'2000 ಕೋಟಿ ನೀಡುವಂತೆ ಸಿಎಂಗೆ ಸಿದ್ದರಾಮಯ್ಯ ಪತ್ರ'

ಸ್ವಕ್ಷೇತ್ರ ಅಭಿವೃದ್ಧಿ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ| ವಿಶೇಷವಾಗಿ ಮತಕ್ಷೇತ್ರದ ನೀರಾವರಿ, ಪ್ರವಾಸೋಧ್ಯಮ ಅಭಿವೃದ್ಧಿ, ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡುವ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿಗೆ ಪತ್ರದ ಮೂಲಕ ಗಮನಸೆಳೆದ ಸಿದ್ದರಾಮಯ್ಯ| 

Siddaramaiah Letter to CM BS Yediyurappa for Badami Develoment grg

ಬಾಗಲಕೋಟೆ(ಫೆ.22): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರವಾದ ಬಾದಾಮಿ ವ್ಯಾಪ್ತಿಯ ಅಭಿವೃದ್ಧಿಗೆ ಬರುವ ಬಜೆಟ್‌ನಲ್ಲಿ 2000 ಕೋಟಿಯಷ್ಟು ಬೇಡಿಕೆಯುಳ್ಳ ವಿವಿಧ ಯೋಜನೆಗಳ ಪಟ್ಟಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಗಮನಸೆಳೆದಿದ್ದಾರೆ.

ವಿಶೇಷವಾಗಿ ಮತಕ್ಷೇತ್ರದ ನೀರಾವರಿ, ಪ್ರವಾಸೋಧ್ಯಮ ಅಭಿವೃದ್ಧಿ, ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದ ಬಲವರ್ಧನೆಗೆ ಆದ್ಯತೆ ನೀಡುವ ಯೋಜನೆಗಳಿಗೆ ಆರ್ಥಿಕ ನೆರವು ನೀಡಲು ಮುಖ್ಯಮಂತ್ರಿಗೆ ಪತ್ರದ ಮೂಲಕ ಗಮನಸೆಳೆದಿದ್ದಾರೆ. ಮಾ.4ರಿಂದ ಆರಂಭಗೊಳ್ಳಲಿರುವ ಬಜೆಟ್‌ ಅ​ಧಿವೇಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಬೇಕು ಎಂದು ಕೋರಿದ್ದಾರೆ.

ಕೋಟಿ ಬೆಲೆ ಬಾಳುವ ಜಮೀನು ಕೊಡ್ತೀನಿ, ಮಿನಿ ರಾಮ ಮಂದಿರ ಕಟ್ಟಿ ತೋರಿಸಿ: ಸಿದ್ದುಗೆ ಸವಾಲ್

ಏತ ನೀರಾವರಿಗೆ 525 ಕೋಟಿ :

ಬಾದಾಮಿ ತಾಲೂಕಿನ ಕೆರೂರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಸಕ್ತ 2021-22ನೇ ಸಾಲಿನ ಬಜೆಟ್‌ನಲ್ಲಿ 525 ಕೋಟಿ ಅನುದಾನವನ್ನು ಮೀಸಲಿಡಬೇಕೆಂದು ಕೋರಿರುವ ಅವರು ಬಾದಾಮಿ ಕ್ಷೇತ್ರದಲ್ಲಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಹಾಗೂ ಕೆರೆತುಂಬಿಸುವ ಯೋಜನೆ ಅನುಷ್ಠಾನಗೊಳಿಸಲು ಪ್ರಸಕ್ತ ಬಜೆಟ್‌ನಲ್ಲಿ 90 ಕೋಟಿ ಅನುದಾನವನ್ನು ಘೋಷಿಸಬೇಕೆಂದು ಕೇಳಿಕೊಂಡಿದ್ದಾರೆ. ಗುಳೇದಗುಡ್ಡ ನಗರದಲ್ಲಿ ಕೈಗಾರಿಕಾ ಕೇಂದ್ರ ಸ್ಥಾಪಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸುವುದು. ಬಾದಾಮಿ ನಗರಕ್ಕೆ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವನ್ನು ಸ್ಥಾಪಿಸಲು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸುವುದು, ಗುಳೇದಗುಡ್ಡ ನಗರಕ್ಕೆ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜನ್ನು ಸ್ಥಾಪಿಸಲು ಪ್ರಸಕ್ತ ಬಜೆಟ್‌ನಲ್ಲಿ ಹಣ ನೀಡಬೇಕೆಂದು, ಬಾದಾಮಿ ಕ್ಷೇತ್ರದ ಬಾದಾಮಿ ನಗರಕ್ಕೆ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಿಸಬೇಕೆಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಬಾದಾಮಿ ಕ್ಷೇತ್ರದ ಗುಳೇದಗುಡ್ಡ ನಗರದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋದನಾ ಘಟಕವನ್ನು ಬಜೆಟ್‌ನಲ್ಲಿ ಘೋಷಿಸುವುದು, ಗುಳೇದಗುಡ್ಡ ನಗರಕ್ಕೆ ಜವಳಿ ಪಾರ್ಕ್ ಸ್ಥಾಪಿಸಲು ಪ್ರಸಕ್ತ ಬಜೆಟ್‌ನಲ್ಲಿ ಘೋಷಿಸಬೇಕೆಂದು ಹೇಳಿದ್ದಾರೆ.

