ಸಿರುಗುಪ್ಪ(ಜೂ.18): ತಾಲೂಕಿನ ಕೆಂಚನಗುಡ್ಡ ಗ್ರಾಮದ ಹತ್ತಿರ ಹರಿಯುವ ತುಂಗಭದ್ರಾ ನದಿಯ ಉಸುಗಿನ ಕಟ್ಟೆನೀರು ಸಂಗ್ರಹಗಾರದ ಬಳಿ ಶ್ರೀವೀರಭದ್ರೇಶ್ವರ ಸ್ವಾಮಿಯ ಮತ್ತು ಮಲಗಿರುವ ಭಂಗಿಯಲ್ಲಿರುವ ಬಸವಣ್ಣನ ಮೂರ್ತಿಗಳು ಅನಾಥವಾಗಿ ಬಿದ್ದಿವೆ.

ಕೆಂಚನಗುಡ್ಡದ ನೀರು ಸಂಗ್ರಹಗಾರದ ಕಟ್ಟೆಗಳನ್ನು ನೋಡಲು ನೂರಾರು ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಬರುತ್ತಾರೆ. ಬರುವ ಪ್ರವಾಸಿಗರಿಗೆ ಈ ಮೂರ್ತಿಗಳ ದರ್ಶನ ಮಾಡಿಸುವ ಅವಕಾಶವನ್ನು ಇಲಾಖೆ ಅಧಿಕಾರಿಗಳು ಮಾಡಬೇಕಾಗಿದೆ. ನದಿಯ ನೀರಿನಲ್ಲಿ ಬಿದ್ದಿರುವ ವೀರಭದ್ರಸ್ವಾಮಿ ಮತ್ತು ಬಸವಣ್ಣ ಮೂರ್ತಿಗಳನ್ನು ಸುರಕ್ಷಿತ ಸ್ಥಳದಲ್ಲಿ ಇಟ್ಟರೆ ಇಲ್ಲಿಗೆ ಬರುವ ಜನ ನೋಡಲು ಅನುಕೂಲವಾಗುತ್ತದೆ. ಆದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಇತಿಹಾಸ ಪ್ರೇಮಿ ಎಚ್‌.ಎಸ್‌. ಶೇಕಣ್ಣ ಒತ್ತಾಯಿಸಿದ್ದಾರೆ.

ಬಳ್ಳಾರಿ: ಕೊನೆಗೂ ದಾಖಲಾಯ್ತು ಶಾಸಕ ಪರಮೇಶ್ವರ ನಾಯ್ಕ ವಿರುದ್ಧ FIR

ನದಿಯಲ್ಲಿರುವ ಮೂರ್ತಿಗಳನ್ನು ಸಂರಕ್ಷಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು. ಸಂಬಂಧಿಸಿದ ಇಲಾಖೆಗೆ ಈ ಬಗ್ಗೆ ಪತ್ರ ಬರೆದು ತಿಳಿಸಲಾಗುವುದೆಂದು ನೀರಾವರಿ ಇಲಾಖೆಯ ಎಇಇ ಹನುಮಂತಪ್ಪ ತಿಳಿಸಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"