ಸುಂಟಿಕೊಪ್ಪ (ಆ.24): ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಸರ್ಕಾರದಿಂದ ಅಧಿಕೃತ ಗುತ್ತಿಗೆ ಪಡೆದು ಕಾವೇರಿ ಮೀನುಗಾರಿಕ ಸಹಕಾರ ಸಂಘ ಮೀನು ಮರಿಗಳನ್ನು ಬಿಟ್ಟಿದ್ದು, ಈ ಪ್ರದೇಶದಿಂದ ಮೀನು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಸಂಘ ಅಧ್ಯಕ್ಷ ಇ.ಎಸ್‌.ಶ್ರೀನಿವಾಸ ತಿಳಿಸಿದ್ದಾರೆ. 

ಹಾರಂಗಿ ಜಲಾಶಯದಿಂದ ಗರಗಂದೂರು ಹಾರ್‌ಬೈಲ್‌ ಪ್ರದೇಶದ ಹಿನ್ನೀರಿನಲ್ಲಿ ಲಕ್ಷಾಂತರ ರು. ಮೌಲ್ಯದ ಮೀನು ಮರಿಗಳನ್ನು ಬಿಡಲಾಗಿದೆ. 2021 ಮಾಚ್‌ರ್‍ ವರೆಗೆ ಕಾವೇರಿ ಮೀನುಗಾರಿಕಾ ಸಹಕಾರ ಸಂಘ ಗುತ್ತಿಗೆ ಪಡೆದಿದೆ. ಕಳೆದ ವರ್ಷ ಮೀನು ಗುತ್ತಿಗೆ ಪಡೆದಾಗ ಕಳ್ಳರು ಬಲೆ ಹಾಗೂ ಹರಿಗೋಲು ಬಳಸಿ ಮೀನು ಕದ್ದು ಮಾರಾಟ ಮಾಡಿದ್ದಾರೆ. 

ಕುಮಟಾ: ಮುಳುಗಿದ ಬೋಟ್‌, ಮೀನುಗಾರರ ರಕ್ಷಣೆ, ತಪ್ಪಿದ ಭಾರೀ ಅನಾಹುತ.

 ಇದರಿಂದ ಸಂಘಕ್ಕೆ ಲಕ್ಷಾಂತರ ರು. ನಷ್ಟವಾಗಿದೆ. ಈ ವರ್ಷ ಸಂಘದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮೀನು ಕದ್ದರೆ ಪೊಲೀಸರ ಮೂಲಕ ದಾಳಿ ನಡೆಸಿ ಅವರ ಬಲೆ ಹಾಗೂ ಹರಿಗೋಲನ್ನು ಮುಟ್ಟು ಹಾಕಿಕೊಂಡು ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.