ಪ್ರವಾಸಿ ತಾಣಗಳ ಅಭಿವೃದ್ಧಿಗೆ 1000 ಕೋಟಿ:

ಬಾದಾಮಿ, ಪಟ್ಟದಕಲ್ಲು, ಬನಶಂಕರಿ, ಮಹಾಕೂಟ ಐತಿಹಾಸಿಕ ಪ್ರವಾಸಿ ತಾಣಗಳ ಅಭಿವೃದ್ಧಿಗೆ 1000 ಕೋಟಿ ಅನುದಾನವನ್ನು ನೀಡುವುದು, ಬಾದಾಮಿ, ಮಹಾಕೂಟ, ಗುಳೇದಗುಡ್ಡ ಐತಿಹಾಸಿಕ ಪ್ರವಾಸಿ ತಾಣಗಳ ಟ್ರೀ ಪಾರ್ಕ್ ಸ್ಥಾಪಿಸಲು 100 ಕೋಟಿ ಅನುದಾನವನ್ನು ಕಲ್ಪಿಸುವುದು, ಬಾದಾಮಿ ಕ್ಷೇತ್ರದ ಬಾದಾಮಿ ನಗರಕ್ಕೆ ವಾಣಿಜ್ಯ ಬಹುಮಹಡಿ ಕಟ್ಟಡ ಸ್ಥಾಪಿಸಲು ಪ್ರಸಕ್ತ 2021-22ನೇ ಸಾಲಿನ ಬಜೆಟ್‌ನಲ್ಲಿ 25 ಕೋಟಿ ಅನುದಾನ ನೀಡಬೇಕು. ಬಾದಾಮಿ ಕ್ಷೇತ್ರದ ಚಾಲುಕ್ಯ ಅಭಿವೃದ್ಧಿ ಪ್ರಾಧಿ​ಕಾರದ ಕಾರ್ಯ ರೂಪಕ್ಕೆ ಪ್ರಸಕ್ತ ಬಜೆಟ್‌ನಲ್ಲಿ 25 ಕೋಟಿ ಅನುದಾನವನ್ನು ಘೋಷಿಸುವುದು, ಕೆರೂರು ನಗರಕ್ಕೆ ಸಿಟಿ ಸರ್ವೆ ಕಚೇರಿ ತೆರೆಯಲು ಪ್ರಸಕ್ತ 2021-22ನೆ ಸಾಲಿನ ಬಜೆಟ್‌ ನಲ್ಲಿ ಘೋಷಿಸುವುದು, ಬಾದಾಮಿ, ಗುಳೇದಗುಡ್ಡ, ಕೆರೂರು ನಗರಗಳಿಗೆ ತಲಾ ಒಂದು ಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ಬಜೆಟ್‌ ನಲ್ಲಿ ತಲಾ 3 ಕೋಟಿಗಳ ಅನುದಾನವನ್ನು ಘೋಷಿಸುವುದು, ಬಾದಾಮಿ ನಗರಕ್ಕೆ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವನ್ನು ಸ್ಥಾಪಿಸಲು ಪ್ರಸಕ್ತ 2021-22ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ನೀಡಬೇಕೆಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios