ಸೋಮೇಶ್ವರ ನೈತಿಕ ಪೊಲೀಸ್ ಗಿರಿ ಬೆನ್ನಲ್ಲೇ ಇಂದು ಮಂಗಳೂರಿಗೆ ಗೃಹ ಸಚಿವ ಭೇಟಿ!
ನೈತಿಕ ಪೊಲೀಸ್‌ಗಿರಿ ಘಟನೆ ಬೆನ್ನಲ್ಲೇ ಗೃಹ ಸಚಿವರು ಮಂಗಳೂರು ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಸಭೆಯಲ್ಲಿ ಮಂಗಳೂರು ಕಮಿಷನರೇಟ್ ಹಾಗೂ ಪಶ್ಚಿಮ ವಲಯ ಅಧಿಕಾರಿಗಳ ಜೊತೆ ಚರ್ಚಿಸುವ ಸಾದ್ಯತೆ.
ಉಡುಪಿ/ಮಂಗಳೂರು (ಜೂ.6) ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ ಮಂಗಳವಾರ ದ.ಕ. ಹಾಗೂ ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮಂಗಳವಾರ ಬೆಳಗ್ಗೆ 8.35ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, 8.45ಕ್ಕೆ ನಗರದ ಸಕ್ರ್ಯೂಟ್ ಹೌಸ್‌ಗೆ ತೆರಳುವರು. 10 ಗಂಟೆಗೆ ಪೊಲೀಸ್ ಪಶ್ಚಿಮ ವಲಯ ಕಚೇರಿ ಭೇಟಿ ಮತ್ತು ವಲಯ ಪರಿಶೀಲನಾ ಸಭೆ ನಡೆಸುವರು. ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು. 12.30ಕ್ಕೆ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ಮತ್ತು ಪರಿಶೀಲನಾ ಸಭೆ ನಡೆಸುವರು. ನಂತರ ಮಧ್ಯಾಹ್ನ 1.30ಕ್ಕೆ ನಗರದ ಸಕ್ರ್ಯೂಟ್ ಹೌಸ್‌ಗೆ ತೆರಳಿ ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಉಡುಪಿಗೆ ಪ್ರಯಾಣಿಸುವರು.
ಮಧ್ಯಾಹ್ನ 3 ಗಂಟೆಗೆ ಆಗಮಿಸಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಸಂಜೆ 5.30ಕ್ಕೆ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಬಳಿಕ ಸಂಜೆ 6 ಗಂಟೆಗೆ ಕೊಲ್ಲೂರಿಗೆ ತೆರಳಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಗೆ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಭಾಗವಹಿಸಿ ಮಂಗಳೂರಿಗೆ ತೆರಳಲಿದ್ದಾರೆ. ಬುಧವಾರ ಸಂಜೆ 4.25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಹೊರಟು 5.25ಕ್ಕೆ ಬೆಂಗಳೂರಿಗೆ ವಾಪಸ್.
ಉಳ್ಳಾಲ ಪೊಲೀಸರ ಹಿಂದೂ ವಿರೋಧಿ ನೀತಿಗೆ ಸೂಕ್ತ ಉತ್ತರ: ಪುತ್ತಿಲ ಎಚ್ಚರಿಕೆ
ನೈತಿಕ ಪೊಲೀಸ್ ಗಿರಿ ಘಟನೆ; ಮಹತ್ವ ಪಡೆದ ಭೇಟಿ
ನೈತಿಕ ಪೊಲೀಸ್‌ಗಿರಿ ಘಟನೆ ಬೆನ್ನಲ್ಲೇ ಗೃಹ ಸಚಿವರು ಮಂಗಳೂರು ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಸಭೆಯಲ್ಲಿ ಮಂಗಳೂರು ಕಮಿಷನರೇಟ್ ಹಾಗೂ ಪಶ್ಚಿಮ ವಲಯ ಅಧಿಕಾರಿಗಳ ಜೊತೆ ಚರ್ಚಿಸುವ ಸಾದ್ಯತೆ. ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಕಮಿಷನರೇಟ್ ಅಧಿಕಾರಿಗಳ ಜೊತೆ ಸಭೆ. ಪಶ್ಚಿಮ ವಲಯದ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಜೊತೆಗೂ ಸಭೆ. ಈ ಸಭೆಯಲ್ಲಿ ದ.ಕ ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆಗಳ ಮಾಹಿತಿ ಪಡೆಯುವ ಸಾಧ್ಯತೆ. ಅಲ್ಲದೆ ಬಿಜೆಪಿ ಅವಧಿಯಲ್ಲಿ ನಡೆದ ಕೋಮು ಹತ್ಯೆಗಳ ಮಾಹಿತಿ ಪಡೆಯುವ ಸಾಧ್ಯತೆ. ಈಗಾಗಲೇ ಫಾಜಿಲ್, ಜಲೀಲ್, ಮಸೂದ್ ಹತ್ಯೆ ಮರು ತನಿಖೆಗೆ ಒತ್ತಾಯ ಕೇಳಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುಟುಂಬಸ್ಥರಿಂದ ಸಲ್ಲಿಕೆಯಾಗಿರೋ ಮನವಿ. ಮನವಿ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜೊತೆ ಗೃಹ ಸಚಿವರ ಸಭೆ. ನೈತಿಕ ಪೊಲೀಸ್ ಗಿರಿ ಕಡಿವಾಣ ಹಾಕುವ ನಿಟ್ಟಿನಲ್ಲೂ ಸೂಚನೆ ಕೊಡೋ ಸಾಧ್ಯತೆ.
ಅನೈತಿಕ ಪೊಲೀಸ್ ಗಿರಿ: ಪೊಲೀಸ್ ದೌರ್ಜನ್ಯ ಆರೋಪದ ತನಿಖೆಗೆ ಆದೇಶ
ಮಂಗಳೂರು : ಸೋಮೇಶ್ವರ ಬೀಚ್ ನಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣದ ಸಂತ್ರಸ್ತ ಯುವಕರ ಮೇಲೆ ಪೊಲೀಸ್ ದೌರ್ಜನ್ಯ ಎಸಗಲಾಗಿದೆ ಎಂಬ ದೂರನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.
ಕೆಲ ದಿನಗಳ ಹಿಂದೆ ಸೋಮೇಶ್ವರ ಬೀಚ್‌ನಲ್ಲಿ ಮೂವರು ಯುವತಿಯರು ಹಾಗೂ ಮೂವರು ಯುವಕರು ಇದ್ದಾಗ ಕೆಲ ಸ್ಥಳೀಯ ಯುವಕರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿತ್ತು. ಹಲ್ಲೆ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸಂಘ ಪರಿವಾರಕ್ಕೆ ಪರ್ಯಾಯವಾಗಿ 'ಪುತ್ತಿಲ ಪರಿವಾರ' ಅಸ್ತಿತ್ವಕ್ಕೆ, ಆರೆಸ್ಸೆಸ್ ವಿರುದ್ಧವೇ ಪುತ್ತಿಲ ಅಚ್ಚರಿಯ ನಡೆ!
ಇದೀಗ ಸಂತ್ರಸ್ತ ಯುವಕರ ಮೇಲೆ ಪೊಲೀಸರೇ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಅವರಿಗೆ ಸಂತ್ರಸ್ತ ಯುವಕನ ಸಂಬಂಧಿ ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್, ಕಾನೂನು ಸುವ್ಯವಸ್ಥೆ ಡಿಸಿಪಿ ಅಂನ್ಶುಕುಮಾರ್ ಅವರಿಗೆ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರಿಂದ ತಪ್ಪು ಕಂಡು ಬಂದಲ್ಲಿ ಶಿಸ್ತು ಕ್ರಮದ ಭರವಸೆಯನ್ನು ಕಮಿಷನರ್ ನೀಡಿದ್ದಾರೆ.