ಬೆಂಗಳೂರು[ಸೆ.07]: ರಾಜಾಜಿನಗರ ಪೊಲೀಸರು ವ್ಯಕ್ತಿಯೊಬ್ಬನಿಗೆ ವಿನಾಕಾರಣ ಹಲ್ಲೆ ಮಾಡಿದ್ದಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗ ದಂಡ ವಿಧಿಸಿದೆ.

2015ರ ಎಪ್ರಿಲ್ 6 ರಂದು ರವಿಂದ್ರರಾಮನ್ ಎಂಬ ವ್ಯಕ್ತಿಯನ್ನು ವಿನಾ ಕಾರಣ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದರು. ಇದರ ವಿಚಾರಣೆಯನ್ನು ರಾಜ್ಯ ಮಾನವ ಹಕ್ಕು ಆಯೋಗ ನಡೆಸುತ್ತಿತ್ತು. ಇದೀಗ ರಾಜಾಜಿನಗರದ ಅಂದಿನ ಇನ್ಸ್ ಪೆಕ್ಟರ್ ರಮೇಶ್,  ಪಿಎಸ್ ಐ ಮಂಜು, ರಾಮಯ್ಯ ಹಾಗೂ ಸಿಬ್ಬಂದಿಗಳಾದ ರಾಮಯ್ಯ ರಮೇಶ್ ಎಂಬುವರಿಗೆ 1 ಲಕ್ಷ ರೂ. ದಂಡ ವಿಧಿಸಿದೆ. 

2015ರ ಎಪ್ರಿಲ್ 6 ರಂದು ರವೀಂದ್ರರಾಮನ್ ಎಂಬುವರನ್ನು ಠಾಣೆಗೆ ಕರೆತಂದು ಹಿಗ್ಗಾಮುಗ್ಗಾ ಥಳಿಸಿದ್ದರು. ಅಲ್ಲದೆ 10 ಸಾವಿರ ರೂ. ಪಡೆದು ಅವರನ್ನು ಬಿಟ್ಟುಕಳಿಸಿದ್ದರು. ಈ ಬಗ್ಗೆ ರವೀಂದ್ರರಾಮನ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರನ್ನು ನೀಡಿದ್ದರು. ಇದೀಗ ಪೊಲೀಸರಿಗೆ ದಂಡ ವಿಧಿಸಿ ಆದೇಶ
ಹೊರಡಿಸಿದೆ.