ಚಾಮರಾಜನಗರ(ಫೆ.07): ಪಕ್ಷದ್ರೋಹ ಮಾಡಿದವರಿಗೆ ಇವೆಲ್ಲಾ ಆಗಬೇಕಾಗುತ್ತೆ ಎಂದು ಸಚಿವ ಸ್ಥಾನ ಸಿಗದ ಎಚ್‌.ವಿಶ್ವನಾಥ್‌ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿಯಾಡಿದ್ದಾರೆ.

ಸುದ್ದಿಗಾರೊಂದಿಗೆ ಅವರು ಮಾತನಾಡಿ, ಮನುಷ್ಯ ದುರಾಸೆ ಇಟ್ಟುಕೊಂಡರೇ ನಿರಾಸೆ ಆಗೇ ಆಗಲಿದೆ ಎಂದು ಹಳ್ಳಿಹಕ್ಕಿಗೆ ಕುಟುಕಿದರು. ಇನ್ನು, ರಾಜ್ಯ ಸರ್ಕಾರ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದು ಕೇಂದ್ರ ಸರ್ಕಾರ ಯಾವುದೇ ಅನುದಾನ ನೀಡುತ್ತಿಲ್ಲ, ನಮ್ಮ ಸರ್ಕಾರದಲ್ಲಿದ್ದಂತೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ, ರಾಜ್ಯದ ಪಾಲಿನ ಹಣ, ನರೇಗಾ ಅನುದಾನ ಬಿಡುಗಡೆ ಮಾಡಿಲ್ಲ. ಯಡಿಯೂರಪ್ಪ ಸರ್ಕಾರ ಕೇವಲ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

70ನೇ ವರ್ಷದೊಳಗೆ ಒಮ್ಮೆಯಾದ್ರೂ ಸಿಎಂ ಆಗ್ತೀನಿ: ಕತ್ತಿ

ದೇಗುಲ ಉದ್ಘಾಟನೆಗೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಸಹಾಯಕನಿಂದ ಶೂ ಹಾಕಿಸಿಕೊಂಡ ಪ್ರಸಂಗ ಗುರುವಾರ ತಾಲೂಕಿನ ನಲ್ಲೂರು ಮೋಳೆ ಗ್ರಾಮದಲ್ಲಿ ನಡೆಯಿತು. ಚಾಮರಾಜನಗರ ತಾಲೂಕಿನ ನಲ್ಲೂರು ಮೋಳೆಯಲ್ಲಿ ಮಲ್ಲಿಗಮ್ಮ ದೇಗುಲ ಉದ್ಘಾಟನೆ ಹಾಗೂ ರಾಜಗೋಪುರ ಉದ್ಘಾಟನೆ ವೇಳೆ ದೇಗುಲ ಉದ್ಘಾಟಿಸಲು ದೇಗುಲಕ್ಕೆ ತೆರಳುವಾಗ ಸಿದ್ದು ಕಾಲಿನಿಂದ ಶೂ ಬಿಚ್ಚಿ ಹೋಗಿದ್ದರು. ದೇಗುಲ ಉದ್ಘಾಟನೆ ಮುಗಿದ ನಂತರ ದೇಗುಲದಿಂದ ಹೊರಗೆ ಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲಿಗೆ ಆಪ್ತಸಹಾಯಕ ಶೂ ಹಾಕಿಸಿಕೊಂಡರು.