ರಾಸಲೀಲೆ ಸೀಡಿ ಹಿಂದಿ​ನ ಮ​ಹಾನ್‌ ನಾಯ​ಕ ಯಾರು..?

ರಾಜ್ಯದಲ್ಲಿ ಭಾರೀ ಸದ್ದು ಮಾಡಿದ  ಸೀಡಿ ವಿಚಾರ ಹೊಸ ತಿರುವುಗಳನ್ನು ತೆಗೆದುಕೊಂಡು ಸಾಗುತ್ತಲೇ ಇತ್ತು. ಇದೀಗ  ದಿನೇಶ್ ಕಲ್ಲಹಳ್ಳಿ ಮತ್ತೊಂದು ರೀತಿಯ ಹೇಳಿಕೆ ನೀಡುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ. 

Social Activist Dinesh Kallahalli unhappy On CD Row snr

 ರಾಮ​ನ​ಗರ (ಮಾ.11):  ಮಾಜಿ ಸಚಿವರ ರಾಸ​ಲೀಲೆ ಪ್ರಕ​ರ​ಣದ ಹಿಂದೆ ಯಾವ ನಾಯಕ, ಮಹಾನ್‌ ನಾಯ​ಕರು ಇದ್ದಾ​ರೊ ನನಗೆ ಗೊತ್ತಿಲ್ಲ. ದೂರು ನೀಡಿ​ದಾ​ಕ್ಷ​ಣಕ್ಕೆ ನನ್ನೇ ತಪ್ಪಿ​ತ​ಸ್ಥನ ಸಾಲಿ​ನಲ್ಲಿ ನಿಲ್ಲಿ​ಸ​ಲಾ​ಗು​ತ್ತಿದೆ ಎಂದು ಸಾಮಾ​ಜಿಕ ಹೋರಾ​ಟ​ಗಾರ ದಿನೇಶ್‌ ಕಲ್ಲ​ಹಳ್ಳಿ ಬೇಸರ ವ್ಯಕ್ತಪಡಿಸಿದರು.

ಕನ​ಕಪುರ ತಾಲೂಕು ಕಲ್ಲ​ಹಳ್ಳಿ​ಯಲ್ಲಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ, ದೂರು ನೀಡಿದ ಕಾರ​ಣಕ್ಕೆ ನನ್ನ ಮೇಲೆ 5 ಕೋಟಿ ರು. ಡೀಲ್‌ ಆರೋಪ ಮಾಡ​ಲಾ​ಗಿದೆ. ದಾಖ​ಲೆ​ಗಳ ಸಮೇತ ಆರೋಪ ಸಾಬೀತು ಪಡಿ​ಸಿ​ದ ಕ್ಷಣ​ದಲ್ಲೇ, ನೀಡುವ ಶಿಕ್ಷೆ ಪಡೆಯಲು ಸಿದ್ಧನಿರುವೆ ಎಂದರು.

ನಾನು ಯಾವುದೇ ಒತ್ತ​ಡಕ್ಕೆ ಮಣಿ​ದು ದೂರನ್ನು ಹಿಂಪ​ಡೆದಿಲ್ಲ. ದೂರು ವಾಪಸ್‌ ಪಡೆ​ಯು​ವಾಗ ಪೊಲೀ​ಸರು ಕಾರಣ ಕೇಳಿಲ್ಲ. ದೂರು ಹಿಂಪ​ಡೆ​ಯಲು ಕಾರ​ಣ​ವಾದ ಅಂಶ​ಗ​ಳನ್ನು ಐದು ಪುಟ​ಗಳ ಪತ್ರ​ಗ​ಳಲ್ಲಿ ವಿವ​ರ​ವಾಗಿ ತಿಳಿ​ಸಿ​ದ್ದೇನೆ. ಮತ್ತೆ ವಿಚಾ​ರ​ಣೆಗೆ ಕರೆ​ದರೆ ಖಂಡಿ​ತ​ವಾ​ಗಿಯೂ ಹೋಗು​ತ್ತೇನೆ. ದೂರಿ​ನಿಂದ ಹಿಂದೆ ಸರಿ​ದಾ​ಕ್ಷ​ಣಕ್ಕೆ ಪ್ರಕ​ರ​ಣ ಮುಚ್ಚಿ ಹೋಗು​ವು​ದಿಲ್ಲ ಎಂದರು.

ಅಷ್ಟಕ್ಕೂ ದಿನೇಶ್ ಕಲ್ಲಹಳ್ಳಿಗೆ ಎಲ್ಲಿಂದ ಒತ್ತಡ ಬಂದಿತ್ತು? ..

ಸುಮೊಟೊ ಪ್ರಕ​ರಣ ದಾಖ​ಲಿ​ಸಿ​ಕೊಂಡು ತನಿಖೆ ಮುಂದು​ವ​ರೆ​ಸು​ವುದು ತನಿ​ಖಾ​ಧಿ​ಕಾ​ರಿ​ಗಳ ವಿವೇ​ಚ​ನೆಗೆ ಬಿಟ್ಟಿದ್ದು, ದೂರು ನೀಡಿದ ದಿನ​ದಿಂದ ನನಗೆ ಗೊತ್ತಿ​ರುಷ್ಟುಮಾಹಿ​ತಿ​ಯನ್ನು ಪೊಲೀ​ಸ​ರಿಗೆ ನೀಡಿ​ದ್ದೇನೆ ಎಂದು ತಿಳಿ​ಸಿ​ದರು.

ಮಾಧ್ಯ​ಮ​ಗ​ಳಲ್ಲಿ ನನ್ನ ವಿರು​ದ್ಧ​ವೇ ಷಡ್ಯಂತ್ರ ಮಾಡ​ಲಾ​ಗುತ್ತಿದ್ದು, ಹೋರಾಟ ಮಾಡು​ವುದೇ ತಪ್ಪು ಎನ್ನು​ವಂತೆ ಬಿಂಬಿ​ಸ​ಲಾ​ಗುತ್ತಿದೆ. ಗುರು​ತರ ಆರೋ​ಪ​ಗ​ಳಿಂದ ಮುಕ್ತ​ನಾ​ಗಲು ಕಾನೂನು ಹೋರಾಟ ನಡೆ​ಸ​ಬೇ​ಕಿದೆ. ಹಾಗಾಗಿ ಈ ಪ್ರಕ​ರ​ಣ​ದಿಂದ ಹಿಂದೆ ಸರಿ​ದಿ​ದ್ದೇನೆ. ಕೆಲವರು ಬಾಯಿ ತೇವ​ಲಿಗೆ ಮಾತ​ನಾ​ಡು​ತ್ತಾರೆ. ತೆವ​ಲಿಗೆ ಮಾತ​ನಾ​ಡು​ವುದು ಒಂದಾ​ಗಿ​ದ್ದರೆ, ವಾಸ್ತ​ವಾಂಶವೇ ಬೇರೆಯಾಗಿದೆ. ದಾಖ​ಲಾತಿ ಮುಂದಿ​ಟ್ಟು​ಕೊಂಡು ನನ್ನ ಮೇಲಿನ ಆರೋ​ಪ​ಗಳು ಸಾಬೀ​ತು ಪಡಿ​ಸಲಿ ಎಂದು ಮಾಜಿ ಸಿಎಂ ಕುಮಾ​ರ​ಸ್ವಾಮಿಗೆ ಪರೋಕ್ಷ​ವಾಗಿ ಸವಾಲು ಹಾಕಿ​ದರು.

Latest Videos
Follow Us:
Download App:
  • android
  • ios