Asianet Suvarna News Asianet Suvarna News

ಹುನಗುಂದ: ಸೂರ್ಯಗ್ರಹಣ, ಮೌಢ್ಯ ತೊಲಗಿಸಲು ಸಂಗಮನಾಥನಿಗೆ ಪೂಜೆ

ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ನಡೆದ ಪೂಜಾ ಕೈಂಕರ್ಯಗಳು| ಭಕ್ತರಿಗೆ ಸಂಗಮನಾಥಹನ ದರ್ಶನಕ್ಕೆ ಅವಕಾಶ| ಗ್ರಹಣದ ಸಂದರ್ಭದಲ್ಲಿ ಸಂಗಮನಾಥನ ದರ್ಶನ ಪಡೆದ ಶಾಲಾ ವಿದ್ಯಾರ್ಥಿಗಳು, ಪ್ರವಾಸಿಗರು| ಮೌಢ್ಯ ಹೋಗಲಾಡಿಸಲು ಗ್ರಹಣದ ಸಂದರ್ಭ ಉಪಹಾರ ವ್ಯವಸ್ಥೆ|

Special Pooja During Eclipse in Kudalasangama in Bagalkot District
Author
Bengaluru, First Published Dec 26, 2019, 11:38 AM IST

ಬಾಗಲಕೋಟೆ(ಡಿ.26): ಇಂದು ಬೆಳಗ್ಗೆ 8 ಗಂಟೆಯಿಂದ 11.04 ರವರೆಗೆ ಕಂಕಣ ಸುರ್ಯಗ್ರಹಣ ಇದ್ದ ಕಾರಣ ನಾಡಿನ ಅನೇಕ ದೇವಸ್ಥಾನಗಳು ಬಾಗಿಲು ಬಂದ್ ಮಾಡುವ ಮೂಲಕ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಆದರೆ,  ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ದೇವನಿಗೆ ಸೂರ್ಯ ಗ್ರಹಣ ಸಮಯದಲ್ಲೂ ಪೂಜಾ ಕೈಂಕರ್ಯಗಳು ನಡೆದಿವೆ.

ಹೌದು, ಮೌಢ್ಯ ತೊಲಗಿಸಲು ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಗ್ರಹಣ ದಿನವಾದ ಇಂದು ಕೂಡ ಪೂಜಾ ಕೈಂಕರ್ಯಗಳು ನಡೆದಿವೆ. ಈ ಮೂಲಕ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಪಾಲನೆ ಮಾಡಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಂಗಮೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು ನಡೆದು ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಗ್ರಹಣದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಸಂಗಮನಾಥನ ದರ್ಶನ ಪಡೆದಿದ್ದಾರೆ. 
ಕಂಕಣ ಸೂರ್ಯಗ್ರಹಣದಂದು ಮೌಢ್ಯ ಹೋಗಲಾಡಿಸಲು ಬಾಗಲಕೋಟೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಉಪನ್ಯಾಸಕರು ಗ್ರಹಣ ವೀಕ್ಷಣೆಗೆ ಆಗಮಿಸಿದವರಿಗೆ ಉಪಹಾರ ವ್ಯವಸ್ಥೆ ಕಲ್ಪಿಸಿದರು. ಗ್ರಹಣ ನೋಡಲು ಬಂದ ವಿದ್ಯಾರ್ಥಿಗಳು ಉಪಹಾರ ಸವಿದಿದ್ದಾರೆ. ಈ ಮೂಲಕ ಗ್ರಹಣದ ವೇಳೆ ಊಟೋಪಚಾರ ಮಾಡಬಾರದೆನ್ನುವ ಸಂಪ್ರದಾಯಕ್ಕೆ ಉಪನ್ಯಾಸಕರು ಇತಿಶ್ರೀ ಹಾಡಿದ್ದಾರೆ. 

ಕಂಕಣ ಸೂರ್ಯಗ್ರಹಣವನ್ನು ವೀಕ್ಷಿಸಲು ಕಾಲೇಜು ಮೈದಾನದಲ್ಲಿ ಸನ್ ಫಿಲ್ಟರ್ ಗ್ಲಾಸ್ ಮೂಲಕ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಸಂಪ್ರದಾಯ ಬದಿಗಿಟ್ಟು  ವಿದ್ಯಾರ್ಥಿಗಳು ಆಟದ ಮೈದಾನದಲ್ಲಿ ಆಟದಲ್ಲಿ ತೊಡಗಿದ್ದರು. ಈ ಮಧ್ಯೆ ಶಾಸಕ ವೀರಣ್ಣ ಚರಂತಿಮಠ ಅವರು ಸನ್ ಗ್ಲಾಸ್ ಮೂಲಕ ಸೂರ್ಯಗ್ರಹಣ ವೀಕ್ಷಣೆ ಮಾಡಿದ್ದಾರೆ. 
 

Follow Us:
Download App:
  • android
  • ios