ

ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿಯ ಕಾರ್ಯ ಚಟುವಟಿಕೆಗಳ ಜೊತೆ ಒಂದು ದಿನದ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಲು ವಿದ್ಯಾರ್ಥಿನಿ ಎಲ್ .ವರಲಕ್ಷ್ಮಿಯ ನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಜಯ್‌ ಕುಮಾರ್‌ ತಮ್ಮ ಕಚೇರಿಯಲ್ಲಿ ಸ್ವಾಗತಿಸಿದರು.

 student   became a youth sports officer for a day snr
Author
First Published Oct 12, 2022, 5:29 AM IST | Last Updated Oct 12, 2022, 10:21 AM IST

ಚಿಕ್ಕಬಳ್ಳಾಪುರ (ಅ.12):  ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಅಧಿಕಾರಿಯ ಕಾರ್ಯ ಚಟುವಟಿಕೆಗಳ ಜೊತೆ ಒಂದು ದಿನದ ಕ್ರೀಡಾಧಿಕಾರಿಯಾಗಿ ಸೇವೆ ಸಲ್ಲಿಸಲು ವಿದ್ಯಾರ್ಥಿನಿ ಎಲ್ .ವರಲಕ್ಷ್ಮಿಯ ನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಜಯ್‌ ಕುಮಾರ್‌ ತಮ್ಮ ಕಚೇರಿಯಲ್ಲಿ ಸ್ವಾಗತಿಸಿದರು.

ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಲ್ .ವರಲಕ್ಷ್ಮಿ, 2022 ನೇ ಸಾಲಿನ ಕಬಡ್ಡಿ ಕ್ರೀಡೆಯಲ್ಲಿ ದಕ್ಷಿಣ ವಲಯದಿಂದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ರಾಷ್ಟ್ರೀಯ ಕ್ರೀಡಾಪಟು.

ಕಚೇರಿ ಕೆಲಸಗಳ ಬಗ್ಗೆ ಪರಿಚಯ
ರಾಷ್ಟ್ರೀಯ ಕ್ರೀಡಾಪಟುವಾಗಿ ಹೊರಹೊಮ್ಮಿ ಮಹಿಳೆಯರಿಗೆ ಸ್ಫೂರ್ತಿಯಾಗಿರುವ ವರಲಕ್ಷ್ಮೇ ಒಂದು ದಿನದ ಮಟ್ಟಿಗೆ ಜಿಲ್ಲಾ ಕ್ರೀಡಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮೊದಲಿಗೆ ನಗರದ ಸರ್‌.ಎಂ.ವಿಶ್ವೇರಯ್ಯ ಜಿಲ್ಲಾ ಕ್ರೀಡಾಂಗಣ, ಒಳ ಕ್ರೀಡಾಂಗಣ, ಚಿಂತಾಮಣಿ ತಾಲೂಕಿನ ಕ್ರೀಡಾಂಗಣ ಸೇರಿದಂತೆ ಕಚೇರಿಯ ವಿವಿಧ ಕೆಲಸ ಕಾರ್ಯಗಳ ಕುರಿತು ಪರಿಚಯ ಮಾಡಿಕೊಟ್ಟರು. ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಭಾರತದಲ್ಲಿನ ಬ್ರಿಟಿಷ್‌ ಹೈಕಮಿಷನ್‌ ನಮ್ಮ ದೇಶದ 18 ರಿಂದ 23ರ ವಯಸ್ಸಿನ ಯುವತಿಯರಿಗೆ ಯುಕೆಯ ಉನ್ನತ ರಾಜತಾಂತ್ರಿಕ ಅಧಿಕಾರಿಯ ಒಂದು ದಿನದ ಆಡಳಿತ ಚಟುವಟಿಕೆಗಳ ಅನುಭವ ಪಡೆಯಲು ಅವಕಾಶವನ್ನು ಕಲ್ಪಿಸಲು ಹೈಕಮಿಷನರ್‌ ಫಾರ್‌ ಎ ಡೇ ಸ್ಪರ್ಧೆ ಏರ್ಪಡಿಸುತ್ತದೆ.

