Asianet Suvarna News Asianet Suvarna News

ಕುತ್ತಿಗೆವರೆಗೆ ನೀರಲ್ಲಿ ಮುಳುಗಿದ್ದೆ, ಹಗ್ಗ ಹಿಡಿದು ಬೆಟ್ಟ ಏರಿ ಪಾರಾದೆ: ವಯನಾಡು ದುರಂತದಲ್ಲಿ ಪಾರಾಗಿ ಬಂದ ಮಹಿಳೆಯ ಹೇಳಿಕೆ..!

ಕತ್ತಿನ ತನಕ ಬಂದಿದ್ದ ನೀರಿನ ನಡುವೆ ಹಗ್ಗ ಹಿಡಿದು ಬೆಟ್ಟ ಏರಿ ಪಾರಾಗಿ ಬಂದಿದ್ದೇನೆ ಎಂದು ಅವರು ಆ ಸಂದರ್ಭದ ಭಯಾನಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಕಣ್ಣೆದುರೇ ಮಹಾ ಪ್ರಳಯ ಕಂಡ ಇವರು ಅಕ್ಷರಶಃ ಎರಡು ದಿನ ನರಕ ನೋಡಿ ಬಂದಿದ್ದಾರೆ.

statement of the woman who survived the wayanad landslide tragedy in kerala grg
Author
First Published Aug 2, 2024, 12:08 PM IST | Last Updated Aug 2, 2024, 12:16 PM IST

ಚಾಮರಾಜನಗರ(ಆ.02):  ಕೇರಳದ ಕನ್ನಡತಿ, ಸದ್ಯ ಮಳವಳ್ಳಿಯಲ್ಲಿ ನೆಲೆಸಿರುವ ರಾಧಾ ಅವರು ಮಗಳ ಶಾಲಾ ದಾಖಲಾತಿ ವಿಚಾರವಾಗಿ ವಯನಾಡು ಜಿಲ್ಲೆಯ ಚೂರಲ್ ಮಲೆಗೆ ತೆರಳಿದ್ದ ವೇಳೆ ಮಹಾ ಪ್ರಳಯಕ್ಕೆ ಸಿಲುಕಿ ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ

ಕತ್ತಿನ ತನಕ ಬಂದಿದ್ದ ನೀರಿನ ನಡುವೆ ಹಗ್ಗ ಹಿಡಿದು ಬೆಟ್ಟ ಏರಿ ಪಾರಾಗಿ ಬಂದಿದ್ದೇನೆ ಎಂದು ಅವರು ಆ ಸಂದರ್ಭದ ಭಯಾನಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಕಣ್ಣೆದುರೇ ಮಹಾ ಪ್ರಳಯ ಕಂಡ ಇವರು ಅಕ್ಷರಶಃ ಎರಡು ದಿನ ನರಕ ನೋಡಿ ಬಂದಿದ್ದಾರೆ.

ತುಂಡಾಗಿದ್ದ ಶವಗಳನ್ನು ಹೆಕ್ಕಿ ರಾಶಿ ಮಾಡಿದೆವು: ವಯನಾಡಿನ ಭೀಕರ ದುರಂತದ ಚಿತ್ರಣ ನೀಡಿದ ಕೊಡಗಿನ ತಂಡ..!

ರಾತ್ರಿ ಶುರುವಾದ ಜೋರು ಮಳೆಯಿಂದ ಬಚಾವ್ ಆಗಲು ಬೆಟ್ಟ ಏರಿದೆವು. 10 ನಿಮಿಷದಲ್ಲೇ ಎಲ್ಲವೂ ನಮ್ಮ ಕಣ್ಣೆದುರೇ ನಾಶವಾಯಿತು. ಆಸ್ಪತ್ರೆ ಕಟ್ಟಡವೊಂದು ಬಿಟ್ಟರೆ ಏನೂ ಉಳಿದಿಲ್ಲ, ನನ್ನ ಮಗಳ ಶಾಲಾ ದಾಖಲಾತಿಗಾಗಿ ಕೆಲ ದಾಖಲೆಗಳನ್ನು ತರಲು ಅಲ್ಲಿಗೆ ಹೋಗಿದ್ದೆ, ಸಂಜೆ ಭೇಟಿ ಕೊಟ್ಟಿದ್ದ ಶಾಲೆ ಬೆಳಗ್ಗೆ ಹೊತ್ತಿಗೆ ನೋಡಿದರೆ ಅವಶೇಷವೇ ನಾಶವಾಗಿದೆ ಕಣ್ಣೀರಾದರು. ಇಲ್ಲದಂತೆ ಎಂದು ಗುಡ್ಡದ ಮೇಲಿದ್ದರೂ ಅದೊಂದು ರೀತಿ ನರಕವೇ ಆಗಿತ್ತು. ಒಬ್ಬರಿಗೆ ಕೈ ಇಲ್ಲ, ಇನ್ನೊಬ್ಬರಿಗೆ ತಲೆ ಇರಲಿಲ್ಲ. ಮನೆಯಲ್ಲಿ ಉಳಿದಿದ್ದ ಒಂದೇ ಗೋಡೆ ಹಿಡಿದು ತಾಯಿ-ಮಗು ಬದುಕಿದ್ದರು... ಇಂಥ ದೃಶ್ಯ ಯಾರಿಗೂ ಬೇಡ ಎಂದಿರುವ ಅವರು, ಜಾತಿ ಪ್ರಮಾಣಪತ್ರದಲ್ಲಿ ಉಂಟಾಗಿರುವ ದೋಷ ಸರಿಪಡಿಸಿ, ಮಗಳಿಗೆ ಶಾಲಾ ದಾಖಲಾತಿಗೆ ಅನುಕೂಲ ಮಾಡಿಕೊಡುವಂತೆ ಕೇರಳ ಸರ್ಕಾರವನ್ನು ಮನವಿ ಮಾಡಿದ್ದಾರೆ. 

Latest Videos
Follow Us:
Download App:
  • android
  • ios