Tumakuru: ತ್ರಿವಿಧ ದಾಸೋಹಿ ಶಿವಕುಮಾರ ಶ್ರೀ ಜನ್ಮದಿನಕ್ಕೆ ಸಿದ್ಧಗಂಗೆ ಸಜ್ಜು

*  2 ವರ್ಷದ ಬಳಿಕ ಮೊದಲ ಬಾರಿಗೆ ಆಚರಣೆ
*  4 ಲಕ್ಷ ಜನ ಭಾಗಿ ನಿರೀಕ್ಷೆ
*  ತಿಂಡಿ, ಮಧ್ಯಾಹ್ನ- ರಾತ್ರಿ ಊಟಕ್ಕೆ 8 ಕಡೆ ಸಕಲ ವ್ಯವಸ್ಥೆ
 

Siddaganga Matha Prepare For Dr Shivakumar Swamiji Birth Anniversary in Tumakuru grg

ಉಗಮ ಶ್ರೀನಿವಾಸ್‌

ತುಮಕೂರು(ಏ.01):  ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ(Dr Shivakumar Swamiji) ಅವರ 115ನೇ ಜಯಂತ್ಯುತ್ಸವಕ್ಕೆ ಸಿದ್ಧಗಂಗಾ ಮಠ(Siddaganga Matha) ಸಜ್ಜಾಗಿದೆ. 2019ರ ಜನವರಿಯಲ್ಲಿ ಶ್ರೀಗಳು ಲಿಂಗೈಕ್ಯರಾಗಿದ್ದು, ಅದೇ ವರ್ಷ ಏಪ್ರಿಲ್‌ನಲ್ಲಿ ಅವರ ಹುಟ್ಟಿದ ಹಬ್ಬ ಆಚರಣೆಯನ್ನು ಶ್ರೀ ಮಠದ ಆವರಣದಲ್ಲಿ ಮಾಡಲಾಗಿತ್ತು. ಎರಡು ವರ್ಷಗಳ ಕಾಲ ಕೊರೋನಾ(Coronavirus) ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಜಯಂತಿಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಅದಾದ ಬಳಿಕ ಇದೇ ಮೊದಲ ಬಾರಿಗೆ ಶ್ರೀಗಳ ಜನ್ಮ​ದಿ​ನ​ವ​ನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಸೇರಿ​ದಂತೆ ಹಲವು ಗಣ್ಯರು ಈ ಬಾರಿ ಶ್ರೀಗಳ ಜನ್ಮ​ದಿನ(Birth Anniversary) ಕಾರ್ಯ​ಕ್ರ​ಮ​ದಲ್ಲಿ ಪಾಲ್ಗೊ​ಳ್ಳು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಈಗಾಗಲೇ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa), ಬಿಜೆಪಿ ರಾಜ್ಯ ಉಪಾ​ಧ್ಯಕ್ಷ ವಿಜಯೇಂದ್ರ ಸೇರಿ ಬಹುತೇಕ ಸಚಿವರು ಸಿದ್ಧಗಂಗೆಗೆ ಆಗಮಿಸಿ ಅಂತಿಮ ಹಂತದ ಪರಿಶೀಲನೆ ನಡೆಸಿದ್ದಾರೆ.

Tumakuru: ದ್ವೇಷ ನಿಲ್ಲಲಿ, ಭ್ರಾತೃತ್ವ ಹಬ್ಬಲಿ: ರಾಹುಲ್‌ ಗಾಂಧಿ

4 ಲಕ್ಷ ಭಕ್ತರ ಆಗಮನ ನಿರೀಕ್ಷೆ:

ಶ್ರೀಗಳ ಜಯಂತ್ಯೋತ್ಸವಕ್ಕೆ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಇದ​ಕ್ಕಾಗಿ ವಸ್ತುಪ್ರದರ್ಶನ ಮೈದಾನದ ಪಕ್ಕ ಬೃಹದಾಕಾರದ ವೇದಿಕೆ ನಿರ್ಮಿಸಲಾಗಿದೆ. ಈ ವೇದಿಕೆ ಮುಂಭಾಗ 10 ಸಾವಿರಕ್ಕೂ ಹೆಚ್ಚು ಮಂದಿಗೆ ಕೂರಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ಭಕ್ತರಿಗೂ(Devotees) ಊಟದ ವ್ಯವಸ್ಥೆ ಮಾಡಲಾಗಿದೆ.

8 ಕಡೆ ಊಟದ ವ್ಯವಸ್ಥೆ:

ರಾಜ್ಯದ(Karnataka) ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಶ್ರೀ ಮಠಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 8 ಕಡೆ ವ್ಯವಸ್ಥೆ ಮಾಡಲಾಗಿದೆ. ಮಠದ ಆವರಣದಲ್ಲಿರುವ ಹಳೇ ಊಟದ ಮನೆ, ಹೊಸ ಊಟದ ಮನೆ, ಪ್ರಾರ್ಥನಾ ಮಂದಿರ, ಕೆಂಪಹೊನ್ನಯ್ಯ ಅತಿಥಿ ಗೃಹ, ಸೌದೆ ಕೊಪ್ಪಲು, ಸಿದ್ದಾರ್ಥ ಅತಿಥಿ ಗೃಹ, ಉದ್ದಾನೇಶ್ವರ ಊಟದ(Food) ಮನೆ ಸೇರಿ ಎಂಟು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿಯೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಬಂಡೆಪಾಳ್ಯದ ಬಳಿ ಪಾರ್ಕಿಂಗ್‌ ವ್ಯವಸ್ಥೆ: ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಘಟನಾಘಟಿ ಮುಖಂಡರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಮಂದಿ ಬರುವ ನಿರೀಕ್ಷೆ ಹಿನ್ನೆ​ಲೆ​ಯಲ್ಲಿ ವಾಹನಗಳ ಪಾರ್ಕಿಂಗ್‌ಗಾಗಿ ಮಠದ ಬಂಡೇಪಾಳ್ಯದ 20 ಎಕರೆ ಜಾಗದಲ್ಲಿ ಬೃಹತ್‌ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್‌, ಕಾರು, ಬೈಕ್‌ ಸೇರಿ ಎಲ್ಲಾ ರೀತಿಯ ವಾಹನಗಳು ನಿಲ್ಲಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅವ್ಯವಸ್ಥೆ ಆಗದಂತೆ ವಿಶೇಷ ಗಮನ ನೀಡಲಾಗಿದೆ.

