ಬಾದಾಮಿಯಲ್ಲಿ ಸಿದ್ದು: ಈ ಬಾರಿ ಜನತೆಗೆ ಗೋಡಂಬಿಯೋ ಶೇಂಗಾನೋ?

ಸ್ವಕ್ಷೇತ್ರ ಬಾದಾಮಿಗೆ ಸಿದ್ದರಾಮಯ್ಯ ಪ್ರವಾಸ! ಮೂರನೇ ಬಾರಿ ಬಾದಾಮಿಗೆ ಬರುತ್ತಿರುವ ಸಿದ್ದು! ಸಿದ್ದು ಬರುವಿಕೆಗೆ ಕಾದು ಕುಳಿತ ಬಾದಾಮಿ ಜನತೆ! ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಸಿ ಬಿಸಿ ಚರ್ಚೆ
 

Siddaramaiah to visit Badami today

ಬಾದಾಮಿ(ಆ.9): ಮಾಜಿ ಸಿಎಂ  ಸಿದ್ದರಾಮಯ್ಯ ಇಂದು ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಶಾಸಕರಾದ ಬಳಿಕ 3ನೇ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದ ಜನತೆ ಅದ್ದೂರಿ ಸ್ವಾಗತ ನೀಡಲು ಕಾದು ಕುಳಿತಿದ್ದಾರೆ. 

ಬೆಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ವಿಮಾನದ ಮೂಲಕ ಹೊರಟು ಹುಬ್ಬಳ್ಳಿ ಗೆ ಬೆಳಗ್ಗೆ 9 ಕ್ಕೆ ಆಗಮಿಸಿರುವ ಸಿದ್ದು, ಹುಬ್ಬಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಬಾದಾಮಿ ಮತಕ್ಷೇತ್ರಕ್ಕೆ 11 ಗಂಟೆಗೆ ತಲುಪಲಿದ್ದಾರೆ ಎಂಬ ನಿರೀಕ್ಷೆ ಇದೆ.

ಸ್ಥಳೀಯ ಸಂಸ್ಥೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಬಾದಾಮಿ ಭೇಟಿ ಮಹತ್ವ ಪಡೆದುಕೊಂಡಿದೆ. ಅದರಂತೆ ಬೆಳಗ್ಗೆ 11 ಕ್ಕೆ ಗುಳೇದಗುಡ್ಡ, ಮಧ್ಯಾಹ್ನ 2ಕ್ಕೆ ಕೆರೂರು, ಸಂಜೆ 5 ಕ್ಕೆ ಬಾದಾಮಿ ಪಟ್ಟಣದಲ್ಲಿ ನಡೆಯುವ ಮುಖಂಡರ ಹಾಗೂ ಕಾರ್ಯಕತ೯ರೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

Latest Videos
Follow Us:
Download App:
  • android
  • ios