ಚಿತ್ರದುರ್ಗ, [ಸೆ.27]:  ಇಬ್ಬರು ಗೆಳೆಯರ ಜಗಳ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ.  ಇವರಿಬ್ಬರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು. ಗುರುವಾರ ಮಧ್ಯಾಹ್ನ ಒಟ್ಟಿಗೆ ಮೂತ್ರ ವಿಸರ್ಜನೆಗೆ ಹೋಗಿದ್ದಾರೆ. ಆದರೆ ಬಳಿಕ ಆಗಿದ್ದೆಲ್ಲ ದುರಂತ.

.ಹಿರಿಯೂರು ನಗರದ ಡಾ. ಅಂಬೇಡ್ಕರ್​ ರಮಾಬಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಭರತ್​ ಹಾಗೂ ನವೀನ್​ ಇಬ್ಬರೂ ಒಟ್ಟಿಗೆ ಹೊರಗೆ ಹೋಗಿದ್ದರು. ಅದೇನಾಯಿತೋ ಗೊತ್ತಿಲ್ಲ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ/ ಈ ಜಗಳದಲ್ಲಿ  ನವೀನ್​ ರೊಚ್ಚಿಗೆಂದು ಭರತ್​ನಿಗೆ ಬಾಟಲಿಯ ಗ್ಲಾಸ್​ನಿಂದ ಚುಚ್ಚಿ ಹಲ್ಲೆಗೊಳಿ ಓಡಿಹೋಗಿದ್ದಾನೆ. 

ಗಾಜಿನ ಬಾಟಲಿಯಿಂದ ಹಿರಿತಕ್ಕೊಳಗಾದ ಭರತ್ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗಲಾಟೆಯಾದ ಕೆಲ ಹೊತ್ತಿನಲ್ಲಿ ನವೀನ್ [14] ಶವ ಪತ್ತೆಯಾಗಿದೆ. ಭರತ್ ಗೆ  ಗಾಜಿನಿಂದ ತಿವಿದಿದ್ದಕ್ಕೆ ಆತಂಕಗೊಂಡು ನವೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. 

ಮೃತ ನವೀನ್ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.