ಶೀಘ್ರ ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ವೆಂಕಟೇಶ್‌ ಭೇಟಿ: ಚಂದ್ರಪ್ಪ

ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಘೋಷಣೆಯಾಗಿದ್ದು, ಶೀಘ್ರ ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕರಾದ ಎಚ್‌.ವಿ.ವೆಂಕಟೇಶ್‌ ಅವರನ್ನು ಭೇಟಿಯಾಗಿ ಚುನಾವಣೆಯ ಕುರಿತು ಚರ್ಚಿಸುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಹೇಳಿದರು.

Soon former Minister Venkataramanappa, MLA Venkatesh visit: Chandrappa snr

 ಪಾವಗಡ :  ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ ಘೋಷಣೆಯಾಗಿದ್ದು, ಶೀಘ್ರ ಪಾವಗಡದ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕರಾದ ಎಚ್‌.ವಿ.ವೆಂಕಟೇಶ್‌ ಅವರನ್ನು ಭೇಟಿಯಾಗಿ ಚುನಾವಣೆಯ ಕುರಿತು ಚರ್ಚಿಸುವುದಾಗಿ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಹೇಳಿದರು.

ಅವರು ಶುಕ್ರವಾರ ಇಲ್ಲಿನ ಸುದ್ದಿಗಾರರ ಜತೆ ಮಾತನಾಡಿ, ಎಲ್ಲರ ಸಹಕಾರದ ಮೇರೆಗೆ ಹೈಕಮಾಂಡ್‌ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ನನ್ನನು ಆಯ್ಕೆ ಮಾಡಿದ್ದು, ನಾಮಪತ್ರ ಸಲ್ಲಿಸುತ್ತೇನೆ. ಅಭ್ಯರ್ಥಿ ಆಯ್ಕೆಗೂ ಮುನ್ನ ಮಾಜಿ ಸಚಿವರಾದ ವೆಂಕಟರಮಣಪ್ಪ ಅವರು ಭೋವಿ ಸಮಾಜಕ್ಕೆ ಟಿಕೆಟ್‌ ನೀಡುವಂತೆ ಹಾಗೂ ಕಾಂಗ್ರೆಸ್‌ನಲ್ಲಿ ಬಿ.ಎನ್.ಚಂದ್ರಪ್ಪರಿಗೆ ಟಿಕೆಟ್‌ ನೀಡಿದರೆ ಚುನಾವಣೆಯಲ್ಲಿ ನಮ್ಮ ಸಮ್ಮತಿ ಇಲ್ಲ ಎಂದು ಹೇಳಿದ್ದು ಗಮನಿಸಿದ್ದೇನೆ. ಮಾಜಿ ಸಚಿವರು ಆ ರೀತಿ ಏಕೆ ಹೇಳಿದ್ದಾರೋ ಅರ್ಥವಾಗುತ್ತಿಲ್ಲ. ನಾನೇನು ಅಂತಾ ತಪ್ಪು ಮಾಡಿಲ್ಲ. ಕಾರಣ ಈ ಹಿಂದೆ ಈ ಭಾಗದ ಸಂಸದರಾಗಿದ್ದ ವೇಳೆ ಅವರ ಸಲಹೆ ಸೂಚನೆಗಳಂತೆ ನಡೆದಿದ್ದೇನೆ. ಇಲ್ಲಿನ ಪ್ರತಿ ಚುನಾವಣೆ ಯಲ್ಲೂ ಅವರ ಜತೆ ಕೆಲಸ ಮಾಡಿದ್ದೇನೆ. ಅವರ ಆದೇಶ ಪಾಲಿಸಿದ್ದೇನೆ. ಮುಂದೆಯೂ ಅವರ ಮಾರ್ಗದರ್ಶನವನ್ನೆ ಅನುಸರಿಸುತ್ತೇನೆ. ಮಾಜಿ ಸಚಿವ ವೆಂಕಟರಮಣಪ್ಪ ಅವರ ಪುತ್ರ, ಶಾಸಕರಾದ ಎಚ್‌.ವಿ.ವೆಂಕಟೇಶ್‌ ಅವರ ಜತೆಯೂ ಚೆನ್ನಾಗಿದ್ದೇನೆ. ಶೀಘ್ರ ಭೇಟಿ ನೀಡಿ, ತಾಲೂಕಿನ ಹನುಮಂತನಹಳ್ಳಿಯ ತೋಟದ ನಿವಾಸಕ್ಕೆ ತೆರಳಿ ಚರ್ಚಿಸಿ, ಮನವಿ ಮಾಡುವುದಾಗಿ ತಿಳಿಸಿದರು.

ನಾಮಪತ್ರ ಸಲ್ಲಿಸಿದ ಬಳಿಕ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಇಲ್ಲಿನ ಸ್ಥಳೀಯ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ತಾಲೂಕಿನದ್ಯಂತ ಚುನಾವಣಾ ಪ್ರಚಾರ ಕೈಗೊಳ್ಳುವುದಾಗಿ ಹೇಳಿದರು.

Latest Videos
Follow Us:
Download App:
  • android
  • ios