ಕೊರೋನಾ ಸೋಂಕಿಗೆ ತಾಯಿ  ಬಲಿ - ಮಗನಿಗೆ ಹೃದಯಾಘಾತ ಮಂಡ್ಯ ಪಟ್ಟಣದಲ್ಲಿ ದುರ್ಘಟನೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಮಹಿಳೆ

ಮಂಡ್ಯ (ಮೇ.12): ಕೊರೋನಾ ಸೋಂಕಿಗೊಳಗಾಗಿ ತಾಯಿ ಮೃತಪಟ್ಟಿದ್ದರೆ, ಮತ್ತೊಂದೆಡೆ ಸೋಂಕಿಗೊಳಗಾದ ತಾಯಿಯ ಬಗ್ಗೆ ಯೋಚಿಸುತ್ತಾ ಊಟ ಬಿಟ್ಟಿದ್ದ ಮಗ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾಗಿರುವ ಮನ ಕಲಕುವ ಘಟನೆ ನಗರದಲ್ಲಿ ನಡೆದಿದೆ.

ಮಂಡ್ಯ ಸುಭಾಷ್‌ನಗರದ ನಿವಾಸಿ ಸುಜಾತಾ ಅವರಿಗೆ ಸೋಂಕು ಉಲ್ಬಣಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದರು. 

ಕೊರೋನಾ ತುರ್ತು ಚಿಕಿತ್ಸೆಗಾಗಿ 'ಆಕ್ಸಿಬಸ್'ಗೆ ಸಿಎಂ ಬಿಎಸ್‌ವೈ ಚಾಲನೆ ...

ಇತ್ತ ತಾಯಿಗೆ ಸೋಂಕು ದೃಢ ಬೆನ್ನಲ್ಲೇ ಮಾನಸಿಕವಾಗಿ ಕುಗ್ಗಿ ಹೋಗಿದ್ದ ರಮೇಶ್‌, ಊಟವನ್ನು ಬಿಟ್ಟಿದ್ದರು. ತಾಯಿ ಸಾವಿಗೀಡಾದ ಕೆಲವು ಕ್ಷಣಗಳ ಅಂತರದಲ್ಲೇ ರಮೇಶ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona