ಬೆಂಗಳೂರು (ಜ.31):   84 ದಿನಗಳಿಂದ ಟೊಯೋಟಾ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ನಾನು ಇವತ್ತು ಅವರ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದಿದ್ದೇನೆ.  ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

ಇಂದು ಬಿಡದಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜವಾಬ್ದಾರಿ ಇದು ಲಾಕ್ ಔಟ್ ಆದಾಗ ಕಾರ್ಮಿಕರ ಪರ ಸರಕಾರ ನಿಲ್ಲಬೇಕಿತ್ತು.  ಸರಕಾರ ಬೇಜವಾಬ್ದಾರಿತನದಿಂದ ಕಾರ್ಮಿಕರು ಇಷ್ಟು ದಿನ ಹೋರಾಟ ಮಾಡಬೇಕಾಗಿದೆ.

ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ದೇಶ ಒಡೆಯುತ್ತಿದೆ: ಸಿದ್ದರಾಮಯ್ಯ . 

ಸರಕಾರ ಹಾಗೂ ಕಾರ್ಮಿಕ ಇಲಾಖೆ ಇರೋದು ಏಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಸಿಎಂ ಹಾಗೂ ಸಚಿವರು ಯಾಕೆ ಇದ್ದಾರೆ.  ಆಡಳಿತ ಮಂಡಳಿಯವರನ್ನ ಒಂದಲ್ಲ ಎರಡು ಭಾರಿ ಕರೆದು ಮಾತನಾಡಬೇಕು.  ಕಾನೂನು ಇದೆ ಅಲ್ಲಿ ಹೋಗಿ ಎಂದು ಸಚಿವರು ಹೇಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು.