ಗೋಕಾಕ[ಫೆ.03]:  ಚಂಡೀಗಢದಲ್ಲಿ ಸೇವೆ ಸಲ್ಲಿಸುತ್ತಿದ್ದ ಗೋಕಾಕ ಮೂಲದ ಯೋಧರೊಬ್ಬರು ಅಪಘಾತದಲ್ಲಿ ಮೃತಪಟ್ಟಘಟನೆ ಶನಿವಾರ ನಡೆದಿದೆ. 66 ಆಮ್‌ರ್‍ಡ್‌ ರೆಜಿಮೆಂಟ್‌ನಲ್ಲಿದ್ದ ಭಾರತೀಯ ಭೂಸೇನೆಯ ಯೋಧ ರವಿಕುಮಾರ ಬಾಳಪ್ಪ ಬಬಲೆನ್ನವರ (27) ಮೃತಪಟ್ಟವರು.

ಜ. 31ರಂದು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರನ್ನು ಚಂಡೀಗಡದ ಮಿಲಿಟರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಚಿಕಿತ್ಸೆ ಫಲಿಸದೇ ಫೆ.1ರಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ

ಯೋಧನ ಪಾರ್ಥಿವ ಶರೀರ ಸೋಮವಾರ ಗೋಕಾಕ ನಗರಕ್ಕೆ ಆಗಮಿಸಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧನ ಅಂತ್ಯಸಂಸ್ಕಾರ ಜರುಗಲಿದೆ. ಮೃತ ಯೋಧನಿಗೆ ತಂದೆ-ತಾಯಿ, ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರು ಇದ್ದಾರೆ.