* ಆನ್‌ಲೈನ್‌ ಅಥವಾ ಬಸ್‌ ನಿಲ್ದಾಣ ರಿಸರ್ವೇಶನ್‌ ಕೌಂಟರ್‌ ಮೂಲಕ ಸೀಟ್‌ ಬುಕ್‌ ಮಾಡಬಹುದು * ರಜಾದಿನಗಳಂದು ವಿಶೇಷ ಪ್ಯಾಕೇಜ್‌ ಟೂರ್‌ಗಳ ಕಾರ್ಯಾಚರಣೆ * ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ವಾಯವ್ಯ ಸಾರಿಗೆಯಿಂದ ವಿಶೇಷ ಪ್ಯಾಕೇಜ್‌ ಟೂರ್‌ 

ಹುಬ್ಬಳ್ಳಿ(ಜು.21): ಮಳೆಗಾಲದ ದಿನಗಳು ಆರಂಭವಾಗಿರುವುದರಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾದಿನಗಳಂದು ವಿಶೇಷ ಪ್ಯಾಕೇಜ್‌ ಟೂರ್‌ಗಳ ಕಾರ್ಯಾಚರಣೆ ಆರಂಭಿಸಿದೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಜೋಗಫಾಲ್ಸ್‌ಗೆ ವಿಶೇಷ ಪ್ಯಾಕೇಜ್‌ ಮಾಡಿದೆ. ಬೆಳಿಗ್ಗೆ 7.20ಕ್ಕೆ ಹೊಸ ಬಸ್‌ ನಿಲ್ದಾಣದಿಂದ ಈ ಬಸ್‌ ತೆರಳಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 7760991682, 7760991662, 7760991677ಗೆ ಸಂಪರ್ಕಿಸಬಹುದಾಗಿದೆ.

ಧಾರವಾಡ ವಿಭಾಗದಿಂದ ಹೊಸ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 7.30ಗಂಟೆಗೆ ಹೊರಟು ದಾಂಡೇಲಿ- ಮೋಸಳೆ ಪಾರ್ಕ್- ಮೌಳಂಗಿ ಫಾಲ್ಸ್‌- ಕೊಳಗಿ ನೇಚರ್‌ ಕ್ಯಾಂಪ್‌- ಉಳವಿ ಚನ್ನಬಸವೇಶ್ವರ ದೇವಸ್ಥಾನ ವೀಕ್ಷಿಸಿ ಮರಳಿ ಧಾರವಾಡಕ್ಕೆ ಬರುತ್ತದೆ. ದಾಂಡೇಲಿ ಬಸ್‌ ನಿಲ್ದಾಣದಿಂದ ಬೆಳಿಗ್ಗೆ 8ಕ್ಕೆ ಕೊಳಗಿ ನೇಚರ್‌ ಕ್ಯಾಂಪ್‌-ಸಿಂಥೇರಿ ರಾಕ್ಸ- ಉಳವಿ ಚನ್ನಬಸವೇಶ್ವರ ದೇವಸ್ಥಾನ- ಸೂಪಾ ಡ್ಯಾಮ್‌- ಮೌಳಂಗಿ ಫಾಲ್ಸ್‌ ವೀಕ್ಷಿಸಿ ಹಿಂತಿರುಗಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ: 7760982552, 7760991679, 7760991731, ಸಂಪರ್ಕಿಸಬಹುದಾಗಿದೆ.

'ವಾಯುವ್ಯ ಸಾರಿಗೆಗೆ ನಿತ್ಯ 1.5 ಕೋಟಿ ನಷ್ಟ'

