Asianet Suvarna News Asianet Suvarna News

ಸೊಲ್ಲಾಪುರ ಈರುಳ್ಳಿ ಹುಬ್ಬಳ್ಳಿಗೆ ಆಗಮನ: ದರದಲ್ಲಿ ಏರುಪೇರಾಗುವ ಸಾಧ್ಯತೆ

ವಿಜಯಪುರ ಹಾಗೂ ರಾಯಚೂರು ಎಪಿಎಂಸಿಗೆ ಶನಿವಾರ ಸೊಲ್ಲಾಪುರದಿಂದ ಈರುಳ್ಳಿ ಆಗಮಿಸಿತ್ತು| ಈ ಹಿನ್ನೆಲೆಯಲ್ಲಿ ಅಲ್ಲಿ ಈರುಳ್ಳಿ ಬೆಲೆ ಕುಸಿದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು| ಸೊಲ್ಲಾಪುರದಲ್ಲಿ ಕ್ವಿಂಟಲ್‌ಗೆ 5-6 ಸಾವಿರ ಇದ್ದು, ಅಲ್ಲಿನ ರೈತರು ಕರ್ನಾಟಕಕ್ಕೆ ಈರುಳ್ಳಿ ತರುತ್ತಿದ್ದಾರೆ| ಇಲ್ಲಿ 8-9 ಸಾವಿರಕ್ಕೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೂ ಸೋಮವಾರ ಈರುಳ್ಳಿ ಬರಬಹುದು| 

Solapur Onion May Come to Hubballi
Author
Bengaluru, First Published Dec 9, 2019, 7:27 AM IST

ಹುಬ್ಬಳ್ಳಿ(ಡಿ.09): ಇಲ್ಲಿನ ಜಗಜ್ಯೋತಿ ಬಸವೇಶ್ವರ ಎಪಿಎಂಸಿಗೆ ಸೋಮವಾರ ಸೊಲ್ಲಾಪುರದಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಆಗಮಿಸುವ ನಿರೀಕ್ಷೆಯಿದ್ದು, ಬೆಲೆಯಲ್ಲಿ ಗಣನೀಯ ಏರುಪೇರಾಗುವ ಸಾಧ್ಯತೆ ಇದೆ.

ವಿಜಯಪುರ ಹಾಗೂ ರಾಯಚೂರು ಎಪಿಎಂಸಿಗೆ ಶನಿವಾರ ಸೊಲ್ಲಾಪುರದಿಂದ ಈರುಳ್ಳಿ ಆಗಮಿಸಿದ ಹಿನ್ನೆಲೆಯಲ್ಲಿ ಅಲ್ಲಿ ಈರುಳ್ಳಿ ಬೆಲೆ ಕುಸಿದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಲ್ಲಾಪುರದಲ್ಲಿ ಕ್ವಿಂಟಲ್‌ಗೆ 5-6 ಸಾವಿರ ಇದ್ದು, ಅಲ್ಲಿನ ರೈತರು ಕರ್ನಾಟಕಕ್ಕೆ ಈರುಳ್ಳಿ ತರುತ್ತಿದ್ದಾರೆ. ಇಲ್ಲಿ 8-9 ಸಾವಿರಕ್ಕೆ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೂ ಸೋಮವಾರ ಈರುಳ್ಳಿ ಬರಬಹುದು ಎಂಬುದು ಎಪಿಎಂಸಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೀಗಾದಲ್ಲಿ ಸ್ಥಳೀಯ ಈರುಳ್ಳಿ 10 ಸಾವಿರದಿಂದ 7-8 ಸಾವಿರಕ್ಕೆ ಕುಸಿಯಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ. ಸದ್ಯ ದಿನಕ್ಕೆ 2 ಸಾವಿರ ಕ್ವಿಂಟಲ್‌ ಸ್ಥಳೀಯ ಈರುಳ್ಳಿ ಅವಕವಾಗುತ್ತಿದ್ದು, 1 ಸಾವಿರ ಕನಿಷ್ಠ ಬೆಲೆಯಿಂದ ಗರಿಷ್ಠ 12 ಸಾವಿರದ ವರೆಗೆ ಬಿಕರಿಯಾಗುತ್ತಿದೆ.
 

Follow Us:
Download App:
  • android
  • ios