* ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್​ ಕಿಶೋರ್​  ರೌಂಡ್ಸ್* ಕೋಲಾರ ಜಿಲ್ಲೆಯ ರೈಲ್ವೇ ಯೋಜನೆಗಳ ಕುರಿತು ಪರಿಶೀಲನೆ * ಜನರಲ್ಲಿ ಮೂಡಿಸಿದೆ ಹೊಸ ಆಶಾಭಾವನೆ

ಕೋಲಾರ, (ಏ.30) :  ನೈಋತ್ಯ ರೈಲ್ವೇ ವಲಯದ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್​ ಕಿಶೋರ್​ ಅವರು ಕೋಲಾರ ಜಿಲ್ಲೆಯ ರೈಲ್ವೇ ಯೋಜನೆಗಳ ಇಂದು(ಶನಿವಾರ) ಕುರಿತು ಪರಿಶೀಲನೆ ನಡೆಸಿದರು, ಅವರಿಗೆ ಕೋಲಾರ ಸಂಸದ ಮುನಿಸ್ವಾಮಿ ಸಾತ್​ ನೀಡಿದರು, ಜೊತೆಗೆ ಜಿಲ್ಲೆಯಲ್ಲಿ ಬಾಕಿ ಇರುವ ಕೆಲಸಗಳ ಕುರಿತು ಮನವರಿಕೆ ಮಾಡಿಕೊಟ್ಟರು..

ಇವತ್ತು ನೈರುತ್ಯ ರೈಲ್ವೇ ಜಿಎಂ ಸಂಜೀವ್​ ಕಿಶೋರ್​ ಅವರು ರೈಲ್ವೇ ಲೈನ್​ಗಳ ಪರೀಶಲನೆ ನಡೆಸಿದರು, ಇವತ್ತು ಬೆಳಿಗ್ಗೆ ಬೆಂಗಳೂರು ವೈಟ್​ ಫಿಲ್ಡ್‌ನಿಂದ ವಿಶೇಷ ರೈಲಿನಲ್ಲಿ ಆಗಮಿಸಿದ ಸಂಜೀವ್​ ಕಿಶೋರ್​ ಮಾಲೂರು, ಟೇಕಲ್​, ಬಂಗಾರಪೇಟೆ, ಕೆಜಿಎಫ್​ ರೈಲ್ವೇ ನಿಲ್ದಾಣಗಳು, ಮಾರ್ಗಮಧ್ಯೆದಲ್ಲಿನ ಅಂಡರ್​ ಪಾಸ್​ಗಳು, ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಿದರು, ಇದೇ ವೇಳೆ ಮಾತನಾಡಿ ಜಿಎಂ ಸಂಜೀವ್​ ಕಿಶೋರ್​ ಹಲವು ವರ್ಷಗಳಿಂದ ಬಾಕಿ ಇರುವ ರೈಲ್ವೇ ಕಾಮಗಾರಿಗಳನ್ನು ಆದಷ್ಟು ಬೇಗನೇ ಪೂರ್ಣ ಗೊಳಿಸುವುದಾಗಿ ಹೇಳಿದರು.

 ಅದರಲ್ಲೂ ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಬಂಗಾರಪೇಟೆ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಹೇಳಿದ್ರು, ಅಲ್ಲದೆ ಅವೈಜ್ನಾನಿಕ ಅಂಡರ್​ಪಾಸ್​ಗಳ ಪೈಕಿ 12 ನ್ನು ಗುರುತುಮಾಡಲಾಗಿದ್ದು ಅದರಲ್ಲಿ 9 ಅಂಡರ್​ ಪಾಸ್​ಗಳನ್ನು ಪೂರ್ಣ ಮಾಡಿರುವುದಾಗಿ ತಿಳಿಸಿದರು.

4 ದಶಕ ಕಳೆದರೂ ಸಿಗದ ಪರಿಹಾರ, ರಸ್ತೆಯನ್ನೇ ಅಗೆದು ರೈತ ಪ್ರತಿಭಟನೆ!

ಇದೇ ವೇಳೆ ಮಾತನಾಡಿದ ಸಂಸದ ಮುನಿಸ್ವಾಮಿ, ಬಿಜೆಪಿ ಸರ್ಕಾರದ ಅವದಿಯಲ್ಲಿ ಹಿಂದೆದೂ ಆಗದಷ್ಟು ಕಾಮಗಾರಿಗಳು ಕೋಲಾರ ಜಿಲ್ಲೆಗೆ ಆಗಿದೆ, ಎಂದರು, ಇನ್ನು ಜಿಲ್ಲೆಯಲ್ಲಿ ಆಗಬೇಕಿರುವ ಎಲ್ಲಾ ಕಾಮಗಾರಿಗಳನ್ನು ಖುದ್ದು ತಾವೇ ಬೇಟಿ ನೀಡಿ ಪರಿಶಿಲನೆ ನಡೆಸಿದ ಜಿಎಂ ಹಾಗೂ ಅಧಿಕಾರಿಗಳ ತಂಡವನ್ನು ಶ್ಲಾಘನೆ ಮಾಡಿದ ಸಂಸದ ಮುನಿಸ್ವಾಮಿ, ಈ ಹಿಂದೆ ಸಂಸದರಾಗಿ, ರೈಲ್ವೇ ಸಚಿವರಾಗಿ ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಟ್ಟು ರಾಜಕೀಯ ಮಾಡಿದ್ದ ಮಾಜಿ ಸಂಸದ ಕೆ.ಹೆಚ್​ ಮುನಿಯಪ್ಪ ರೀತಿಯಲ್ಲಿ ಸುಳ್ಳು ಹೇಳಿಕೆ ನೀಡೋದಿಲ್ಲ ಎಂದು ಮಾಜಿ ಸಂಸದ ಮುನಿಯಪ್ಪರ ಕಾಲೆಳೆದರು. 

ಅಲ್ಲದೆ ಇನ್ನೊಂದು ತಿಂಗಳಲ್ಲಿ ಟೇಕಲ್​ ಮೇಲ್ಸೇತುವೆ ಕಾಮಗಾರಿ, ಬಂಗಾರಪೇಟೆ ನಿಲ್ದಾಣದಲ್ಲಿ ರೈಲ್ವೇ ಎಕ್ಸೋವೇಟರ್​ ಕಾಮಗಾರಿ, ಸೇರಿದಂತೆ ಅಂಡರ್​ಪಾಸ್​ ರಿಪೇರಿ ಕೆಲಸ ಆರಂಭಿಸುವುದು ಸೇರಿದಂತೆ ಬಹು ನಿರೀಕ್ಷಿತ ಕೋಲಾರ-ವೈಟ್​ ಪಿಲ್ಡ್​ ನೂತನ ರೈಲ್ವೇ ಲೈನ್​ ಕಾಮಗಾರಿ ಸರ್ವೇ ಕಾರ್ಯ ಆರಂಭಿಸುವುದಾಗಿ ಹೇಳಿದ್ರು.

 ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಾಕಿ ಇರುವ ರೈಲ್ವೇ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಆದಷ್ಟು ಬೇಗ ಮಾಡಿ ಮುಗಿಸಬೇಕು ಅನ್ನೋದು ಜಿಲ್ಲೆಯ ಜನರ ಇಂಗಿತವಾಗಿದ್ದು, ಈ ನಡುವೆ ಅಧಿಕಾರಿಗಳ ಭೇಟಿ ನಿಜಕ್ಕೂ ಜನರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ..