ಉಡುಪಿ(ಮೇ 30): ಅಮಾಸೆಬೈಲಿನ ನಕ್ಸಲ್‌ ಪೀಡಿತ ಪೊಲೀಸ್‌ ಠಾಣೆಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಮಲ್ಲಿಕಾರ್ಜುನ್‌ ಗುಬ್ಬಿ (56) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.

ಮೂಲತಃ ಕಲ್ಬುರ್ಗಿ ಜಿಲ್ಲೆಯ ನೌರುಗಂಜ್‌ ನಿವಾಸಿ ಮೇ 28ರಂದು ಹೊಟ್ಟೆನೋವು ಎಂದು ತಿಳಿಸಿದ್ದು, ತಕ್ಷಣ ಅವರ ಮೇಲಧಿಕಾರಿ ದುರುಗಪ್ಪ ಅಡಿನ್‌ ಅವರು ಇಬ್ಬರು ಸಿಬ್ಬಂದಿ ಅವರೊಂದಿಗೆ ಅಮಾಸೆಬೈಲು ಧನ್ವಂತರಿ ಆಸ್ಪತ್ರೆಗೆ ಕಳುಹಿಸಿ, ಚಿಕಿತ್ಸೆ ಕೊಡಿಸಿದ್ದರು. ನಂತರ ಎಲ್ಲ ಸಿಬ್ಬಂದಿ ಜೊತೆಯಲ್ಲಿ ಊಟ ಮಾಡಿ, ಠಾಣೆಯಲ್ಲಿಯೇ ಮಲಗಿದ್ದರು.

ಕಾರ್ಕಳ: ಹಾಡಹಾಗಲೇ ಆರು ಕಾಡುಕೋಣಗಳ ಸಂಚಾರ

ಬೆಳಗಿನ ಜಾವ 5:15 ಗಂಟೆಗೆ ದುರುಗಪ್ಪ ಅವರು ಎದ್ದಾಗ ಮಲ್ಲಿಕಾರ್ಜುನ್‌ ಮಲಗಿದ್ದರು. 5:50 ಗಂಟೆಗೆ ಎದ್ದು ನೋಡುವಾಗ ಮಲ್ಲಿಕಾರ್ಜುನ ಮಲಗಿದಲ್ಲಿ ಇರಲಿಲ್ಲ. ಮೆಸ್ನಲ್ಲಿ ಹಾಗೂ ಇತರ ಕಡೆಗಳಲ್ಲಿ ವಿಚಾರಿಸಿದಾಗ ಅವರು ಪತ್ತೆಯಾಗಲಿಲ್ಲ.

7 ಗಂಟೆಗೆ ಅಮಾಸೆಬೈಲು ಗ್ರಾಮದ ಖಾನ್ಬೈಲು ಎಂಬಲ್ಲಿ ಯಾರೋ ಅಪರಿಚಿತರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸ್ಧಳೀಯರು ಮಾಹಿತಿ ನೀಡಿದ್ದು, ಹೋಗಿ ನೋಡಿದಾಗ ಮಲ್ಲಿಕಾರ್ಜುನ್‌ ಅವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಅತಂತ್ರ ಕಾರ್ಮಿಕರನ್ನು ವಿಮಾನದಲ್ಲಿ ಕರೆಸಿದ ಮುಖ್ಯಮಂತ್ರಿ!

ಮಲ್ಲಿಕಾರ್ಜುನ್‌ ಅವರಿಗೆ ಇತ್ತೀಚೆಗೆ ಕೊಪ್ಪಳದ ಮುನಿರಾಬಾದ್‌ಗೆ ವರ್ಗಾವಣೆಯಾಗಿದ್ದು, ಶನಿವಾರ ಮಲ್ಲಿಕಾರ್ಜುನ್‌ ಮುನಿರಾಬಾದ್‌ಗೆ ತೆರಳುವವರಿದ್ದರು. ಆದರೆ ಈ ನಡುವೆ ಅನಾರೋಗ್ಯದಿಂದ ನರಳುತ್ತಿದ್ದ ಅವರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]