ಮತದಾರರ ಪಟ್ಟಿ ಅಕ್ರಮ: ಬೆಂಗಳೂರು ಉಸ್ತುವಾರಿ ಸಿಎಂಗೆ ಜವಾಬ್ದಾರಿ ಇಲ್ವಾ?: ಸಿದ್ದು

ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಅಮಾನತ್ತಾಗಿದ್ದ ಐಎಎಸ್‌ ಅಧಿಕಾರಿಗಳನ್ನು ಸರ್ಕಾರ ಮರುನೇಮಕ ಮಾಡುವಂತಹ ಅಗತ್ಯ ಇರಲಿಲ್ಲ: ಸಿದ್ದರಾಮಯ್ಯ 

Siddaramaiah Slams CM Basavaraj Bommai grg

ತುಮಕೂರು(ಡಿ25): ಮತದಾರರ ಪಟ್ಟಿ ಅಕ್ರಮ ಪ್ರಕರಣದಲ್ಲಿ ಅಮಾನತ್ತಾಗಿದ್ದ ಐಎಎಸ್‌ ಅಧಿಕಾರಿಗಳನ್ನು ಸರ್ಕಾರ ಮರುನೇಮಕ ಮಾಡುವಂತಹ ಅಗತ್ಯ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪ್ರಕಾರ ಬೆಂಗಳೂರು ಕಾರ್ಪೊರೇಷನ್‌ ಕೂಡಾ ಶಾಮೀಲಾಗಿದೆ. ಬೆಂಗಳೂರು ಉಸ್ತುವಾರಿ ಮತ್ತು ಮುಖ್ಯಮಂತ್ರಿಗೆ ಜವಾಬ್ದಾರಿ ಇಲ್ವಾ?. ಬರೀ ಅಧಿಕಾರಿಗಳಷ್ಟೇನಾ ಜವಾಬ್ದಾರಿ. ಎಲೆಕ್ಷನ್‌ ಕಮಿಷನ್‌ ಅವರೆ ಸಸ್ಪೆಂಡ್‌ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ಡೈರೆಕ್ಷನ್‌ ಕೊಟ್ಟಿತ್ತು. ತಕ್ಷಣ ಅವರನ್ನ ರಿವೋಪ್‌ ಮಾಡೋದು ಸರಿಯಲ್ಲ ಎಂದರು.

ಎಸ್‌ಸಿಗೆ 15 ರಿಂದ 17 ಹಾಗೂ ಎಸ್‌ಟಿಗೆ 3 ರಿಂದ 7 ಸೇರಿ ಒಟ್ಟು ಶೇ.6 ಮೀಸಲಾತಿ ಹೆಚ್ಚಳ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕರ್ನಾಟಕದಲ್ಲಿ ಈಗಾಗಲೇ 50% ರಿಸರ್ವೇಶನ್‌ ಇದ್ದು 56% ಮಾಡಬೇಕು ಅಂದರೆ ಆಗುವುದಿಲ್ಲ. ಶೇ.50 ಕ್ಕಿಂತ ಹೆಚ್ಚಿಗೆ ಮೀಸಲಾತಿ ಮಾಡಬಾರದು ಅಂತ ರೂಲ್ಸ್‌ ಇದೆ. 9ನೇ ಶಡ್ಯೂಲ್‌ನಲ್ಲಿ ಸೇರಿಸಬೇಕು, ಅದು ಮಾಡಿಲ್ಲ. ಡಬಲ್‌ ಇಂಜಿನ್‌ ಮೊದಲು ಅದನ್ನು ಮಾಡಿಸಿಕೊಂಡು ಬರಬೇಕು ಎಂದರು.

ನಾನು ಶಾಸಕನಾಗಿ ಗೆದ್ದು ಬರುವೆ : ಜೆಡಿಎಸ್ ನಾಯಕರ ವಿಶ್ವಾಸ

ಇದು ಕೇವಲ ಕಣ್ಣೊರೆಸುವ ತಂತ್ರ, ಚುನಾವಣೆಗೋಸ್ಕರ ಮಾಡಿರುವ ಗಿಮಿಕ್‌. ಮಿಲ್ಲರ್‌ ಆಯೋಗ ವರದಿ ವಿರೋಧ ಮಾಡಿದವರು ಯಾರು. ಮಂಡಲ್‌ ಕಮಿಷನ್‌ ಕಮಿಟಿ ವಿರೋಧ ಮಾಡಿದವರಾರು. ಹಾಗೆಯೇ ಕಮಂಡಲ್‌ ಯಾತ್ರೆ ವಿರೋಧ ಮಾಡಿದವರು ಯಾರು, ರಾಮಜನ್ಮ ಭೂಮಿ ಹುಟ್ಟು ಹಾಕಿದವರು ಯಾರು. ಪಂಚಮಸಾಲಿಗೆ 2ಎ ಘೋಷಣೆ ಮಾಡುವ ವಿಚಾರ ನನಗೆ ಗೊತ್ತಿಲ್ಲ. ಅದನ್ನು ನ್ಯಾಯಾಲಯಕ್ಕೆ ರೆಫರ್‌ ಮಾಡಿದ್ದಾರೆ. ಅದರ ವರದಿ ಬರಬೇಕಲ್ವಾ ಎಂದು ಪ್ರಶ್ನಿಸಿದರು.

ಕೆ.ಎನ್‌. ರಾಜಣ್ಣ ಅವರು ಮಧುಗಿರಿಯಲ್ಲಿ ಸ್ಪರ್ಧಿಸುವಂತೆ ಪ್ರೀತಿಯಿಂದ ಆಹ್ವಾನ ಕೊಟ್ಟಿದ್ದಾರೆ. ನಾನು ಕೂಡ ಪ್ರೀತಿಯಿಂದ ಕೇಳಿದಿನಿ. ಆದರೆ ನಾನು ಮಧುಗಿರಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios