ಬಾದಾಮಿ: ರಂಗನಾಥ ಗುಡ್ಡದಲ್ಲಿ 2 ಲಕ್ಷ ವರ್ಷದ ಆಯುಧ ಪತ್ತೆ!
ಬಾದಾಮಿಯಲ್ಲಿ ಸುಮಾರು 2 ಲಕ್ಷ ವರ್ಷ ಹಿಂದಿನ ಶಿಲಾಯುಗದ ಆಯುಧಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ನಾಗಪೂರ ಪ್ರಾಗೈತಿಹಾಸಿಕ ಶಾಖೆ ಮುಖ್ಯಸ್ಥ ರಮೇಶ ಮೂಲಿಮನಿ, ತಂಡದವರು ಪತ್ತೆ ಹಚ್ಚಿದ್ದಾರೆ.
ಬಾದಾಮಿ (ಜ.21): ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಮ್ಮಿನಾಳ ಹಾಗೂ ಕಾತರಕಿ ಗ್ರಾಮದ ಹತ್ತಿರವಿರುವ ರಂಗನಾಥ ಗುಡ್ಡದ ಪ್ರದೇಶದಲ್ಲಿ ಸುಮಾರು 2 ಲಕ್ಷ ವರ್ಷ ಹಿಂದಿನ ಶಿಲಾಯುಗದ ಆಯುಧಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ನಾಗಪೂರ ಪ್ರಾಗೈತಿಹಾಸಿಕ ಶಾಖೆ ಮುಖ್ಯಸ್ಥ ರಮೇಶ ಮೂಲಿಮನಿ, ತಂಡದವರು ಪತ್ತೆ ಹಚ್ಚಿದ್ದಾರೆ.
ಬೆಟ್ಟದ ಮೇಲ್ಭಾಗದಲ್ಲಿ ಸುಮಾರು ಅರ್ಧ ಕಿಮೀಯಷ್ಟುವಿಸ್ತಾರ ಪ್ರದೇಶದಲ್ಲಿ ಶಿಲಾಯುಗದ ಆಯುಧಗಳು ಹರಡಿವೆ. ಇವುಗಳಲ್ಲಿ ವಿವಿಧ ಮಾದರಿಯ ಕೈಗೊಡಲಿಗಳು, ಬ್ಯೂರಿನ್‌ಗಳು(ಕೆತ್ತನೆ ಉಪಕರಣ), ಕೀವರ್‌ಗಳು, ಹಲಗು ಮತ್ತಿತರ ಕಲ್ಲಿನ ಆಯುಧಗಳು ಇಲ್ಲಿ ಪತ್ತೆಯಾಗಿವೆ. ಇವುಗಳು ಸುಮಾರು 2 ಲಕ್ಷ ವರ್ಷಗಳ ಹಿಂದೆ ನಮ್ಮ ಪೂರ್ವಜರು ತಮ್ಮ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಲು, ಆತ್ಮರಕ್ಷಣೆಗೆ, ಹೋರಾಟಕ್ಕೆ, ಬಳಸುವ ಸಾಧನಗಳಾಗಿದ್ದವು ಎಂದು ತಿಳಿದು ಬಂದಿದೆ.
ಕೊಲ್ಲೂರಿನಲ್ಲಿ ಬೃಹತ್ ಶಿಲಾಯುಗದ ನಿವೇಶನ ಪತ್ತೆ .
ಈ ಗುಡ್ಡದ ಪ್ರದೇಶದಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕಲ್ಲಿನ ಆಯುಧಗಳು ಪತ್ತೆಯಾಗಿರುವುದು ನೋಡಿದರೆ ಇದು ಆದಿ ಮಾನವನ ಆಯುಧ ತಯಾರಿಸುವ ನೆಲೆಯಾಗಿತ್ತು ಎಂದು ಹೇಳಬಹುದು ಎಂದು ರಮೇಶ ಮೂಲಿಮನಿ ತಿಳಿಸಿದ್ದಾರೆ.