U-17 WOMEN'S WORLD CUP: ಬಲಿಷ್ಠ ಅಮೆರಿಕ ಎದುರು ಭಾರತಕ್ಕೆ ಸೋಲಿನ ಆರಂಭ

ಹೆಣ್ಣು ಮಕ್ಕಳ ದಿನದ ಪ್ರಯುಕ್ತ ಅವಕಾಶ
ಅದೇ ರೀತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಕಾರ್ಯ ವೈಖರಿಯನ್ನು ಪರಿಚಯಿಸಲು 18 ರಿಂದ 23 ವರ್ಷ ವಯಸ್ಸಿನ ಯುವತಿಯರು ಆಯಾ ಜಿಲ್ಲೆಗಳ ಸಹಾಯಕ ನಿರ್ದೇಶಕರ ಜೊತೆಯಲ್ಲಿ ಒಂದು ದಿನ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಂದು ಒಂದು ದಿನ ಯುವ ಕ್ರೀಡಾ ಅಧಿಕಾರಿಯಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ  ಎಲ್ .ವರಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಜಯ್‌ ಕುಮಾರ್‌ ಅವರು ತಿಳಿಸಿದರು.

ಕ್ರೀಡಾ ಶಿಕ್ಷಕಿಯಾಗುವ ಗುರಿ
ಉತ್ತಮ ಕ್ರೀಡಾಪಟುವಾಗಿ, ಕ್ರೀಡಾ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಾರ್ಯಗಳು ಸಕಾರಗೊಳ್ಳಲು ಶ್ರಮಿಸುತ್ತೇನೆ ಎಂದು ಎಲ್ .ವರಲಕ್ಷ್ಮಿ ಇಳಿಸಿದರು.

  •   .ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾದ ವಿದ್ಯಾರ್ಥಿನಿ ಎಲ್ .ವರಲಕ್ಷ್ಮಿ
  • ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಚಟುವಟಿಕೆಗಳ ಕುರಿತು ದಿನವೀಡಿ ವೀಕ್ಷಣೆ
  • ಒಂದು ದಿನಕ್ಕೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಈ ಯುವತಿ!

    ಬಾಗಲಕೋಟೆ: ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಯ ಒಂದು ದಿನದ ಅನುಭವವನ್ನು ತಾಲೂಕಿನ ಹಳ್ಳೂರ ಗ್ರಾಮದ ಯುವತಿ ಮಲ್ಲಮ್ಮ ಪರನಗೌಡರ ಪಡೆದುಕೊಂಡರು.

    ಮಂಗಳವಾರ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಜೊತೆ ಒಂದು ದಿನ ಇದ್ದು, ಕಾರ್ಯನಿರ್ವಹಣೆಯ ಅನುಭವ ಪಡೆದುಕೊಂಡರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಗೂಡನವರ ಅಧಿಕಾರದ ಕಾರ್ಯನಿರ್ವಹಣೆ ಅನುಭವ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಮಲ್ಲಮ್ಮ ಹರ್ಷ ವ್ಯಕ್ತಪಡಿಸಿದರು.

    Pro Kabaddi League ಹರ್ಯಾಣ ಹಾಗೂ ತೆಲುಗು ಟೈಟಾನ್ಸ್‌ಗೆ ಗೆಲುವಿನ ಸಿಹಿ!

    ಮಲ್ಲಮ್ಮ 20 ವರ್ಷದವರಾಗಿದ್ದು, ಪದವಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾರೆ. ಅವರು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್‌ ಮತ್ತು ಖೋಖೋದಲ್ಲಿ ಸಾಧನೆ ಮಾಡಿ, ಜಿಲ್ಲೆಗೆ ಹೆಸರು ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಮ್ಮಳಿಗೆ ಒಂದು ದಿನದ ಸಹಾಯಕ ನಿರ್ದೇಶಕರ ಹುದ್ದೆಯ ಅನುಭವ ಪಡೆದುಕೊಂಡರು.

Latest Videos
Follow Us:
Download App:
  • android
  • ios