ಅನ್ನದಾತರ ಸಮಸ್ಯೆಗೆ ಪರಿಹಾರ ನೀಡಿ: ನಾರಾಯಣಗೌಡ
ಪ್ರಮಾಣ ಪತ್ರ ತಮಗೆಲ್ಲ ಒಂದು ದೊಡ್ಡ ಆಸ್ತಿ. ಇದು ತಮ್ಮ ವ್ಯವಹಾರಿಕ ಜೀವನದಲ್ಲಿ ಉತ್ತಮ ರೀತಿಯಲ್ಲಿ ಉಪಯೋಗವಾಗಲಿ. ಈ ದೇಸಿ ಡಿಪ್ಲೊಮಾ ಕೋರ್ಸ್‌ನಿಂದ ಕೃಷಿ ಕುರಿತು ಪಡೆದ ವೈಜ್ಞಾನಿಕ, ತಂತ್ರಜ್ಞಾನ ಮಾಹಿತಿಯಿಂದ ಕೆವಿಕೆ ಮತ್ತು ಕೃಷಿ ಇಲಾಖೆಗಳ ಜೊತೆಗೂಡಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಭಾಗಿಯಾಗಿ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶ ಕೆ. ನಾರಾಯಣಗೌಡ ತಿಳಿಸಿದರು.
ತಿಪಟೂರು : ಪ್ರಮಾಣ ಪತ್ರ ತಮಗೆಲ್ಲ ಒಂದು ದೊಡ್ಡ ಆಸ್ತಿ. ಇದು ತಮ್ಮ ವ್ಯವಹಾರಿಕ ಜೀವನದಲ್ಲಿ ಉತ್ತಮ ರೀತಿಯಲ್ಲಿ ಉಪಯೋಗವಾಗಲಿ. ಈ ದೇಸಿ ಡಿಪ್ಲೊಮಾ ಕೋರ್ಸ್‌ನಿಂದ ಕೃಷಿ ಕುರಿತು ಪಡೆದ ವೈಜ್ಞಾನಿಕ, ತಂತ್ರಜ್ಞಾನ ಮಾಹಿತಿಯಿಂದ ಕೆವಿಕೆ ಮತ್ತು ಕೃಷಿ ಇಲಾಖೆಗಳ ಜೊತೆಗೂಡಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಭಾಗಿಯಾಗಿ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶ ಕೆ. ನಾರಾಯಣಗೌಡ ತಿಳಿಸಿದರು.
ತಾಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಪರಿಕರಗಳ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಪದವಿ ಪ್ರಮಾಣ ಪತ್ರಗಳ ವಿತರಣಾ ಸಮಾರಂಭ ಹಾಗೂ 8ನೇ ತಂಡದÜ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಸಿ ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಡಾ.ಬಿ.ಕಲ್ಪನ ಮಾತನಾಡಿ, ಈ ದೇಸಿ ಡಿಪ್ಲೊಮಾ ಕೋರ್ಸ್‌ನಿಂದ ಕೃಷಿ ಪರಿಕರ ಮಾರಾಟಗಾರರಿಗೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ನಡುವೆ ಉತ್ತಮ ಸಂಪರ್ಕದ ಸೇತುವೆ ನಿರ್ಮಾಣವಾಗಿದೆ. ತರಬೇತಿಯಲ್ಲಿ ಪಡೆದ ಮಾಹಿತಿಯಿಂದ ರೈತರ ಸಮಸ್ಯೆಗೆ ಪರಿಹಾರ ನೀಡಲು ಮತ್ತು ರೈತರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗಲಿದೆ ಎಂದು ನೂತನ ತಂಡದ ವಿದ್ಯಾರ್ಥಿಗಳು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿಸಿದರು.
ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ವಿ.ಗೋವಿಂದಗೌಡ ಮಾತನಾಡಿ, ಕೃಷಿ ಸಮುದಾಯಕ್ಕೆ ನಿಕಟ ಸಂಪರ್ಕದಲ್ಲಿರುವ ಕೃಷಿ ಪರಿಕರ ಮಾರಾಟಗಾರರಿಗೆ ವೈಜ್ಞಾನಿಕ ಕೃಷಿ ತಂತ್ರಜ್ಞಾನ, ನೂತನ ತಾಂತ್ರಿಕ ಮಾಹಿತಿ, ಕೃಷಿ ಸಂಬಂಧಿತ ಮಾಹಿತಿಯ ಬಗ್ಗೆ ತರಬೇತಿ, ಪ್ರಾತ್ಯಕ್ಷಿಕೆ, ಶೈಕ್ಷಣಿಕ ಪ್ರವಾಸಗಳ ಮೂಲಕ ಅಧ್ಯಯನವನ್ನು ಒಂದು ವರ್ಷ ಅವಧಿಯ ಡಿಪ್ಲೊಮಾ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ನೀಡಲಾಗಿತು. ಸೇವಾ ಮನೋಭಾವ ಬೆಳೆಸಿಕೊಂಡು ಉತ್ತಮ ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ರೂಪುಗೊಳ್ಳಬೇಕು. ಕೆವಿಕೆಯ ಎಲ್ಲ ಕೃಷಿ ವಿಜ್ಞಾನಿಗಳ ಜೊತೆ ಸತತ ಸಂಪರ್ಕದಲ್ಲಿದ್ದು ಉತ್ತಮ ಸಲಹೆ ಸೂಚನೆಗಳನ್ನು ರೈತರಿಗೆ ತಲುಪಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಎಚ್. ಚನ್ನಕೇಶವಮೂರ್ತಿ, ಕೆವಿಕೆಯ ವಿಜ್ಞಾನಿಗಳಾದ ಡಾ. ದರ್ಶನ್, ಡಾ. ನಿತ್ಯಶ್ರೀ, ಡಾ. ಸತೀಶ, ಡಾ.ಪದ್ಮನಾಭನ್, ತಡಸೂರಿನ ಯೋಗನಾಂದಮೂರ್ತಿ, ದೇಸಿ ಡಿಪ್ಲೊಮಾ ಕೋರ್ಸ್‌ನ ಅನುವುಗಾರ ಶ್ರೀಧರಮೂರ್ತಿ ಮತ್ತಿತರರಿದ್ದರು.
ಹಿಂದೆ ಕೃಷಿ ಪರಿಕರಗಳ ಮಾರಾಟಗಾರರು ಕೃಷಿಯ ತಿಳುವಳಿಕೆಯಿಲ್ಲದೆ 3-4 ಕೀಟನಾಶಕಗಳ ಅಥವಾ ರೋಗನಾಶಕಗಳನ್ನು ರೈತರಿಗೆ ನೀಡಿ, ಉತ್ಪಾದನಾ ವೆಚ್ಚ ಜಾಸ್ತಿ ಮಾಡುತ್ತಿದ್ದರು. ಆದರೆ ಈ ಡಿಪ್ಲೊಮಾ ಕೋರ್ಸ್‌ನಿಂದ ಕೃಷಿಯ ಪೂರ್ಣ ಜ್ಞಾನ ಪಡೆದು ರೈತರಿಗೆ ನಿರ್ದಿಷ್ಟವಾದ ರೋಗನಾಶಕ ಅಥವಾ ಕೀಟನಾಶಕಗಳನ್ನು ಕೊಟ್ಟು ರೈತರ ಖರ್ಚು ಕಡಿಮೆ ಮಾಡುವ್ಯದಲ್ಲದೆ, ರೈತರಿಗೆ ಸಮರ್ಗ ಮಾಹಿತಿ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಕೆ.ಎಚ್.ರವಿ ತುಮಕೂರು ಜಂಟಿ ಕೃಷಿ ನಿರ್ದೇಶಕ