Tumakuru: ಶಿವಕುಮಾರ ಶ್ರೀಗಳಿಗೆ ಭಾರತರತ್ನಕ್ಕೆ ಶಿಫಾರಸು: ಸಿಎಂ ಬೊಮ್ಮಾಯಿ

ಒಂದೂವರೆ ಸಾವಿರ ಪೊಲೀಸರ ನಿಯೋಜನೆ:

ಕಾರ್ಯ​ಕ್ರ​ಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಭದ್ರತಾ ಲೋಪವಾಗದಂತೆ ಒಂದೂವರೆ ಸಾವಿರ ಪೊಲೀಸರನ್ನು(Police) ನಿಯೋಜಿಸಲಾಗಿದೆ. ತುಮಕೂರಿನ ಸಿದ್ಧಗಂಗಾ ಮಠ ಹಾಗೂ ತುಮಕೂರು ವಿವಿ-ಬಿ.ಎಚ್‌.ರಸ್ತೆಯಲ್ಲಿ ಪೊಲೀಸ್‌ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ತುಮಕೂರು ವಿವಿ ಹೆಲಿಪ್ಯಾಡ್‌ನಿಂದ ಸಿದ್ಧಗಂಗಾ ಮಠದವರೆಗೂ ಪೊಲೀಸ್‌ ಬಿಗಿ ಸರ್ಪಗಾವಲು ಹಾಕಲಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಲಾಗಿದೆ. ಚಿತ್ರದುರ್ಗ, ದಾವಣಗೆರೆ, ಹಾಸನ, ತುಮಕೂರು ಜಿಲ್ಲೆಯ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸ​ಲಾ​ಗಿ​ದೆ.

ಎಲ್ಲೆಲ್ಲೂ ಫ್ಲೆಕ್ಸ್‌ಗಳ ಭರಾಟೆ: 

ಶ್ರೀಗಳ ಜಯಂತ್ಯು​ತ್ಸವ ಅಂಗವಾಗಿ ತುಮಕೂರು ನಗರದ ತುಂಬೆಲ್ಲಾ ಫ್ಲೆಕ್ಸ್‌ಗಳ ಭರಾಟೆ ಜೋರಾಗಿದೆ. ಜಾಸ್‌ಟೋಲ್‌ ಗೇಟ್‌ನಿಂದ ತುಮಕೂರು ಗುಬ್ಬಿ ಗೇಟ್‌ವರೆಗೆ ಎಲ್ಲೆಡೆ ಫ್ಲೆಕ್ಸ್‌ಗಳು ರಾರಾಜಿಸುತ್ತಿದೆ. ಒಟ್ಟಾರೆ ಕೊರೋನಾ ನಂತರ 2 ವರ್ಷಗಳ ಬಳಿಕ ಶ್ರೀಗಳ 115ನೇ ಹುಟ್ಟು ಹಬ್ಬಕ್ಕೆ ತುಮಕೂರು ಸರ್ವ ರೀತಿಯಲ್ಲೂ ಸಜ್ಜಾಗಿದೆ.

ತಾಲೀಮು: 

ಜಯಂತ್ಯು​ತ್ಸ​ವಕ್ಕೆ ಅಮಿತ್‌ ಶಾ ಆಗಮನ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿ ತಾಲೀಮು ನಡೆಸಲಾಯಿತು. ಮೊದಲು ಕೇಂದ್ರ ಗೃಹ ಸಚಿವರು ತುಮಕೂರು ವಿವಿ ಹೆಲಿಪ್ಯಾಡ್‌ಗೆ ಬರಲಿದ್ದಾರೆ. ಅಲ್ಲಿಂದ ಕಾರಿನ ಮೂಲಕ ಸಿದ್ಧಗಂಗಾ ಮಠಕ್ಕೆ ಪ್ರಯಾಣ ಬೆಳೆಸುವ ಹಿನ್ನೆಲೆಯಲ್ಲಿ ಗುರುವಾರ ತಾಲೀಮು ನಡೆಸಲಾಯಿತು. ಪೊಲೀಸರು, ವಾಹನಗಳು, ಅಮಿತ್‌ ಶಾ ವಾಹನ, ಅಗ್ನಿಶಾಮಕ ದಳ, ಭದ್ರತಾ ಪಡೆ, ಆ್ಯಂಬು​ಲೆನ್ಸ್‌ ಒಳಗೊಂಡ ರಿಹರ್ಸಲ್‌ ನೆರವೇರಿಸಲಾಯಿತು.
 

Latest Videos
Follow Us:
Download App:
  • android
  • ios