ಸುಬ್ರಹ್ಮಣ್ಯ(ಜು.04) : ಕುಕ್ಕೆ ಸುಬ್ರಹ್ಮಣ್ಯ ದೇವಳ ನೌಕರನಿಗೆ ಶುಕ್ರವಾರ ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ. ನೌಕರನ ಎರಡು ವರ್ಷದ ಮಗುವಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ದೇವಳದ ನೌಕರರೊಬ್ಬರು ಧಾರವಾಡ ನಿವಾಸಿಯಾಗಿದ್ದು ಕಳೆದ ಮಂಗಳವಾರ ಊರಿಗೆ ತೆರಳಿದ್ದರು. ಆ ವೇಳೆ ತನ್ನ ಎರಡು ವರ್ಷದ ಮಗುವಿಗೆ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಈ ತಿಂಗಳ ಕೊನೆವರೆಗೂ ಗೆಜ್ಜೆಗಿರಿ ಕ್ಷೇತ್ರದಲ್ಲಿ ದರ್ಶನ ನಿರ್ಬಂಧ

ಆ ವೇಳೆ ಮಗುವಿಗೆ ಜ್ವರದ ಲಕ್ಷಣ ಇದೆ ಎಂದು ಮಗುವಿನ ಗಂಟಲಿನ ಧ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಇದೀಗ ಶುಕ್ರವಾರ ಮಧ್ಯಾಹ್ನದ ವೇಳೆ ಮಗುವಿಗೆ ಪಾಸಿಟಿವ್‌ ಇದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಮಗುವಿನ ಗಂಟಲಿನ ದ್ರವ ಪರೀಕ್ಷೆಗೆ ಕಳುಹಿಸಿದ ಬಳಿಕ ಗುರುವಾರ ಅವರು ಕುಕ್ಕೆಗೆ ಆಗಮಿಸಿ ದೇವಳ ಕೆಲಸಕ್ಕೆ ತೆರಳಿದ್ದಾರೆ. ಇದೀಗ ಮಗುವಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿರುವುದು ತಿಳಿದುಬಂದಿದೆ.

ನಾಳೆಯಿಂದ 4 ದಿನ ಜ್ಯುವೆಲ್ಲರಿ ಶಾಪ್‌ಗಳು ಬಂದ್‌..! ಚಿನ್ನ ಬೇಕಂದ್ರೆ ಇಂದೇ ತಗೊಳಿ

ಕೂಡಲೇ ಸುಬ್ರಹ್ಮಣ್ಯ ವೈದ್ಯಾಧಿಕಾರಿಗಳು ನೌಕರರನ್ನು ಹೋಂ ಕ್ವಾರಂಟೈನ್‌ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ತೆರಳಿ ಮನೆಗೆ ಬಂದ ಬಳಿಕ ಮಗುವಿಗೆ ಯಾವುದೇ ರೋಗ ಲಕ್ಷಣ ಗಳಿಲ್ಲದೆ ಆರೋಗ್ಯವಾಗಿದೆ. ಇದೀಗ ಮಗುವಿಗೆ ಯಾವುದೇ ತೊಂದರೆ ಇಲ್ಲ. ಹಾಗಿದ್ದರೂ ಪಾಸಿಟಿವ್‌ ಬಂದ ಕಾರಣ ಮತ್ತೊಮ್ಮೆ ಮಗುವಿನ ಗಂಟಲಿನ ದ್ರವ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ದೇವಳದ ನೌಕರ ತಿಳಿಸಿದ್ದಾರೆ.