ಗೋಕಾಕ: ಮದುವೆಗೆಂದು ಸ್ವಗ್ರಾಮಕ್ಕೆ ಬರುತ್ತಿದ್ದ ಯೋಧ ಸಾವು

ಮೃತ ಯೋಧನ ಪಾರ್ಥಿವ ಶರೀರ ಗ್ರಾಮದ ವಿವಿಧೆಡೆ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಯೋಧರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Soldier Dies who Coming to his Village for Marriage at Gokak in Belagavi grg

ಗೋಕಾಕ(ಜೂ.11): ಮದುವೆಗೆಂದು ಸ್ವಗ್ರಾಮಕ್ಕೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದ ಯೋಧನ ಅಂತ್ಯಕ್ರಿಯೆ ಶನಿವಾರ ಜರುಗಿದೆ. ತಾಲೂಕಿನ ಕನಸಗೇರಿ ಗ್ರಾಮದ ಯೋಧ ಕಾಶಿನಾಥ ಶಿಂಧಿಗಾರ(28) ಮೃತನಾಗಿದ್ದು, ಕಳೆದ 8 ವರ್ಷಗಳಿಂದ ಭಾರತೀಯ ಸೇನೆಯ ಮರಾಠಾ ಇನ್‌ಫೆಂಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ತನ್ನ ಮದುವೆಗೆ ಪಂಜಾಬ್‌ನಿಂದ ಸ್ವಗ್ರಾಮಕ್ಕೆ ಬರುವಾಗ ದುರ್ಘಟನೆ ನಡೆದಿದೆ. ಯೋಧನ ಸಾವಿನಿಂದ ಸ್ವಗ್ರಾಮ ಕನಸಗೇರಿಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಮೃತ ಯೋಧನ ಪಾರ್ಥಿವ ಶರೀರ ಗ್ರಾಮದ ವಿವಿಧೆಡೆ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಯೋಧರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

'ಶಕ್ತಿ' ಯೋಜನೆ ಲೋಕಾರ್ಪಣೆ, ಈ ಯೋಜನೆ ದೇಶಕ್ಕೇ ಮಾದರಿ : ಸತೀಶ್ ಜಾರಕಿಹೊಳಿ

ಸಂತಾಪ ಸೂಚಿಸಿದ ಶಾಸಕ ರಮೇಶ:

ಕನಸಗೇರಿ ಗ್ರಾಮದ ಯೋಧ ಕಾಶಿನಾಥ ಶಿಂಧಿಗಾರ ಸಾವಿನ ಸುದ್ದಿ ತಾಲೂಕಿನ ಜನರಲ್ಲಿ ಶೋಕದ ಛಾಯೆ ನಿರ್ಮಿಸಿದೆ. ಮದುವೆಗೆ ಆಗಮಿಸುತ್ತಿದ್ದ ಯೋಧನ ಅಗಲಿಕೆಯಿಂದ ಕುಟುಂಬಸ್ಥರಿಗೆ ಅತೀವ ದುಃಖ ಉಂಟಾಗಿದೆ. ಯೋಧನ ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಶಾಸಕ ರಮೇಶ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.

Latest Videos
Follow Us:
Download App:
  • android
  • ios