ವಿಜಯಪುರ[ಡಿ.14]: ವೀರಶೈವ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ರೇ ರಾಜಕೀಯದಲ್ಲಿ ಮಾಜಿಗಳಾಗ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ವಿರುದ್ಧ ಜೇವರ್ಗಿಯ ಆಂದೋಲ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಿಡಿ ಕಾರಿದ್ದಾರೆ.

"

ಶನಿವಾರ ಜಿಲ್ಲೆಯ ಆಲಮೇಲ ಹೀರೆಮಠದ ಚಂದ್ರಶೇಖರ ಶಿವಾಚಾರ್ಯ ದ್ವಾದಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಮಠ ಮಾನ್ಯಗಳಿಗೆ ನಂಬುತ್ತಾರೆ ಅವರು ಸಚಿವ ಮತ್ತು ಮುಖ್ಯಮಂತ್ರಿಗಳಾಗ್ತಾರೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಾರು ಧರ್ಮ ಒಡೆಯಲು ಹೋಗುತ್ತಾರೋ ಅಂತವರು ಮಾಜಿಗಳು ಆಗುತ್ತಾರೆ ಎಂದು ಹೇಳುವ ಮತ್ತೇ ಲಿಂಗಾಯತ ಹೋರಾಟಕ್ಕೆ ಆಂದೋಲ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಿಚ್ಚು ಹಚ್ಚಿದ್ದಾರೆ. 

ಮಾಜಿ ಸಿಎಂ ಸಿದ್ದಾರಾಮಯ್ಯ ಆಡಳಿತದ ಅವಧಿಯಲ್ಲಿ ಅವರು ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದರು. ಅಂದು ಸಚಿವರಾಗಿದ್ದ ವಿಜಯಪುರ ಜಿಲ್ಲೆಯ ಬಬಲೇಶ್ವ ರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ ಹಾಗೂ ಧಾರವಾಡ ಕ್ಷೇತ್ರದ ಶಾಸಕರಾಗಿದ್ದ ವಿನಯ್ ಕುಲಕರ್ಣಿ ಅವರು ಪ್ರತ್ಯೇಕ್ ಧರ್ಮದ ವಿಚಾರದಲ್ಲಿ ಬಹಳ ಮುಂಚೂಣಿಯಲ್ಲಿದ್ದರು. ಹೀಗಾಗಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಇವರ ವಿರುದ್ಧ ಕಿಡಿ ಕಾರಿದ್ದಾರೆ.