ಉತ್ತರ ಕನ್ನಡ ವಿಭಾಗದಿಂದ ಯಲ್ಲಾಪೂರದಿಂದ ಜೋಗಫಾಲ್ಸ್‌ಗೆ ಬೆಳಗ್ಗೆ 8 ಗಂಟೆಗೆ ಬಿಟ್ಟು ಶಿರಸಿ ಮಾರಿಕಾಂಬಾ ದರ್ಶನ ಮುಗಿಸಿ ನಿಪ್ಪಲಿ ಫಾಲ್ಸ್‌ ನೋಡಿಕೊಂಡು ಜೋಗಫಾಲ್ಸ್‌ ತಲುಪಲಿದೆ. ಕಾರವಾರದಿಂದ ಜೋಗಫಾಲ್ಸ್‌ಗೆ ಬೆಳಗ್ಗೆ 8 ಗಂಟೆಗೆ ಬಿಟ್ಟು ಮಿರ್ಜಾನಕೋಟೆ, ಬಂಗಾರಮಕ್ಕಿ ಮಾರ್ಗವಾಗಿ ಜೋಗ್‌ ಫಾಲ್ಸ್‌ ತಲುಪಲಿದೆ. ಕಾರವಾರದಿಂದ ಮುರ್ಡೇಶ್ವರಕ್ಕೆ ಬೆಳಗ್ಗೆ 8 ಗಂಟೆಗೆ ಹೊರಟು ಮಿರ್ಜಾನಕೋಟೆ, ಇಕೋ ಬೀಚ್‌ ನೋಡಿಕೊಂಡು ಮುರ್ಡೇಶ್ವರ ತಲುಪಲಿದೆ. ಹೆಚ್ಚಿನ ಮಾಹಿತಿಗೆ ಮೊ: 7760991702, 7760991713, 7760991727, 8762721591 ಸಂಪರ್ಕಿಸಬಹುದಾಗಿದೆ.

ಹಾವೇರಿಯಿಂದ 7.30 ಗಂಟೆಗೆ ಮತ್ತು ರಾಣಿಬೆನ್ನೂರಿನಿಂದ 8 ಗಂಟೆಗೆ ಬಸ್‌ಗಳು ಜೋಗಫಾಲ್ಸ್‌ಗೆ ಹೊರಡಲಿವೆ. ಹೆಚ್ಚಿನ ಮಾಹಿತಿಗೆ ಮೊ. 7259954181, 7259954305 ಗೆ ಸಂಪರ್ಕಿಸಬಹುದಾಗಿದೆ.

ಗದಗ ವಿಭಾಗದಿಂದ ಕಪ್ಪತಗುಡ್ಡಕ್ಕೆ ಮತ್ತು ಬೆಟಗೇರಿಯಿಂದ ಪ್ರಾಣಿ ಸಂಗ್ರಹಾಲಯ, ಸಾಲುಮರದ ತಿಮ್ಮಕ್ಕ ಉದ್ಯಾನವನಗಳಿಗೆ ಸಾರ್ವಜನಿಕರ ಬೇಡಿಕೆಗಳಿಗನುಗುಣವಾಗಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: 7760991802ಗೆ ಸಂಪರ್ಕಿಸಬಹುದಾಗಿದೆ.

ಬಾಗಲಕೋಟೆ ವಿಭಾಗದಿಂದ ನವನಗರ ಬಸ್‌ ನಿಲ್ದಾಣದಿಂದ ಬದಾಮಿ-ಬನಶಂಕರಿ- ಶಿವಯೋಗಮಂದಿರ-ಮಹಾಕೂಟ (ದಕ್ಷಿಣ ಕಾಶಿ)- ಪಟ್ಟದಕಲ್ಲು-ಐಹೊಳೆ-ಕೂಡಲಸಂಗಮ ಮತ್ತು ಆಲಮಟ್ಟಿಗೆ ಬೆಳಗ್ಗೆ 8.30ರಿಂದ ಪ್ರತಿದಿನ ಕಾರ್ಯಾಚರಣೆ ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ಮೊ. 7760991775, 7760991783, 7760991752, 7760991762 ಗಳಿಗೆ ಸಂಪರ್ಕಿಸಬಹುದಾಗಿದೆ.

ವಿಶೇಷ ಸಾರಿಗೆಗಳಿಗೆ ಮುಂಗಡ ಬುಕ್ಕಿಂಗ್‌ಗಾಗಿ www.ksrtc.in ನಲ್ಲಿ ಅಥವಾ ಬಸ್‌ ನಿಲ್ದಾಣ ರಿಸರ್ವೇಶನ್‌ ಕೌಂಟರ್‌ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.