ಕೆ.ಆರ್‌ .ಪೇಟೆ (ಸೆ.03):  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ನಾಯಕರು ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ತರಬೇತುದಾರ ಡಾ. ಹರ್ಷವರ್ಧನ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ತಾಲೂಕು ಕಾಂಗ್ರೆಸ್‌ನಿಂದ ಜಿಲ್ಲೆಯಲ್ಲಿಯೇ ಪ್ರಪಥಮವಾಗಿ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಕ್ಷದ ಮುಖಂಡರು ಮತ್ತು ಅಭಿಮಾನಿಗಳ ಸಭೆಯಲ್ಲಿ ಕೊರೋನಾ ವಾರಿಯರ್ಸ್‌ಗಳಾಗಿ ಸ್ವಯಂ ಸೇವೆಗೆ ನೊಂದಾಯಿಸಿಕೊಂಡ ಕಾರ್ಯಕರ್ತರಿಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಆರೋಗ್ಯ ಹಸ್ತಕ್ಕೆ ಚಾಲನೆ ನೀಡಿದರು.

ಗಲಭೆ ನಡೆದಿದ್ದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಸಿದ್ದರಾಮಯ್ಯ ರೌಂಡ್ಸ್: ಬಳಿಕ ಹೇಳಿದ್ದು ಹೀಗೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಇಬ್ಬರೂ ಸೇರಿ ರೂಪಿಸಿರುವ ಕಾರ್ಯಕ್ರಮ ಇದಾಗಿದೆ. ಪ್ರತಿಹಳ್ಳಯಲ್ಲಿಯೂ ನಮ್ಮ ಪಕ್ಷದ ಕೊರೋನಾ ವಾರಿಯರ್ಸ್‌ಗಳು ಇಲ್ಲಿ ಪಡೆದ ತರಬೇತಿಯ ಮೂಲಕ ಜನಸಾಮಾನ್ಯರ ಮನೆ ಮನೆಗಳಿಗೆ ತೆರಳಿ ಕೊರೋನಾದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು. ಪಕ್ಷದ ವತಿಯಿಂದ ನೀಡಲಾಗಿರುವ ಆರೋಗ್ಯ ಕಿಚ್‌ ಮೂಲಕ ಜನರ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಅಗತ್ಯ ನೆರವು ನೀಡುವ ಮೂಲಕ ಧೈರ್ಯತುಂಬುವ ಕೆಲಸ ಮಾಡಲಿದ್ದಾರೆ ಎಂದರು.

ಮಾಜಿ ಶಾಸಕ ಪುಟ್ಟೇಗೌಡ ಮಾತನಾಡಿ, ಕೊರೋನಾ ವೇಳೆ ಸಂಕಷ್ಟಕ್ಕೆ ಒಳಗಾಗಿರುವವರ ಕಷ್ಟಸುಖಗಳಿಗೆ ಸ್ಪಂದಿಸುುವ ಕೆಲಸ ಮಾಡಬೇಕು. ಪಕ್ಷದ ಕಾರ್ಯಕರ್ತರು ಸಮಾಜಸೇವಕರಾಗಿ ತಮ್ಮ ಸುತ್ತ ಮುತ್ತಲ ಪ್ರತಿಮನೆಗೂ ಹೋಗಿ ಕೋರೋನಾದಿಂದ ಸಂರಕ್ಷಣೆ ಪಡೆಯುವ ವಿಧಾನದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.