ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ 6 ಮಹಾಮಾರಿ ಕೊರೋನಾ ಪಾಸಿಟಿವ್
ಒಂದೇ ದಿನ 6 ಕೊರೋನಾ ಪ್ರಕರಣಗಳು ಪತ್ತೆ|ಗಂಗಾವತಿ ಮತ್ತು ಡಣಾಪುರ ಗ್ರಾಮದಲ್ಲಿ ಕೊರೋನಾ ಪಾಸಿಟಿವ್| ಸೋಂಕಿತ ವ್ಯಕ್ತಿಯ ನಿವಾಸ ಸುತ್ತಲ ಪ್ರದೇಶ ಸೀಲ್‌ಡೌನ್| ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 31 ಜನರನ್ನು ಗುರುತಿಸಿ ಕ್ವಾರಂಟೈನ್|
ಕೊಪ್ಪಳ(ಜೂ.10): ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 6 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕನಕಗಿರಿಯ 50 ವರ್ಷದ ಪುರುಷ, ಗಂಗಾವತಿಯ ಡಾಣಾಪುರದ 60 ವರ್ಷದ ಪುರುಷ, ಕಾರಟಗಿ ತಿಮ್ಮಾಪುರದ 23 ವರ್ಷದ ಮಹಿಳೆ, ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ 60 ವರ್ಷದ ಪುರುಷ, ಕಾರಟಗಿಯ 45 ವರ್ಷದ ಮಹಿಳೆ ಹಾಗೂ ಗಂಗಾವತಿಯ 18 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ.
ಗಂಗಾವತಿ ಮತ್ತು ಡಣಾಪುರ ಗ್ರಾಮದಲ್ಲಿ ಕೊರೋನಾ ಪಾಜಿಟಿವ್ ಬಂದ ವ್ಯಕ್ತಿಯ ನಿವಾಸ ಸುತ್ತಲ ಪ್ರದೇಶ ಸೀಲ್‌ಡೌನ್ ಮಾಡಲಾಗಿದೆ.
ಕೊಪ್ಪಳ: ಜೂ.30ರ ವರೆಗೂ ಹುಲಿಗೆಮ್ಮ ದೇವಿಯ ದರ್ಶನ ಭಾಗ್ಯ ಇಲ್ಲ
ಗಂಗಾವತಿಯ ಉಪ್ಪಾರ ಓಣಿ, ಒಡೆಯರ ಓಣಿ, ರಾಯರ ಓಣಿ ಪ್ರದೇಶದಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 31 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತ ಪ್ರಕರಣಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, 4 ಜನರು ಗುಣಮುಖರಾಗಿದ್ದಾರೆ.